ವಿಷವೃಕ್ಷ

ಕವಲು ಕವಲಾಗಿ ಚಾಚಿ ಕೊಂಡಿರುವ ಆಲದ ಮರ ವಂಶ-ವೃಕ್ಷಗಳ ಬಿಡುವಂತೆ ಎಷ್ಟೋ ದುಷ್ಟ ಶಕ್ತಿಗಳು ಹುಲುಸಾಗಿ ಈ ಭೂಮಿಯಲಿ ಬೇರು ಬಿಟ್ಟು ಬೆಳೆಯುತ್ತಿವೆ. ಆಳವಾಗಿ ಬೇರು ಬಿಡುತ್ತ ಸತ್ವಹೀರಿ ಬೆಳೆಯುತ್ತಿರುವ ಕೋಮುವಾದಿ ವಿಷವೃಕ್ಷ ತನ್ನನ್ನೇ...

ಸ್ವಾತಂತ್ರ ಗೀತೆ

ನನ್ನ ದೇಶದ ವಿಶಾಲ ಹೂದೋಟದಿಂದ ವಿವಿಧ ಹೂಗಳ ಒಂದುಗೂಡಿಸಿ, ಒಂದು ಹೂದಾನಿ ಅಲಂಕರಿಸಿ, ಮೇಜಿನ ಮೇಲಿಟ್ಟು ಜಗತ್ತಿಗೇ ತೋರಿಸಿ ಹೇಳಿದೆ- ನೋಡಿ ಇಲ್ಲಿ ಕಾಶಿ, ಮಥುರಾ, ಅಜಮೀರ, ಅಮೃತಸರ್ ಕಾಶ್ಮೀರ್, ಕನ್ಯಾಕುಮಾರಿಯ ಸುಂದರ ಹೂಗಳಿವೆ-...

ಮುಮ್ತಾಜಳ ಮಹಲು

ನನ್ನ ಅಖಂಡ ಪ್ರೀತಿಯನ್ನು ನಿನ್ನ ಬೆಳ್ಳಿ ತಕ್ಕಡಿಯಲ್ಲಿಟ್ಟು ತೂಗಬೇಡ ಮುಮ್ತಾಜ್ ದೌಲತ್ತಿನ ಆಸರೆಯಿಂದ ನಿನ್ನ ಜಹಾಂಪನಾಹ್ ನಿನಗೊಂದು ಇಮಾರತ್ತು ಕಟ್ಟಿಸಿ, ಅದರಲ್ಲಿ ನಿನ್ನ ಗೋರಿ ಮಾಡಿರಬಹುದು ಆದರೆ ನನ್ನ ಪ್ರೀಯತಮನ ಹೃದಯಲೇ ಕಟ್ಟಿದ ಭಾವ...

ಬೆಂಜಮಿನ್ ಮೊಲಾಯಿಸ್

ಅನ್ಯಾಯದ ಬೆಂಕಿಯಲ್ಲಿ ನೀನು ಕುದಿದು ಕುದಿದು ಕೆಂಪಾಗಿ- ಲಾವಾ ರಸವಾಗಿ- ನಿನ್ನೆದೆಯ ಲಾವಾ ಸ್ಫೋಟಗೊಂಡಾಗ ಜ್ವಾಲಾಮುಖಿ- ಅಗ್ನಿ ಪರ್ವತದಂತೆ ಬಂಡೆಯಾದೆಯಾ? ಗಟ್ಟಿಯಾದೆಯಾ ಬೆಂಜಮಿನ್. ಕಪ್ಪು ದೇಶದ ಆಗಸದಲಿ ಕೆಂಪು ಸೂರ್ಯನ ಉಗಮ ನೆತ್ತಿಗೇರಲು ಬಿಡಲಿಲ್ಲ-...

ಅಂಬೇಡ್ಕರ್ ಕುರಿತು

ಹೋರಾಟದ ಹಾದಿಯನ್ನು ನಂಬಿ ನಡೆದ ಶಕ್ತಿಯೇ ಕಪ್ಪು ಜನರ ಕೆಂಪು ಕಥೆಗೆ ನಾಂದಿಯನ್ನು ಹಾಡಿದವನೇ. ಕುಡಿಯಲು ನೀರು ಕೊಡದ ದೇವರ ನೋಡಲು ಬಿಡದ ಮನುಜ ಮನುಜರ ಮಧ್ಯ ವಿಷ ಬಿತ್ತುವ ಜನಕೆ ನೀನು. ದುಡಿಮೆಯನ್ನು...

ಬಂಜೆಯಾಗಿದ್ದರೆ ಚೆನ್ನ

ಮಸೀದಿಗಳ ಉರುಳಿಸಿ ಮಂದಿರಗಳ ಕಟ್ಟುವವರೇ ಬಿದ್ದಿರುವ ಮನಗಳನ್ನೆಂತು ಎತ್ತಿ ನಿಲ್ಲಿಸುವಿರಿ ಹೇಳಿ? ಬಿದ್ದ ಗೋಡೆಗಳ ಮತ್ತೆ ಎತ್ತಿ ನಿಲ್ಲಿಸಲೂ ಬಹುದು ಎರಡು ಮನಗಳ ಮಧ್ಯ ಎದ್ದ ಗೋಡೆಯನ್ನೆಂತು ಬೀಳಿಸುವಿರಿ? ಹೇಳಿ. ಕಂಡಿದ್ದೆವು ಹಿಂದೆ ಚರಿತ್ರೆಯಲಿ...

ರೇಷ್ಮೆ ಹುಳಗಳು

ದುಷ್ಟ ಗಂಗೋತ್ರಿಗೆ ಗಂಡಂದಿರ ಬಲಿ ಕೊಟ್ಟ ನಿಮಗೆ ಮುಂಡೆಯರ ಪಟ್ಟವೇ ಗಟ್ಟಿಯಾಯಿತೇನು? ಉಕ್ಕಿ ಬಂದ ನಿಮ್ಮ ಹರೆಯ ಅಂತರಂಗದಲೇ ಹಿಂಗಿತೇನು? ಮೆಟ್ಟಿಬಂದ ಕಣ್ಣೀರು ಗೊಂಡಾರಣ್ಯದ ಗೂಢಕ್ಕಿಳಿದು ಗಟ್ಟಿ ಘನವಾಯಿತೇನು? ಸಿಡಿದು ಹೋದ ಕನಸುಗಳು ಕಡಲಾಚೆಯ...

ವಧು

ಹುಟ್ಟಿದಾಗ ಅಳುತಲೇ ಹುಟ್ಟಿದ ಅವಳ ಬಿಕ್ಕುಗಳು ಸಾವಿನಲ್ಲೇ ಕೊನೆಗೊಂಡಿದ್ದವು. ಕುಣಿದು ಕುಪ್ಪಳಿಸಿ, ಹಲವು ಹದಿನೆಂಟು ಆಟಗಳ ಮಧ್ಯ ಮೈ ಮರೆತಿರುವಾಗಲೇ ವಧು ಪರೀಕ್ಷೆಗೆ ಮೈ ಒಡ್ಡಬೇಕಾಯಿತು. ಎನೂ ಅರಿಯದ ಮನಸ್ಸು ರಂಗು ರಂಗಿನ ಕನಸುಗಳ...

ಶವಗಳು

ಬೆಂಕಿಬಿದ್ದ ಮನೆಗಳಿಂದ ಅರೆಬೆಂದ ಹೆಣಗಳ ಕಮಟು ವಾಸನೆ ಉಸಿರುಗಟ್ಟಿಸುವ ಹೊಗೆ ಮನೆಯೊಳಗಣ ಕಿಚ್ಚು ಮನೆಯ ಸುಟ್ಟಿತಲ್ಲದೇ ನೆರೆಮನೆಯ ಸುಡದು, ಬೋಸ್ನಿಯಾದ ಕ್ರೂರ ಬದುಕುಗಳು ಸೋಮಾಲಿಯಾದ ಆಸ್ತಿ ಪಂಜರಗಳು ರಾಮನಾಮದಡಿಯಲಿ ಚೂರಿ ಇರಿತಕ್ಕೆ ಸಿಕ್ಕು ಎಲಿ...

ಬಿಡುಗಡೆಯ ಕವಿತೆ

ಹೆಣ್ಣಾಗಿ ಹುಟ್ಟಿದೆನೆಂದು ಹಣೆಬರಹಕೆ ಹಳಿಯದಿರು, ನಿನ್ನ ತುಳಿದವರು ನಾಚಿ ನೀರಾಗುವ ಕಾಲ ದೂರವಿಲ್ಲ ಕೇಳು. ಮನು ಮಹಾಶಯರ ಧರ್ಮ ಶಾಸ್ತ್ರಗಳ ಹೊತ್ತು ಗೊಡ್ಡು ವಿಚಾರಗಳಿಗೆ ತಲೆಕೊಟ್ಟು ಕೆರೆ-ಬಾವಿಗಳಿಗೆ ಹಾರವಾಗುವದ ನಿಲ್ಲಿಸು, ತುಂಬಿದ ಸಭೆಯಲ್ಲಿ ಅಸಹಾಯಕಳಾಗಿ...