ಕವಿತೆಯ ಸಾಲುಗಳು

ರಕ್ತಗಂಪಿನ ಎಸಳುಗಳು ಈ ಕವಿತೆಯ ಸಾಲುಗಳು ಭೂತದ ಕೊಂಡಿ ಕಳಚದೇ ವರ್ತಮಾನದ ಕಾವಲಿಯಲಿ ಬೇಯಲಾರವು ಭವಿಷ್ಯ ಕಾಣಲಾರವು ಹೊಂಗನಸಿನ ಬಯಕೆಯೇ ಇಲ್ಲ ಇವುಗಳಿಗೆ ಕುಳಿತಿವೆ ಕತ್ತಲಿನೊಳಗೆ ಎಳೆದು ತರ ಬೇಕು ಬೆಳಕಿಗೆ ತೆರೆದುಕೊಳ್ಳಲಿರುವ ಹೊಸ...

ಕಾವ್ಯ ಬದುಕು

ಕವಿತೆಯೆಂದರೇ ವಿಸ್ಮಯ ಎಂದರು ಕೆಲವರು ಈ ಬದುಕು ಅದಕ್ಕಿಂತ ವಿಸ್ಮಯ ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಒಂದು ಪದವೋ ವಾಕ್ಯವೋ ಕೈ ಹಿಡಿದರೆ ಮಾತು ಬೆಳಕಾದರೆ ಒಂದು ಕವಿತೆ ಈ ಬದುಕೋ ಕ್ಷಣ ಬಿಡದಂತೆ ಕೈ...

ವಿಸ್ಮಯ

ನಿಶ್ಯಬ್ಧದ ಅಂತರಾಳದಲ್ಲಿ ನೆನಪಾಗುತ್ತವೆ ರಾತ್ರಿಯ ಏಕಾಂತದಲ್ಲಿ ಪಿಸುಗುಡುತ್ತವೆ. ಒಂಟಿತನದ ಬಯಕೆಯಲ್ಲಿ ಲಾಗ ಹಾಕುತ್ತವೆ. ಬಿದ್ದ ಬಾವಿಯಿಂದ ಮೇಲೆತ್ತಿ ತರಲು ನೀ ಎಸೆದ ಹಗ್ಗದ ಗುರುತು, ಹಿಡಿದೆತ್ತಿದ ಗುರುತು ಹಗ್ಗ ಎಸೆಯದೇ ನೀನು ಸುಮ್ಮನಿರಬಹುದಿತ್ತು ಉಳಿದವರಂತೆ...

ಅರಮನೆ

ಕುಂವೀ ಕಟ್ಟಿದರ ಮನೆಯಲ್ಲ ರಾಜರಾಜರ ದೊರೆ ಮನೆಯಲ್ಲ ಸುಗಂಧ ಬೀಸುವ ತಂಗಾಳಿಯಿಲ್ಲ ಚಾಮರ ವಿಕ್ಕುವ ದಾಸಿಯರಿಲ್ಲ ಇದು ಬಡವರ ನಿರ್ಗತಿಕರ ದಿಕ್ಕೆಟ್ಟವರ ಮನಸ್ಸಂತೆ, ಅವರವರಿಗದೇ ಅರಮನೆ ಯಂತೆ ಹಾಗೆ ಹೂವಿಗೆ ಕಾಯಿಗೆ ಗಿಡಕ್ಕೆ ಮರಕ್ಕೆ...

ಅಚ್ಚರಿ

ಈ ಭೂಮಿಗೆ ಚಿಗುರೊಡೆಯುವಾಸೆ ಭೂಕಂಪ ಕೊರೆದ ಬಿರುಕುಗಳಲ್ಲಿ ಹಸಿರರಳಿಸುವಾಸೆ ಸುನಾಮಿ ಕೊರೆದ ತೀರಗಳಲ್ಲಿ ಮರವಾಗುವಾಸೆ ಮತ್ತೆ ಮತ್ತೆ ಸೆಪ್ಟೆಂಬರುಗಳು ಬಂದರೂ ವಿಮಾನಗಳು ಢಿಕ್ಕಿ ಹೊಡೆದರೂ ಗಗನವ ಚುಂಬಿಸುವಾಸೆ ಮತ್ತೆ ಮತ್ತೆ ಕಟ್ಟುವಾಸೆ ನಿಲ್ಲದ ಬೆಳವಣಿಗೆಗೆ...

ನೀರು

ನೀರು ನಿಂತರೆ ನಾರುತ್ತದೆ ತೊಳೆಯಬೇಕು ತೊಟ್ಟಿ ಹರಿಸಬೇಕು ಹೊಸ ನೀರು ತೆಗೆಯಬೇಕು ಕಸಕಡ್ಡಿ ಎಲ್ಲಕ್ಕೂ ಮೊದಲು ನಿಂತ ನೀರನ್ನು ನಾರುವ ನೀರನ್ನು ನಿರ್ದಾಕ್ಷಿಣ್ಯವಾಗಿ ಹೊರ ಬಿಡಬೇಕು ಅದೇ ಕಷ್ಟ ಬದಲಾವಣೆ ನಿಸರ್ಗದ ನಿಯಮವಂತೆ ಹೇಳುತ್ತದೆ...

ದೇವಕಿ

ದೇವಕಿಯ ಮೇಲೊಂದು ಕತೆ ಬರೆಯಲು ಕುಳಿತೆ ಗರ್ಭದಲ್ಲಿ ಮಗು ಹೊತ್ತೂ ಹೊತ್ತೂ ಹೆರುವ ಗದ್ದಲದಲ್ಲಿಯೇ ಇದ್ದ ದೇವಕಿ ನಿನಗೆ ಕೇಳಿಸಲಿಲ್ಲವೆ ಆ ಕಂಸನ ಆರ್ಭಟ! ಜೊತೆ ಜೊತೆಗೇ ಶ್ರೀ ಕೃಷ್ಣನ ಅಳು, ಒಳ್ಳೆಯದರ ಜೊತೆ...

ಸುಳ್ಳು

ಎಷ್ಟೊಂದು ಸುಲಭ ಇದು ಸುಳ್ಳು ಹೇಳುವುದು ನಾನೇ ನಿನ್ನನ್ನು ಕರೆದು ನೀನೇ ಕರೆದೆ ಎನ್ನುವುದು. ಆಸೆ ತುಂಬಿಟ್ಟುಕೊಂಡು ಏನೂ ಬೇಡ ಎನ್ನುವುದು ಹಸಿವೆಗೆ ಬೇಯುತ್ತಾ ಉಂಡಂತೆ ನಟಿಸುವುದು, ಕೊನೆಗೆ ದಾಹವಾದರೂ ಉಗುಳು ನುಂಗುವುದು ಈ...

ಹುಚ್ಚು

ಇಂದೇಕೋ ಕವಿತೆ ಬರೆಯುವ ಹುಚ್ಚು ಒಳಗಿನದೆಲ್ಲ ಹೊರಬರಬಹುದೇ ಎಂಬ ನಚ್ಚು ಅವಿತಿಡಲಿ ಎಷ್ಟು ದಿನ ಜೀರ್ಣವಾಗದ ಈ ಅನ್ನ ಕಾಡುತ್ತದೆ ಒಳಗೊಳಗೇ ಹಿಂಡಿ ಜೀವವನ್ನ ಅತ್ತ ಅರಗುವುದೂ ಇಲ್ಲ. ರಕ್ತಗತ, ಇತ್ತ ಹೊರ ಬರುವುದೂ...

ಟಿಕೇಟು

ಮತ್ತದೇ ತಪ್ಪು ರೈಲು ಹೋದ ಮೇಲೆ ಬಂದ ಟಿಕೇಟು ಕಷ್ಟ ಈ ರೈಲು ಹತ್ತುವುದು ಇಳಿಯುವುದು ದಾರಿಯಲ್ಲಿ ಎದುರಾದವ ರಿಗೆಲ್ಲ ಸಲಾಮು ತಿಳಿಯದೇ ಯಾರ ಮರ್ಮ ಯೋಚಿಸುತ್ತ ನಿಂತೆ ನಿಂತ ಲ್ಲೇ ನೀರಾಗಿ ಹರಿದೆ...
cheap jordans|wholesale air max|wholesale jordans|wholesale jewelry|wholesale jerseys