
ಮನದ ಮೌನದೊಳರಳ್ವ ಕವನವೆಮ್ಮನು ಮೌನದ ವನ ಕಾನನಕೊಯ್ಯಲು ಬೇಕು ಮನ, ಜನ, ವಾಹನ, ಯಂತ್ರದೊಳೊಂದಷ್ಟು ಮೌನ ಮರಳಿದರಾಗ ಪ್ರಕೃತಿ ಗಾನವೇ ವನ, ಕವನ, ಜೀವನದೊಳಿಕ್ಕು – ವಿಜ್ಞಾನೇಶ್ವರಾ *****...
ಸುಮ್ಮನಾಲೋಚಿಸಿರಿ ನೀವೊಂದು ಸ್ಥಿತಿಯ ಎಮ್ಮ ಬಂಡಿಯ ಚಕ್ರ ಚೌಕವಾದೊಡದರ ಗತಿಯ ಗಮ್ಮತಿನ ಪಟ್ಟಣಕು ವಾಹನಕು ಹೊಂದಲಿಕೆಂ ದೆಮ್ಮ ಪ್ರಗತಿ ಪಥ ನೈಸಾಗುತಿರುವಂತೆ ಎಮ್ಮ ಪ್ರಕೃತಿ ರಥ ಚಕ್ರಗಳೊಂದೊಂದೆ ಚೌಕಾಗುತ್ತಿದೆ – ವಿಜ್ಞಾನೇಶ್ವರಾ *****...
ತುಸು ಹಿಂದೆ ಪೋದರಂದೆಲ್ಲರವರವರ ಕೆ ಲಸಗಳನವರವರೆ ನೂರಕೆಪ್ಪತ್ತು ಮಾಡುತಲಿರಲಾ ಪ ರಿಸರದೊಳುಳಿದಿತ್ತು ನೂರಕೆಪ್ಪತ್ತು ಕಾಡು ಹೊಸತೊಂದಧ್ಯಯನ ಶಾಖೆ ಇಹುದಿಂದು ಪರಿಸರವನು ಳಿಸಲಿಕೆಂದು ಸ್ವಾವಲಂಬನೆಯು ಶೂನ್ಯಕಿಳಿದಿರಲು – ವಿಜ್ಞಾನೇಶ್ವರಾ *...
ಚಕ್ರವರ್‍ತಿಯನೊಪ್ಪಿ ಕಪ್ಪವನಿತ್ತೊಡೆ ಬ ದುಕಿಗದಾವ ತೊಂದರೆಯಿಲ್ಲ ಸಾಮಂತನಿಗೆ ಪ್ರಕೃತಿ ತಾನನಿವಾರ್‍ಯದದ್ಭುತದನಂತದ ಚಕ್ರವರ್‍ತಿಯಿರಲಿದಕೆ ಮಣಿದೊಂದಿಷ್ಟು ಬೆವರ ನಿಕ್ಕುವುದಾರಧ್ಯವೆಮ್ಮ ಬದುಕಿನ ರಕ್ಷಣೆಗೆ – ವಿಜ್ಞಾನೇಶ್ವರಾ *****...
ಹುಲಿಯೊಂದು ಹಸುವನು ಕೊಂದು ತಿಂದೊಡದು ತ ಪ್ಪಲ್ಲವದರಂತೆ, ಎಮ್ಮ ಬದುಕಿನ ಬೇಕು ಬಯಕೆ ಗಳಿಗೊಂದಷ್ಟು ಮರನ ತರಿದೊಡೆ, ಮನೆಯ ನೆಳಸಿದೊಡೆ ತಪ್ಪಿಲ್ಲವಾದೊಡಂ, ವ್ಯಾಘ್ರ ವನ ಸಮ ತೋಲಕಿಂತಧಿಕ ಧನಧಾನ್ಯಕಿಲ್ಲಿ ಸೊಪ್ಪಿಲ್ಲ – ವಿಜ್ಞಾನೇಶ್ವರಾ ***...
ಪರಿಪರಿಯ ಕೈಚೀಲ, ಸೋಲಾರು, ಕಾಂಕ್‌ವುಡ್‌ಗಳೆಂದೆಂಬ ಬರಿ ಮುಖವಾಡಗಳಿಂದೆಂತು ಪರಿಸರವ ರಕ್ಷಿಪುದು ? ಪರಿಪರಿಯೊಳುಂಬನ್ನವನು ದುಡಿಮೆಯೊಳಲ್ಲಲ್ಲೇ ಗಳಿಸಿದರೆ ಬೇಕಿಲ್ಲ ಕೈ ಚೀಲ, ಸಾಕಲ್ಲ ಬರಿ ಸೂರ್‍ಯ ಇರುಳೊಳೆಲ್ಲರೊರಗಿದರೆ ಮರವಿಕ್ಕು ಮನೆಗಕ್ಕು &#...
ಬೆಳೆದೊಡೆಮ್ಮ ಕೈಯುಗುರ ತೆಗೆವಂತೆಮ್ಮ ಬಾಳಿನನುಕೂಲಕಪ್ಪಷ್ಟು ಪ್ರಕೃತಿಯ ಬೋಳಿಸಲವಕಾಶವೆಮಗಿಹುದು ಬಲು ಸರಳವಿದೆಮ್ಮನ್ನವನು ಕೈ ಮುಟ್ಟಿ ಬೆಳೆದೊಡೆಮ್ಮುಗುರು ತಾನೆ ಸವೆಯುವುದು – ವಿಜ್ಞಾನೇಶ್ವರಾ *****...
ಬಲು ಬಗೆಯ ಹೂ ಹಣ್ಣು ತರಕಾರಿಯೊಳೆಷ್ಟೊಂದು ಬಲುಮೆಯ ಬಿತ್ತನಿಟ್ಟರದು ಸಾಲದೆಂದೆನುತೆಂದೆಂದು ಚೆಲು ಜಗದೊಳಿನ್ನಷ್ಟು ದಟ್ಟ ಹಸುರಿರಲೆಂದು ಗೆಲ್ಲಿನಲು, ಗೆಡ್ಡೆಯಲು ಅಂಕುರವನಿಟ್ಟಿರಲಾ ಶಕ್ತಿಯ ನೆಲ್ಲ ನಷ್ಟಗೊಳಿಸಿರಲರಿಮನದ ಕೀಳ್ತನಕೇನೆಂಬೆ –...
ಅದೇನು ಕಷ್ಟವೋ, ಏನು ಕೊರತೆಯೋ ಅದೇನು ಗಣಿತವೋ, ಏನು ಮಿಳಿತವೋ ಬದಲಪ್ಪ ಋತುಮಾನದೊಳಗೊಂದೊಂದು ದಿನವೂ ವಿಧವಿಧದ ಕಷ್ಟದೊಡಗೂಡಿ ಅಷ್ಟಷ್ಟೇ ಸುಖವಿಕ್ಕು ಉದ್ಯೋಗದೊಳೆಮ್ಮ ಛಲ ಚಂಚಲವೆಂತೋ ಕಾಲದೊಳಂತು – ವಿಜ್ಞಾನೇಶ್ವರಾ *****...
ಮಳೆ ನೀರ ಕೊಯ್ಲೆಂದು ಬಲುತರದ ಭಾಷಣವು ಬಳಿಕಷ್ಟು ಗುಂಡಿಗಳು ಶುರುವಿಡುವ ಮೊದಲಿದ್ದ ಹಾಳಿತದ ಬದುಕಿನಾ ಶೌಚವನು ಅರಿಯದಿರೆಮ್ಮ ಪಾಪದ ಕೊಳೆಯ ತೊಳೆಯಲಿರುವೆಲ್ಲ ನೀರು ಮುಗಿಯುತಿದೆ ಮಳೆಯನೆಷ್ಟು ಕೊಯ್ದರದಲ್ಲಲ್ಲೇ ಬತ್ತುತಿದೆ – ವಿಜ್ಞಾನೇಶ್ವ...













