ಹೂವಿನ ಸಂಕಲ್ಪ

ಒಂದು ಸುಂದರ ಬೆಳಗಲ್ಲಿ ಹೂ ಒಂದು ಸಂಕಲ್ಪ ಮಾಡಿತು. ಏನಾದರಾಗಲಿ ಇಂದು ಧ್ಯಾನದ ಪರಮ ಚರಮತೆ ಮುಟ್ಟಬೇಕೆಂದು. ಸುಖಾಸನದಲ್ಲಿ ಮಂದಸ್ಮಿತ ತಾಳಿ ಸುಮನ ಧ್ಯಾನಕ್ಕೆ ಕುಳಿತುಕೊಂಡಿತು.

ಕೆಲವೇ ಕ್ಷಣದಲ್ಲಿ ಮಂದಾನಿಲ ಬಂದು “ಹೂವೇ! ಹೂವೇ!” ಎಂದು ಬೆನ್ನು ತಟ್ಟಿ ಮಾತನಾಡಿಸಿತು. ಹೂವು ತನ್ನ ಧ್ಯಾನದ ನಿಲುವನ್ನು ತೊರೆಯಲಿಲ್ಲ.

ಬೆಳಕು ಬೀರುತ್ತ ಬೆಳ್ಳಿ ಕಿರಣ ಓಡಿ ಒಂದು-
“ಹೂವೇ! ಹೂವೇ! ನಿನ್ನ ಸಖನ ನೆನಪಿಲ್ಲವೇ?” ಎಂದು ಕೇಳಿತು.
ಸುಮನದ ಧ್ಯಾನದ ರೆಪ್ಪೆ ದಳ ಅಲಗಲಿಲ್ಲ.
ಧ್ಯಾನದ ಮೌನ ಮುಂದುವರಿಯಿತು.

ಮಧ್ಯಾಹ್ನ ಸೂರ್‍ಯ ನೆತ್ತಿಗೇರಿ ಬಂದು ಹೂ ಹೃದಯವನ್ನು ಕಲುಕಲು ನೋಡಿದ. ಹೂವು ಉರಿಬಿಸಲನ್ನು ಸಹಿಸಿ ಧ್ಯಾನ ಮುಂದುವರಿಸಿತು.

ಮತ್ತೆ “ಸಂಧ್ಯಾ” ಮೆಲ್ಲನೆ ಹೆಜ್ಜೆ ಇಟ್ಟು ಬಂದು “ಕಣ್ಣು ಮುಚ್ಚಾಲೆ ಆಡೋಣವೇ”? ಎಂದು ಪಿಸು ಗುಟ್ಟಿತು.

“ಮೂಕ ಮೌನ, ಮುನಿಸೇಕೆ? ಬಾ ಸಖಿ” ಎಂದು ಗೋಗರಿಯಿತು.

ಹೂವು ಕಣ್ಣು ತೆರೆಯಲಿಲ್ಲ, ಬಾಯಿ ಬಿಡಲಿಲ್ಲ. ಮೌನದಲ್ಲಿ ಮುಂದುವರಿಯಿತು.

ಸಂಜೆಗತ್ತಲೆ ತೆರೆ ಎಳೆದೊಡನೆ “ನಿಶೆ” ಕತ್ತಲೆಯ ಹೊದಿಕೆ ಹೊದ್ದು ಕಳ್ಳನಂತೆ ಹೂ ಹೃದಯ ಕದಿಯಲು ಬಂದಿತು.

“ಮೇಲೆ, ಆಗಸ, ಚಂದ್ರಮನ ಚೆಲುವು ನೋಡು, ಬೆಳದಿಂಗಳ ಹಾಡು ಕೇಳು, ನಕ್ಷತ್ರದ ನಾಟ್ಯನೋಡು. ನಿಶಾ ತೊಳಿನ ಅಪ್ಪುಗೆಗೆ ನೀ ಬರಲು ಏಕೆ ತಡ? ಸುಮನ, ನಿನ್ನ ಸಮಾಗಮಕ್ಕಾಗಿ ನಾ ಪರಿತಪಿಸುತಿರುವೆ” ಎಂದಿತು. ಹೂವಿನ ಧ್ಯಾನ, ತಪ ಹಾಗೆ ಮುಂದುವರೆದಿತ್ತು.

ಮಧ್ಯರಾತ್ರಿ ಹಿಮ ಬಿರುಗಾಳಿ ಅಪ್ಪಳಿಸಿ ಬಂತು. ಹೂವಿನ ಪಕಳೆಗಳೆಲ್ಲಾ ಉದರಿ ಮಣ್ಣು ಸೇರಿತು. ಅದರೊಡನೆ ಹೂಗರ್‍ಭದಲ್ಲಿ ಅಡಗಿದ್ದ ಧ್ಯಾನ ಬೀಜ ಮೃಣ್ಮಯವ ಸೇರಿ ಚಿನ್ಮಯವಾಯಿತು. ಬಿರುಗಾಳಿಗೆ ಸೋಲಾಯಿತು. ಹೂವಿನ ಹೃದಯ ನನ್ನಾದಾಗಲಿಲ್ಲ ಎಂದು, ರೊಯ್ಯನೆ ರೋದಿಸುತ್ತ ಬೆಳಗು ಮೂಡುವುದರಲ್ಲಿ ಸಮುದ್ರಗರ್‍ಭದಲ್ಲಿ ಬಚ್ಚಿಟ್ಟು ಕೊಂಡಿತು. ಹೂ ಸಂಕಲ್ಪಕ್ಕೆ ಸ್ವರ್‍ಗ ಕೈಗೆಟುಕಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶೆಲ್ಲಿ
Next post ಪತನಗೊಂಡ ಘನತೆಗೆ

ಸಣ್ಣ ಕತೆ

 • ಅಜ್ಜಿಯ ಪ್ರೇಮ

  ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಸಾವು

  ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys