ಉಮರನ ಒಸಗೆ

ಒಲವಿನ ಬೇಗೆಯ ಬೀಸುಗೋಲಿನ ಬಾಸಾಳಗಳ ತಾಳಲಾರೆ ಬಾರೆ ಮನ್ಮಥನ ಚೆಂದುಟಿ ನಿನ್ನ ಚೆನ್ನೈದಿಲೆ ಮೈಯನೆಲ್ಲ ಮುದ್ದಿಟ್ಟು ರಂಗೇರಿಸಿದೆ ಭಾವೋದ್ವೇಗದ ಸೆಳೆಮಿಂಚು ಉಕ್ಕಿಹರಿದು ಬಾಯಿ ಕಣ್ಣುಗಳ ಮುದ್ರಿಸಿದೆ ನರನರಗಳನುದ್ರೇಕಿಸಿದೆ ಮದಿರೆಯ ಮತ್ತೊಂದು ಮದನನ ಮುದವೊಂದು ಹದವಾಗಿದೆ...

ಹೊನ್ನ ಹುಡುಗಿ

ಬಿಳಿಹಳದಿ ತೆಳುವಾದ ಮಕಮಲ್ಲಿನುಡಿಗೆ ಜುಳುಜುಳು ಕಳಕಳದೊಯ್ಯಾರ ನಡಿಗೆ ಸವಿದೆರೆ ತಿಳಿನಗೆ ತೇಲುನೋಟ ಮುಗಿಲನೆಡೆಗೆ ನೋವರಿಯದೇಕಾಂತದಾನಂದ ತೀರದಲಿ ಸಂತೋಷಸಾಗರಲೀನ ಪ್ರಶಾಂತ ಕಾನನ ಸಾವಿರದ ಸೆಲೆಯುಕ್ಕಿ ಹೊಳೆಯಾಗಿ ಹರಿದಿದೆ ಹರೆಯ ನೆಲ-ಮುಗಿಲು ಮರ ತೆಮರು ಹುಲ್ಲು-ಹೊದರುಗಳನ್ನೆಲ್ಲ ತುಂಬಿತುಳುಕಿ...

ನಾನು ನೀನು

ಬಹುಶಃ ಹಗಲು ಇರುಳಿಂದ ಬೈಗು ಬೆಳಗಿಂದ ಭೂಮಿ ಬಾನಿಂದ ನೆಲವು ಜಲದಿಂದ ತಾರೆಯು ಪುಂಜದಿಂದ ಸೂರ್ಯನು ಕಪ್ಪುಗೂಡಿಂದ ಬೇರೆಯಾದಂದು ನಾವಿಬ್ಬರೂ ಬೇರೆ ಬೇರಾಗಿರಬೇಕು ಇಡಿಯಾಗಿ ನೋಡಿದರೆ ನನಗೂ ನಿನಗೂ ಕೋಟಿ ರೂಪ ಬಿಡಿಯಾಗಿ ನೋಡಿದರೆ...

ಯೌವನ

ಹೇಳದೆ ಕೇಳದೆ ಓಡುತ ಬರುತಿದೆ ಯೌವನ ತಂತಾನೆ ಲಂಗವನುಟ್ಟು ಕುಪ್ಪಸ ತೊಟ್ಟು ಬಹಳ ವೇಳೆಯಲಿ ಬರಿಮೈ ಬಿಟ್ಟು ಇದ್ದ ಹುಡುಗಿಗೆಲ್ಲಿಂದ ಬಂತು ಈ ಸೊಬಗಿನಸೋನೆ ||೧|| ಕಾಳ ಮೇಘದಾಕಾಶದ ಕೇಶವು ಕಣ್ಣಿಗೆ ಕವಿಯುತಿದೆ ಪುರುಷನ...

ಕಣ್ಣು ಕಣ್ಣು ಕೂಡಿದಾಗ

ಕಣ್ಣು ಕಣ್ಣು ಕೂಡಿದಾಗ ಸರ್ಪಕಂಡ ಗರುಡ ಹಾಕಿದ ಹೊಂಚು ಸೆಣೆಸಿ ಸೆಳಕೊಳ್ಳುವ ಸಂಚು ಮಿನುಗುವ ಕಣ್ಣಮಿಂಚು ಕುಣಿಕೆ ಕಣ್ಣಿಯ ಸುತ್ತಿ ಎಣಿಕೆಯ ಹೆಣಿಕೆ ಹಾಕುತ್ತದೆ ತಿನಿಸು ಕಂಡ ನಾಲಗೆ ಚಾಚಿ ಸಿಕ್ಕರೆ ಸಾಕು ಸಂದು...

ಸ್ಪರ್ಶ

ತೇಲುವ ಬೆಂಡು ನೀರುಂಡು ಮೀನು ಮೊಸಳೆಗಳ ಬಾಯಿ ಹಲ್ಲುಗಳ ಕಂಡು ಅದು ಹೇಗೋ ಉಳಕೊಂಡು ಇಳಿಯಿತು ಇಳಿದೂ ಇಳಿದೂ ಗಟ್ಟಿಗೊಂಡು ಕಲ್ಲಾಗಿ ಒರಟು ಕರಟಾಗಿ ತಳ ಕಂಡಿತು ಆಗೊಂದು ಕಮಲನಾಳ ಕಳಕಳಿಸಿ ನಳನಳಿಸಿ ಕಲಕುತ್ತ...

ಎದೆಯೆಂಬ

ಎದೆಯೆಂಬ ಹೊಲವನ್ನ ಹದವಾಗಿ ಹರಗೀನಿ ಬೆದೆ ಮಳೆ ಬಂದಂಗೆ ಮಿದು ಮಾಡು ಬಾರೆ ಮಿದುವಾದ ಹೊಲದಾಗ ಬೀಜಾನ ಬಿತ್ತೀನಿ ಬೇರಿಗೆ ಕಸುವಾಗೊ ಸತುವನ್ನು ತಾರೆ  ||೧|| ಎದೆಯೆಂಬ ಮರುಭೂಮಿ ಬರಬಾರಾ ಒಣಗಿದೆ ಹನಿಹನಿ ಸುರಿಸುತ್ತ...

ಇವಳು ಬಂದಾಗ

ಇವಳು ಬಂದಾಗ ಇವಳ ನಡೆಯೊಡನೆ ನಾನೋಡಲಾರೆ ಇವಳ ಭಂಗಿಗಳ ನಾನಂಗವಿಸಲಾರೆ ಇವಳ ಮೌನ ಸಲ್ಲಾಪವ ನಾನಾಲಾಪಿಸಲಾರೆ ಇವಳ ವೇಷದೊಡನೆ ನಾನಾವೇಶಗೊಳ್ಳಲಾರೆ ಇವಳ ಗತಿಯೊಡನೆ ನಾ ನರ್ತಿಸಲಾರೆ ಇವಳ ಸಂಕೇತಗಳ ನಾ ಸಂಭಾವಿಸಲಾರೆ ಇವಳ ಮೋದವ...

ಟಿಸಿ ಮದ್ದು

ನೀವು ಆಡಾಡ್ತಾ ಅಡವಿ ಬೀಳ್ತೀರೇನೋ ದೊಡ್ಡ ಆಟಂಬಾಂಬ ಪಟಾಕಿ ಹಾರುತ್ತದೆಂದು ಬೆಂಕಿ ಹಚ್ಚಿದಾಗ ನೀವು, ಕಿವಿ ಮುಚ್ಚಿಗೊಳ್ಳಲು ಜನ ಅದು ಸುರು ಸುರು ಎಂದು ಮೊದಲು ಬುಸುಗುಟ್ಟಿ ನಂತರ ಮದ್ದು ಮುಟ್ಟುವುದರೊಳಗೇ ಟಿಸ್ಸೆನ್ನುವುದೇನೋ! ತಳದೊಳಗಿಂದೇಳದೆ...

ಹಿಡಿಯಿರೋ ಅವನ

ಹಿಡಿಯಿರೋ ಅವನ ಮಾತು ಬಲ್ಲವರೆಲ್ಲರೂ ಹಿಡಿಯಿರೋ! ಮಾತುಮಾತಿನಲಿ ಅವನಿಗಾಗಿ ಗುಂಪು ಕೂಡಿದ ನೀವು ಅವ ನಮ್ಮವ ಅವ ನಮ್ಮವನೆಂದು ಗುಂಪು ಗುಂಪಾಗಿ ಗುದ್ದಾಡುತ್ತೀರಿ ಆ ಬ್ರಾಹ್ಮಣ್ಯ ಶಿಖಿಗೆ ಅತಿ ಆಚಾರಿಗಳಿಗೆ ಮತಾಂಧ ಅಭಿಮಾನಿಗಳಿಗೆ ಜನಿವಾರ...