ಅಂತರಂಗ
ನಿನ್ನ ಅಂತರಂಗ ಅರಿಯದೆ ಹೃದಯ ಹಸಿರಾಗಿ ಪ್ರೀತಿ ಹೂವಾಗಿ ಅರಳಿತ್ತು ನಿನ್ನ ಅಂತರಂಗ ಅರಿವಾಗಿ ಹೃದಯ ಕಲ್ಲಾಗಿ ಪ್ರೀತಿ ಹಾವಾಗಿ ಕಡಿದಿತ್ತು *****
ನಿನ್ನ ಅಂತರಂಗ ಅರಿಯದೆ ಹೃದಯ ಹಸಿರಾಗಿ ಪ್ರೀತಿ ಹೂವಾಗಿ ಅರಳಿತ್ತು ನಿನ್ನ ಅಂತರಂಗ ಅರಿವಾಗಿ ಹೃದಯ ಕಲ್ಲಾಗಿ ಪ್ರೀತಿ ಹಾವಾಗಿ ಕಡಿದಿತ್ತು *****
ಇನಿಯಾ ನೀ ಕೈ ಹಿಡಿದಾಗ ಕನಸುಗಳು ಅರಳಿ ಸಿಹಿನೆನಪಲಿ ಮಿಂದು ಬದುಕಿದ್ದೆ ಅಂದು ಇನಿಯಾ ನೀ ಕೈ ಕೊಟ್ಟಾಗ ಕನಸುಗಳು ಕಮರಿ ಕಹಿನೆನಪುಗಳ ಕೊಂದು ಬದುಕಿದ್ದೇನೆ ಇಂದು […]
ನನ್ನ ಸತಿ ಶಿರೋಮಣಿ ಹೃದಯದರಗಿಣಿ ಕನಸಿನರಾಣಿ ಮನದ ಮನೋನ್ಮಣಿ ಮುತ್ತಿನ ಕಣ್ಮಣಿ ಚೆಲುವಿನ ಖಣಿ ಸರಸದ ರಾಗಿಣಿ ಕೋಕಿಲ ವಾಣಿ ಬಂಗಾರದ ಗಣಿ ಮೂರ್‍ಖ ಶಿಖಾಮಣಿ *****
ನಲ್ಲೆ ನಿನ್ನ ಕುಡಿನೋಟದ ಮೋಹಕ ಮಿಂಚು ಕಂಡೆ ನಾ ಅದರಲ್ಲಿ ನೂರಾರು ಸಂಚು ಅದುವೇ ನಿನ್ನಯ ಪಾಶುಪತಾಸ್ತ್ರ ನಲ್ಲನ ಶರಣಾಗಿಸುವ ಬ್ರಹ್ಮಾಸ್ತ್ರ *****
ಹತ್ತು ಹೆಣ್ಣು ಮಕ್ಕಳ ತಂದೆ ಸಾಗಹಾಕಬೇಕು ಹೇಗಾದರೂ ಮುಂದೆ ಸುಳ್ಳು ಪೊಳ್ಳು ಹೇಳಿ ಮದುವೆ ಮಾಡಿದ ಹೆಣ್ಣು ಮಕ್ಕಳ ಗೋರಿ ತಾನೇ ತೋಡಿದ *****
ನೊಂದು ಬೆಂದು ಮನೆಮಠವಿಲ್ಲದ ಜನರಿಂದು ಸರ್‍ಕಾರದ ಸಹಾಯ ಎಂದು ಬರುವುದೋ ಎಂದು ಪರಿಹಾರ ಧನ ಬರುವಾಗಲೇ ಸೋರಿ ಮುಕ್ಕಾಲು ನತದೃಷ್ಟರಿಗುಳಿಯುವುದು ಕಾಲುಪಾಲು *****
ಸಾಹಿತ್ಯವೊಂದು ಸುಂದರ ಸಾಗರ ಮುತ್ತುರತ್ನ ಹವಳಗಳ ಆಗರ ಉಪ್ಪು ನೀರಿನ ಮಹಾಪೂರ ಮೊಸಳೆ ತಿಮಿಂಗಿಲಗಳಿವೆ ಎಚ್ಚರ! *****
ಅರ್ಧ ಸಂಬಳಕ್ಕೆ ಎಲ್ಲಾದರೂ ಸರಿ ಕೆಲಸ ಮಾಡುವೆವು, ವಿನಮ್ರ ಕಳಕಳಿ ಕೊಟ್ಟರಾಯಿತು ವೇತನ ಏರಿಸಿರೆಂದು ಹೂಡುವರು ಉಗ್ರ ಚಳುವಳಿ ಹೇಗಿದೆ ಸರ್‍ಕಾರಿ ನೌಕರರ ನಡಾವಳಿ? *****
ಮಗ ಸಂಪಾದಿಸುತ್ತಾನೆ ಸಾವಿರ ಸಾವಿರ ಕನಸು ಕಟ್ಟಿದಳು ತಾಯಿ ನೂರು ತರ ಹತ್ತಿದ ಏಣಿ ತಳ್ಳಿ ನಡೆದೇ ಬಿಟ್ಟ ಮಗರಾಯ ಹೃದಯಕ್ಕೆಳೆದು ಸಾವಿರ ನೋವಿನ ಬರೆಯ *****