
ಮುಂದೆ ಇಡುವ ಅಡಿಯು ಜಾರಿ ಓಡಿ ಬರುವ ಗಾಡಿ ಹಾರಿ ತುಂಬಿತೇನೋ ಕೆಂಪು ರಂಗು ದಾರಿ ಹಾ ಬಿದ್ದ ಜೀವ ಉಸಿರ ಕಾರಿ ! ಬಾಳಿಗೆಲಿವ ಧ್ಯೇಯ ಬಲಿ ಆಯ್ತು ನಲಿವ ಹೊಸ ದೀಪ ನಂದಿ ಹೋಯ್ತು ಎಲುಬು ಮಾಂಸ ಸಿಡಿದು ಹೋಳಾಯ್ತು ತುಂಬಿ ಬೆಳೆದ ದೇಹ ತುಂಡಾಯ್ತು ! ಹರ...
ಅದಾವ ಲೀಲಾಜಾಲ ಮಾಯೆ ಮುಸುಕು! ಬಲೆಯೋ, ಭವಣೆಯೋ, ಬಣ್ಣ ಜೀವನ ವರ್ಣವೈಚಿತ್ರ್ಯವೋ ? ಕನಸು ನನಸಿನ ನೋಟ; ಮಿಂಚದಾ ಬದುಕು! ಇಹ-ಪರ ಪಾತಾಳಗಳ ಬಗೆಯು ಅರಿಯಲಸದಳವೋ ? ಭುವಿಯನೇ ಹೆತ್ತು, ನೀರು ಜೀವವ ಇತ್ತು ಅನಿಲ ಅನಲರ ತೆತ್ತು; ನಮ್ಮ ನಿತ್ತ ತಂದೆ ಇರ...
ಹುಲ್ಲೊಳು ಹಾವಾಗಿ, ಹಾವಿಗೆ ಹೆಡೆಯಾಗಿ ಹರಿಯುತಿದೆ ಚಲುವ ಗಂಗೆ! ಹಸುವಿಗೆ ಕರುವಾಗಿ ಮೊಲೆಗೆ ಹಾಲಾಗಿ ಕರೆಯುತಿದೆ ಸರ್ಗ ಗಂಗೆ! ಶಿವನ ಜಟದಿಂದ; ಹಿಮದ ಶೃಂಗದಿಂದ ಇಳಿಯುತಿದೆ ಸೊಗಸು ಇಳೆಗೆ. ನದಿಯ ನೋಟವು; ಓಡುವಾ ಚಲುವಿಂದ ನುಸುಳುತಿದೆ ಬಾಳ ಸವಿಗ...
ಅಡುಗೆ ರಸರುಚಿ ವಾಸನೆಯ ಮೋಹ ಸವಿಗೆ ಬಾಗದವನಾರು ಹೇಳು ? ಕುರಿಯ ಕಾವ ಕುರುಬನೀಂ; ಧರೆಯ ಕಾವ ರಾಜಗೆ ಪಕ್ವಾನ್ನ ನಾಕಕೆ ಅನ್ಯ ಕೀಳು ಮೊಸರನ್ನ ಸಂಡಿಗೆ ಉಪ್ಪಿನಕಾಯ ಲೀಲಾಂಮೃತಕೆ ಸಖ್ಯನಾಗದವನಾರು ಧೀರ ? ರಣರಂಗ ಕಲಿಯೇನು; ಕಾಳಗದ ಹುಲಿಯೇನಿದಕೆ ವಿಶ್...
ಕಾಲು ತಾಗಿದ ಮುಳ್ಳು ; ಮೈಯಲ್ಲ ಮುರಿಯುವದು | ಕಾಯ ತಾಗಿದ ಮುನಿಸು; ಮನವೆಲ್ಲ ಮೆಲ್ಲುವದು || ಇಂದಿಲ್ಲ ನಾಳಿಲ್ಲ ಎಂಬೊಂದು ಕುಂದಿಲ್ಲ | ಭವಹರನ ನೆನೆದೊಡೆ ಎಂದೆಂದು ಭಯವಿಲ್ಲ || ಹಾ ತಡೆ ತಡೆ ಓಡದಿರು; ನೋಡು ಮುಂದಿದೆ ತಗ್ಗು | ಓ ತಡೆ ತಡೆ ದುಡ...













