ಪತನಗೊಂಡ ಘನತೆಗೆ

ಹಿಂದೊಮ್ಮೆ ಅವಳ ಮುಖ ನೋಡಲೆಂದೇ ಜನ
ನೆರೆಯುತ್ತಿದ್ದರು ಭಾರಿ ಗುಂಪಿನಲ್ಲಿ,
ಮಂಜಾಗುತ್ತಿದ್ದುವು ಮುದುಕರೆಲ್ಲರ ದೃಷ್ಟಿ ಅವಳನ್ನಟ್ಟಿ;
ಜಿಪ್ಸಿಗಳ ಬೀಡಿನಲ್ಲಿ ಕಟ್ಟಕಡೆ ಸಭಿಕ
ಸ್ತುತಿಸುವಂತೆ ಪತನಗೊಂಡ ವೈಭವವನ್ನ
ಬರೆಯುವುದಿದೊಂದೆ ಕೈ ಗತಿಸಿದ್ದನ್ನ.

ಮುಖಮಾಟ, ನಗು ಮಧುರವಾಗಿಸಿದ ಹೃದಯ
ಉಳಿಯುವುವು ಇವು, ಕಳೆದದ್ದನ್ನು ಕಡೆಯುವ ನಾನು.
ಮತ್ತೆ ನೆರೆಯುವುದು ಜನ ಹಳೆ ಜಾಗದಲ್ಲೆ,
ತಿಳಿಯದು ಅದಕ್ಕೆ ಅದೆ ರಸ್ತೆಯಲ್ಲೆ
ಹಿಂದೆಂದೂ ಒಂದು ದಿನ ನಡೆದಾಡಿತ್ತು ಎಂದು
ಉರಿಮುಗಿಲಿನಂತಿದ್ದ ವಸ್ತುವೊಂದು.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಮಾಡ್‌ಗಾನಳ ವೈವಾಹಿಕ ಜೀವನ ಸಂತೃಪ್ತಿಕರವಾಗಿರಲಿಲ್ಲ. ಅವಳು ತನ್ನ ಗಂಡನಿಂದ ಬೇರೆಯಾಗಿ ವಾಸಿಸತೊಡಗಿದಳು. ಹಿಂದೆ ಅವಳನ್ನು ಗೌರವದಿಂದ ನಡೆಸಿಕೊಂಡ ಐರಿಷ್ ರಾಷ್ಟ್ರೀಯ ಚಳುವಳಿಯ ಜನ ಈಗ ಅವಳ ಬಗ್ಗೆ ಕೆಟ್ಟ ರೀತಿಯಲ್ಲಿ ನಡೆದುಕೊಂಡರು. ಅಂಥ ಸಂದರ್‍ಭಗಳು ಮನಸ್ಸಿನಲ್ಲಿ ಇರುತ್ತ ಏಟ್ಸ್ ಬರೆದ ಕವನ ಇದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೂವಿನ ಸಂಕಲ್ಪ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೧

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…