
ಆಗಸದೊಳಗೆಲ್ಲಿಂದಲೋ ನೆಲದಾಳದಿಂದಲೋ ಕಿರಣವೊಂದು ತೇಲಿ ಬಂದು ಭ್ರೂಣವಾಗುತ್ತದೆ ಕಣ್ಣು ತಲೆ ಕೈಕಾಲು ಮೂಡುವ ಮುನ್ನವೇ ಗರ್ಭಪಾತ ಮತ್ತೊಂದು ಕವಿತೆಯ ಸಾವು ಒತ್ತಡಗಳ ನಡುವೆ ಹೇಗೋ ಉಳಿದು ಕೆಲವು ಒಂಭತ್ತು ತುಂಬುವ ಮೊದಲೇ ಹೊರಬರುತ್ತವೆ ಅಪೂರ್ಣ ಅಂಗಾ...
ಹದ್ದು ಹಾರಾಡುತಿವೆ ದೇಶಾಕಾಶದ ಮೇಲೆ ನಿದ್ದೆ ಮಾಡುತಿವೆ ಹೆಣಗಳು ಈ ನೆಲದ ಮೇಲೆ ರಾಮಬಾಣಗಳು ಬಡಿಗೆ ಸಲಾಕಿಗಳಾಗಿವೆ ಮಂದಿರಗಳಲ್ಲಿ ಮಾರಣಹೋಮ ನಡೆದಿದೆ ವಿದ್ಯಾಮಂದಿರಗಳಲ್ಲಿ ಕೊಲ್ಲುವ ವಿದ್ಯಾಪಠಣ ಜಗದೊಡೆಯ ಯಾವುದೋ ಸಂದಿಯಲ್ಲಿ ಕುಳಿತುಕೊಂಡು ಬೇರೆ...
ಮಕ್ಕಳು ಆಡುತ್ತಿರುತ್ತವೆ ತಾಯಿ ಮಗುವಿಗೆ ಹಾಲು ಕೊಡುತ್ತಿರುತ್ತಾಳೆ ದುಡಿವ ಜನ ದುಡಿಯುತ್ತಿರುತ್ತಾರೆ ಓಡಾಡುವವರು ಓಡಾಡುತ್ತಿರುತ್ತಾರೆ ಮಲಗಿರುವವರು ಮಲಗಿರುತ್ತಾರೆ ಕುಳಿತಿರುವವರು ಕುಳಿತಿರುತ್ತಾರೆ ಹೊಟ್ಟೆಗೋ ಹೊಟ್ಟೆಕಿಚ್ಚಿಗೋ ಕರುಳ ಕರೆಗೋ ...
ಈ ಮಾತುಗಳು ಮಾತೇ ಕೇಳಲೊಲ್ಲವು ಮೊಳಕೆ ಒಡೆಯಲೊಲ್ಲವು ಚಿಗುರಿ ಹೂತು ಕಾತು ಹಣ್ಣಾಗುವುದಂತೂ ದೂ…ರ ಷಂಡವಾಗಿವೆ ಮಾತು ಜೊಳ್ಳು ಬೀಜದಂತೆ ಸಂತಾನ ಶಕ್ತಿಯೇ ಇಲ್ಲ ಬರೀ ಬೆಂಕಿಯಲ್ಲಿ ತುಪ್ಪ ಹೊಯ್ದು ಹೊಗೆ ಎಬ್ಬಿಸಿದಂತೆ ಮಿಥ್ಯಾ ಮಾಯಾಬ್ರಹ್ಮದ ಮ...
ಯಾಕೆ ಹಡೀಬೇಕು ಇವರನು ಯಾಕೆ ಹಡೀಬೇಕು || ಹೆತ್ತೂ ಹೊತ್ತು ತೊಳೆದೂ ಬಳಿದೂ ಮುದ್ದಿಸಿ ಹೊದ್ದಿಸಿ ಊಡಿಸಿ ಉಣ್ಣಿಸಿ ಸಾಕೀ ಬೆಳೆಸೀ ನೂಕಿಸಿಕೊಳ್ಳಲು || ಯಾಕೆ ಹೇಳಿದ ಮಾತನು ಕೇಳದೆ ಇದ್ದರು ಹಡೆದವರನ್ನು ಸುಮ್ಮನೆ ಬಿಡದೆ ಗದರಿಸಿ ಬೆದರಿಸಿ ಕುತ್ತಿಗ...
ಪಶ್ಚಿಮದಿಂದೆದ್ದ ಹೊಸ ಬಿರುಗಾಳಿ ಪೂರ್ವವನ್ನೆಲ್ಲ ಹಾರಿಸಿ ಧೂಳಿಪಟ ಮಾಡಿದೆ ಕಾಣುತ್ತಿಲ್ಲ ಅಶ್ವಿನಿ ಭರಣಿ ಕೃತ್ತಿಕೆಯರು ಮಾಯವಾಗಿವೆ ಧ್ರುವ ನಕ್ಷತ್ರ ಸಪ್ತರ್ಷಿಮಂಡಲ ಋತವ ಸಾರಿದ ವೇದ ಉಷನಿಷತ್ತುಗಳು ಕಣ್ಮರೆಯಾದವು ಸದ್ದುಗದ್ದಲದಲ್ಲಿ ಏಕಪತ್ನೀವ...














