Home / Tirumalesh KV

Browsing Tag: Tirumalesh KV

ಪಂಡಿತರೇ ವಿವಿಧ ಕಳಾ ಮಂಡಿತರೇ ಇದು ನೀವು ಕೇಳತಕ್ಕ ಕೃತಿಯಲ್ಲ ಇದು ಬೀದಿವರೆ ಬೀರನ ಕತೆ ಒಂಟಿ ವ್ಯಥೆ ಮುಚ್ಚಿ ಕಿವಿ ಇದು ಬೇರೆಯೇ ಕತೆ ಬೇಕೆಂದೇ ಹೇಳಿದ್ದು ಸರಸ್ವತಿ ಬರೆಸಿದ್ದಲ್ಲ ಅವಳ ಸಂಗತಿ ಬೇರೆ ಸ್ಫೂರ್ತಿ ಸುರಿದದ್ದಲ್ಲ ಕಲೆ ಒಲಿದದ್ದಲ್ಲ ಅ...

ಬೀದಿ ಜನಸಂದಣಿಗೆ ಕಾರು ರಿಕ್ಷಾಗಳಿಗೆ ಕೂಗಿ ಹೇಳುತ್ತಾನೆ : “ಎಲೆಲೆ ಇರುವೆಗಳೆ, ವೃಥಾ ನನ್ನ ಕಾಲಡಿಗೆ ಬಿದ್ದು ಅಪ್ಪಚ್ಚಿಯಾಗದಿರಿ-ತೊಲಗಿ” ನಡೆಯುತ್ತಾನೆ ಮಹಾವೀರ ಗೊಮ್ಮಟನಂತೆ ಒಳಗೊಳಗೆ ನಗುತ್ತಾನೆ ದೊಡ್ಡಮಂದಿಯ ಕಾಲಿಗೆರಗುತ್ತಾನ...

ಕೆಲವು ವರ್ಷಗಳ ಹಿಂದೆ ನಾನು “ಅಕ್ಷರ ಲೋಕದ ಅಂಚಿನಲ್ಲಿ” ಎಂಬ ಶೀರ್ಷಿಕೆಯ ಕೆಳಗೆ ಅಕ್ಷರ ಲೋಕದ ಜತೆಗಿನ ನನ್ನ ಸಂಬಂಧವನ್ನು ಲೇಖನರೂಪದಲ್ಲಿ ದಾಖಲಿಸಲು ಪ್ರಯತ್ನಿಸಿದ್ದೆ. ಅದೊಂದು ರೀತಿಯಲ್ಲಿ ನನ್ನ ಜೀವನ ಚರಿತ್ರೆಯೂ ಆಗಿತ್ತು. ಸುಮ...

ಯನ್ನ ತಲೆಯನ್ನ ಸೋರೆ ಮಾಡಿ ಯನ್ನ ನರಗಳ ತಂತಿಮಾಡಿ ನಿನ್ನ ಸ್ವರವನ್ನ ಯನ್ನಿಂದ ಧ್ವನಿಸಿ ಗೊಂಬೆಯಾಟವಯ್ಯಾ ಎಂದು ಕುಣಿಸಿ ಮಣಿಸಿ ದಣಿಸಿ ದಾಸರ ದಾಸ ಚಪ್ರಾಸಿ ಮಾಡ್ಕೊ ತಲೆಮೇಲೆ ಕೂತ್ಕೊ ಯನ್ನ ನೆತ್ತರು ಕುದಿಸಿ ದಾಮರು ಮಾಡ್ಕೊ ರೋಡಿಗೆ ಹಾಕ್ಕೊ ಓಡ್...

(ಸಿ. ಅಶ್ವತ್ಥ್ ಗೋಸ್ಕರ) ತಿಂಗಳ ಬೆಳಕಿಗೆ ಭಾವದ ಸೆಳಕಿಗೆ ಏತಕೊ ತುಂಬಿದೆ ನೋವಿನ ಅನಿಸಿಕೆ ಯಾರು ಬಂದರು ನನ್ನ ಬಳಿಗೆ ಯಾರೂ ಇಲ್ಲದ ವೇಳೆಗೆ ಅಂಥ ನೆನಪು ಇಂದು ಹೀಗೆ ಸುಳಿವುದೇ ಈ ತೆರದಲಿ ಯಾರು ನುಡಿದರು ನನ್ನ ಜತೆಗೆ ಯಾರೂ ನುಡಿಯದ ಮಾತನು ಅಂಥ ...

ಲೋಕದ ಎಲ್ಲಾ ಪ್ರಾಣಿಗಳೂ ಸಂದರ್ಭಕ್ಕೆ ಬದ್ಧವಾದುವು. ಸಂದರ್ಭ ಬದ್ಧತೆಯೆಂದರೆ, ತಂತಮ್ಮ ಸದ್ಯತೆಗೆ ಕಟ್ಟಹಾಕಿಕೊಂಡಿರುವುದು. ‘ಇಲ್ಲಿ-ಈಗ’ ಎನ್ನುವುದು ಸದ್ಯತೆ. ಈಗಿನ ಸ್ಥಿತಿಗೆ ಅನುಗುಣವಾಗಿ ವರ್ತಿಸುವುದು ಇದರ ಲಕ್ಷಣ. ಇದು ಒಂದೊಂದು ಪ್ರಾಣಿಯಲ್...

(ಶಿಶುನಾಳ ಷರೀಫ್ ಸಾಹೇಬರ ಸ್ಫೂರ್ತಿಯಿಂದ) ಯಾಕ ಫಿಕೃ ಮಾಡತಿ ಫಕೀರ ನೀ ನೋಡಿದವ ಬಹಳ ಊರ ಹಿಮಾಲಯಕ್ಕೆಂದು ಹೋದಿ ಅಲ್ಲಿ ಚಳಿಗೆ ಕೌದಿ ಹೊದ್ದಿ ಬಂತೇನು ನಿನಗ ನಿದ್ದಿ ಮೆಕ್ಕ ಮದೀನ ಸುತ್ತಿಬಂದಿ ರಾಮ ರಹೀಮ ಒಬ್ಬ ಅಂದಿ ತಿನಬಾರದ್ದೆಲ್ಲ ತಿಂದಿ ಹೆಂಡ...

(ಶಿಶುನಾಳ ಷರೀಫ್ ಸಾಹೇಬರನ್ನು ನೆನೆದು) ಕುಣಿಕುಣಿವಳು ನಮ್ಮ ಕುಂಬಾರಗಿತ್ತಿ ಕೈಕಾಲಿಗೆ ಕೆಂಪು ರಂಗು ಹತ್ತಿ ನೋವು ನಲಿವುಗಳೆಂಬ ಭೇದ ಮರೆತು ಮಣ್ಣಿಗೆ ಮಣ್ಣು ಹದನಾಗಿ ಬೆರೆತು ತಿರುಗಿಸಿ ಭೂಲೋಕದ ತಿಗರಿ ಅದರೊಳಗೆ ಸಂಸಾರವೆಂಬ ಬುಗರಿ ಹೊಟ್ಟೆ ಹಸಿ...

citಸಕ್ಕರೆ, ಬೆಲ್ಲ, ಬೇಳೆ, ಚಹಾಪುಡಿ, ರವಾ ಮುಂತಾದ ಸಾಮಾನುಗಳನ್ನು ಕಾರಿನಲ್ಲಿ ತುಂಬಿಕೊಂಡು ಮಂಜಪ್ಪ ರೈ ವೇಗವಾಗಿ ಮನೆಗೆ ಮರಳುತ್ತಿದ್ದರು. ಡ್ಯಾಶ್ ಬೋರ್ಡಿಗೆ ಜೋಡಿಸಿದ್ದ ಕ್ಯಾಸೆಟ್ ಪ್ಲೇಯರಿನಿಂದ ಬೆಸ್ಟ್ ಆಫ಼್ ರಫ಼ಿ ಹಾಡುಗಳು ಬರುತ್ತಿದ್ದರ...

ಲೋಕದಲ್ಲಿ ಒಟ್ಟಾರೆ ಎಷ್ಟು ಭಾಷೆಗಳಿವೆ ಎನ್ನುವುದನ್ನು ಯಾರೂ ನಿಖರವಾಗಿ ಲೆಕ್ಕ ಹಾಕಿಲ್ಲ, ಹಾಗೆ ಲೆಕ್ಕ ಹಾಕುವುದು ಸಾಧ್ಯವೂ ಇಲ್ಲ. ಜನ ಮಾತಾಡುವಂಥ ಸುಮಾರು ಎರಡು ಸಾವಿರ ಭಾಷೆಗಳಿವೆ ಎಂದು ಒಂದು ಅಂದಾಜು. ಇವುಗಳಲ್ಲಿ ಬರಹಕ್ಕೆ ಉಪಯೋಗವಾಗುವಂಥವು...

1...2425262728...63

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....