
ಇಷ್ಟು ದೊಡ್ಡ ಮನೆ ಯಾರು ಸಂಭಾಳಿಸುವರು? ಇಷ್ಟು ಚಂದದ ತೋಟ ಯಾರು ನೋಡಿಕೊಳ್ಳುವವರು? ಒಡವೆ ವಸ್ತು ಸೀರೆ ಯಾರುಟ್ಟು ನಲಿವರು? ಆಶೆಯಿಂದ ಹೊಂದಿರುವ ಚಿಕ್ಕಪುಟ್ಟ ವಸ್ತುಗಳು ಅಕ್ಕರೆಯ ಗಂಡ ಮುದ್ದಾದ ಮಕ್ಕಳು ಸ್ನೇಹಿತರು-ಸಂಬಂಧಿಗಳು ಸುತ್ತಿಕೊಂಡಿವೆ...
ಎಲ್ಲರೂ ಬೆಚ್ಚಗೆ ಹೊದ್ದು ಮಲಗಿರಲು ಇವಳು ಎದ್ದು ಜಿಮ್‌ನಲ್ಲಿ ಬೆವರು ಸುರಿಸುತ್ತಾ ಕಸರತ್ತು ಮಾಡುವಳು ಎಲ್ಲರೂ ಹಾಲು ತುಪ್ಪದಲ್ಲಿ ಕೈತೊಳೆದರೆ- ಇವಳು ಹಣ್ಣು-ತರಕಾರಿ ಒಣಗಿದ ಚಪಾತಿಯ ಮೇಲೆಯೇ ಜೀವಿಸುವಳು ಎದುರಿಗೆ ಯಾರೂ ಇಲ್ಲ ಆದರೂ ಕೈ ಬೀಸುವಳು...
೧ ಅದೇ ಆ ಶಿವನ ವೇಷಧಾರಿ ನಾನಿದ್ದ ಬಸ್ಸಿನಲ್ಲಿಯೇ ಇದ್ದ ನನ್ನೊಂದಿಗೆ ಬಸ್ಸಿನಿಂದಿಳಿದ ತೇಗದ ಮರದ ಹಾಗೆ ಉದ್ದಕೆ ಸಪೂರ ಮೋಡದ ಮೈ ಬಣ್ಣ, ಮಿಂಚಿನ ನಗು ಮುಡಿಗೆ ತಗಡಿನ ಚಂದ್ರನನು ಮುಡಿದಿದ್ದ ತೋಳಿಗೆ ಕಣಗಿಲೆಯ ಹೂವು ಕೊರಳಲ್ಲಿ ಪ್ಲಾಸ್ಟಿಕ್ ಹಾವು ...
‘ಹೇಗೆ ಪ್ರೀತಿಸದೆ ಇರಲಿ ಚಂದ್ರನನ್ನು ಮಗುವಾಗಿದ್ದಾಗಿನಿಂದಲೂ ಬಲ್ಲ ಅವನನ್ನು ‘ಬಾ’ ‘ಬಾ’ ಎಂದವನ ಎಷ್ಟು ಸಲ ಕರೆದಿದ್ದೆನು ಬರುವನೊ, ಬಾರನೊ, ತಿಳಿಯದೆ ಇಂದಿಗೂ ಕಾಯುತ್ತಲೇ ಇರುವೆನು ಹೇಳಿ ಹೇಗೆ ಪ್ರೀತಿಸದೆ ಇರಲಿ ಚಂದ್ರನನ್ನು ಯಾವ ಕಾಲದಲ್ಲಿ, ...
೧ ಮಹಾಯಾನ ತಾನು ತುಂಬಾ ಸಣ್ಣವನು ಅಂದುಕೊಂಡವನು ಬೃಹತ್ ಬುದ್ಧನನು ಕೆತ್ತಿದ ಆಹಾ! ಏನು, ಆಳ, ಅಗಲ, ವಿಸ್ಕಾರ- ಆಕಾಶದೆತ್ತರ! ಗುಲಾಬಿ ಮೃದು ಪಾದಗಳನ್ನು ಕೆತ್ತುತ್ತಾ, ಕಿತ್ತುತ್ತಾ ಕಣ್ಣು, ತುಟಿ, ಮೂಗು ಮುಂಗುರುಳ ಅರಳಿಸುತ್ತಾ ನೆಲದಲ್ಲಿದ್ದವ ಮ...
ಹತ್ತೂ ಜನರು ಓದಿಯಾದ ಮೇಲೆ ನನ್ನ ಕೈಸೇರಿತು ಮಹಮದನ ಪತ್ರ ತನ್ನೂರಿನ ಬಗ್ಗೆ ತನ್ನ ಅಕ್ಕ ತಂಗಿಯರ ಬಗ್ಗೆ ಮಲ್ಪೆಯ ಮೀನು, ಸಮುದ್ರದ ಹಿನ್ನೀರು ಗೇರು ಹಣ್ಣು, ಗುಳ್ಳದ ಬಗ್ಗೆ ಏನೆಲ್ಲ ಅಚ್ಚ ಕನ್ನಡದಲ್ಲಿ ಬರೆದಿದ್ದ ಪತ್ರ ‘ಈದ್’ಗೆ ಮನೆಗೆ ಬರಲೇಬೇಕೆ...
ಎಲ್ಲರೂ ದಡ ಸೇರಿದರು ನಾನು ಮಾತ್ರ ನಡು ನೀರಿನಲ್ಲಿ ಎಲ್ಲರೂ ಹೊಳದಾಟಿದರು ನಾನು ಮಾತ್ರ ಮುರುಕು ದೋಣಿಯಲ್ಲಿ ಕತ್ತರಿಸುತ್ತಿದೆ ಚಳಿ ತತ್ತರಿಸುತ್ತಿದೆ ಎದೆ ನಡುಗಿ ಅಲೆಯೊಳಗೆ ತೇಲಿ ಬಿಟ್ಟಿರುವೆ ಕಂಬನಿಯ ಮಾಲೆ ಇರುವುದೊ ಇಲ್ಲವೊ ನಾನರಿಯೆ ನನ್ನ ಪಾ...
ಯಾಕೆ ಬಂದೆ ಯಾಕೆ ನಿಂದೆ ಕಿಟಕಿಯಲ್ಲಿ ಚಂದಿರ ಸನ್ನೆ ಮಾಡಿ ಕರೆಯಬೇಡ ಬೆಣ್ಣೆ ಮಾತಾಡಬೇಡ ಹೋಗಿ ಬಿಡು ಚಂದಿರ ಪಕ್ಕದಲ್ಲಿ ಗಂಡನಿರುವ ತೊಟ್ಟಿಲಲ್ಲಿ ಕಂದನಿರುವ ಅಕ್ಕಪಕ್ಕ ನೋಡಿಯಾರು ನೂರು ಕತೆಯ ಕಟ್ಟಿಯಾರು ಹೋಗಿ ಬಿಡು ಚಂದಿರ ನಿನ್ನ ನೋಡಿ ಆಶಪಟ್ಟ...













