
ಮುಸುಕಿನ ಜೋಳದ ಸಮಯ ಇದು ಎಲ್ಲ ಕಡೆಯೂ ಅದೇ ಒಲೆಯಲ್ಲಿ ತೊಳಗುವ ಕೆಂಡ ಕೆಂಡದ ಮೇಲೆ ಸುಲಿದ ಜೋಳದ ತೆನೆ ನಿಲ್ದಾಣಕ್ಕೆ ಬಂದು ನಿಂತ ಲೋಕಲ್ ಗಾಡಿ ಕೂಗುತ್ತಲೇ ಇದೆ ಇಲ್ಲೊಂದು ಎಮ್ಮೆ ಅಲ್ಲೊಬ್ಬ ಹಟಮಾರಿ ಹುಡುಗ ಜೋಪಾನ! ಹಾರುವ ಕಿಡಿಗಳು ಇನ್ನರ್ಧ ಗಂಟ...
ಎಲ್ಲವನ್ನೂ ಮರೆತುಬಿಡಬಹುದು ಆದರೆ ಮರೆಯುವುದು ಹೇಗೆ ಖರ್ಬೂಜದ ಹಣ್ಣುಗಳನ್ನು ಹೇರಿಕೊಂಡು ಬೀದಿಯ ತಿರುವಿನಲ್ಲಿ ಮರೆಯಾದ ಎತ್ತಿನ ಗಾಡಿಯನ್ನು? ನಮ್ಮ ಅನೇಕ ನೆನಪುಗಳ ಕನಸುಗಳ ಗಾಡಿ ಜನನಿಬಿಡ ಬೀದಿಯಲ್ಲಿ ನಾವೆಲ್ಲರೂ ನೊಡುತ್ತಿದ್ದಂತೆಯೇ ಕಾಣಿಸದಾಯ...
ಅವರೆಲ್ಲಿದ್ದಾರೆ ಈಗ? ಕಾಲ ಕಾಲಕ್ಕೆ ನನ್ನೆದೆಯ ತಿದಿಯೊತ್ತಿ ಜೀವಕ್ಕೆ ಜೀವ ಕೊಡುತಿದ್ದವರು? ಕೆಲವರಿದ್ದರು ಕಾಸರಗೋಡಿನ ಹಳೆಮನೆಗಳಲ್ಲಿ ದೀಪಗಳಂತೆ ಉರಿಯುತ್ತ-ಇನ್ನು ಕೆಲವರು ತಿರುವನಂತಪುರದಲ್ಲಿ, ತೀರ ಕೊನೆಯವಳು ಬಾರ್ಸಿಲೋನಾದ ಯಾವುದೋ ಬೀದಿಯಲ್...
ಕಾಬಾದ ಕಡೆ ಮುಖಮಾಡಿ ದಿನವೂ ನಮಾಜು ಮಾಡುವ ಗೆಳೆಯನೆ ಹೇಳು ನೀನು ನನಗೆ ಸರ್ವಶಕ್ತನಾದ ದೇವರ ರೀತಿ ರಿವಾಜು ಬೀದಿಯಲ್ಲಿ ಬಿದ್ದವರಿಗೆ ಕೊಡುವನೆ ಮನೆ ಹಸಿದ ಹೊಟ್ಚೆಗೆ ಕೂಳು ಹಾಗೂ ಬಿಸಿಲಿಗೆ ಬರಡಾದ ಹೊಲಗಳಲ್ಲಿ ಧಾನ್ಯಗಳ ತೆನೆ ಎಲ್ಲರನ್ನೂ ಸಮನಾಗಿ ...
ತಲೆಗೂದಲು ಕೆದರಿರುವುದು ಗಡ್ಡ ಹೇರಳ ಬೆಳೆದಿರುವುದು ಕಣ್ಣು ಆಳಕ್ಕೆ ಇಳಿದಿರುವುದು ಜೇಬಿನಲ್ಲಿ ಬಾಂಬಿರುವುದು ಮಂದಿಯ ಹಿಂದೆಯು ಇರುವರು ಮಂದಿಯ ಮುಂದೆಯು ಇರುವರು ಮಂದಿಯ ನಡುವೆಯ ಇರುವರು ಯಾರಿಗೂ ಕಾಣದೆ ಇರುವರು ಹಿಮಾಲಯದ ಮೇಲೆ ಹಿಮ ಬೀಳುವುದು ಮ...
ರಾ ಎಂಬುದಾಗಿತ್ತು ನಿನ್ನ ಹೆಸರು ಹಲವು ಕಾಲದ ತನಕ ನೈಲ್ ನದಿಯ ಆಚೀಚೆಗೆ ನೀನೊಬ್ಬನೇ ದೇವರು ಹೊಲಗದ್ದೆ ನಿನ್ನ ದಿನದಿನದ ಉದಯ ಅಸ್ತಮಾನಗಳಲ್ಲಿ ಅಗಿ ಫಲವತ್ತು ತುಂಬಿದ ಕಣಜ ನಿನ್ನ ಅಪಾರ ದಯ ನದಿನೀರು ಕೂಡ ಹಾಗೆಯೇ ಹರಿದಿತ್ತು ಅರಿತಿದ್ದೆವು ನಾವದರ...
ರಸ್ತೆ ಬದಿಯಲ್ಲಿ ಕುಳಿತಿದ್ದ ಆತ್ಮವೊಂದನ್ನು ಕೇಳಿದೆ-ಸತ್ತವರು ಉಳಿದವರಿಂದ ಬಯಸುವುದಾದರೂ ಏನನ್ನು? ಆತ್ಮ ನುಡಿಯಿತು-ತಿಳಿದವರ ಹಾಗೆ ಮಾತಾಡದಿರುವುದು ತಿಳಿಯದ ಸಂಗತಿಗಳ ಬಗ್ಗೆ ಮುಖ್ಯವಾಗಿ ನಮ್ಮ ಕುರಿತು ನಿಜಕ್ಕೂ ನಾವು ಉತ್ತರಿಸಲಾರದ ಸಂದೇಹಗಳನ...
ಬಸ್ಸಿನ ತುಂಬ ನೂಕು ನುಗ್ಗಲಿತ್ತು ಅಂಗಡಿ ಬೀದಿಗಳಲ್ಲೂ ಹಾಗೆಯೇ ಹಗಲಿಗೆ ಹೆಗಲು ತಾಗಿಸಿ ಅಲ್ಲೆಲ್ಲ ನೀವು ನಿಂತಿದ್ದಿರೆಂಬುದು ಗೊತ್ತು ಚಹದಂಗಡಿಯಲ್ಲಿ ಮೇಜಿನೆದುರು ಅಕಸ್ಮಾತ್ ಕೇಳುವಿರಿ ಬೆಂಕಿ ಮತ್ತದೇ ಮಾತು ಅದೇ ಕತೆ ಯಾರು ಯಾರನ್ನೋ ಹುಡುಕುವ ...
ಕಳೆದ ಯುಗಾದಿಯಂತಲ್ಲ ಈ ಸಲದ ಯುಗಾದಿ ಕಳೆದ ಯುಗಾದಿ ಹುಸಿಮಳೆಯಂತೆ ಮಿಂಚಿ ಗುಡುಗಿ ಹೊರಟು ಹೋಯಿತು ನೆಲವನ್ನು ತೊಯ್ಯದೆ ಈ ಸಲದ ಯುಗಾದಿ ನಿಜಕ್ಕೂ ಹೊಸ ಯುಗವನ್ನು ತೆರೆಯುವುದು-ಎಂತಲೇ ಹೊಸ ತೀರ್ಮಾನಗಳ ಮಾಡೋಣವೆಂದು ಕುಳಿತರೆ ಸಾಕು ಆಕ್ರಮಿಸುತ್ತವೆ...














