ವಧು

ಹುಟ್ಟಿದಾಗ ಅಳುತಲೇ
ಹುಟ್ಟಿದ ಅವಳ ಬಿಕ್ಕುಗಳು
ಸಾವಿನಲ್ಲೇ ಕೊನೆಗೊಂಡಿದ್ದವು.

ಕುಣಿದು ಕುಪ್ಪಳಿಸಿ,
ಹಲವು ಹದಿನೆಂಟು
ಆಟಗಳ ಮಧ್ಯ
ಮೈ ಮರೆತಿರುವಾಗಲೇ
ವಧು ಪರೀಕ್ಷೆಗೆ
ಮೈ ಒಡ್ಡಬೇಕಾಯಿತು.

ಎನೂ ಅರಿಯದ ಮನಸ್ಸು
ರಂಗು ರಂಗಿನ ಕನಸುಗಳ
ಹಗಲಲ್ಲೇ ಹೆಣೆಯುತ್ತಿತ್ತು.

ಮನಸ್ಸು ಗರಿಬಿಚ್ಚಿ
ರೆಕ್ಕ ಪುಕ್ಕ ಹುಟ್ಟಿಕೊಂಡು
ಆಗಸದ ತುಂಬೆಲ್ಲ
ಹಾರಾಡುತ್ತಿತ್ತು ಹಕ್ಕಿಯಾಗಿ
ಕನಸುಗಳ ಮಹಲುಗಳು
ಸ್ವರ್ಗದ ಮೆಟ್ಟಿಲನ್ನು
ಮುಟ್ಟುತ್ತಿದ್ದವು.

ನೂರೆಂಟು ಕನಸುಗಳ
ಹೊತ್ತು ನೂತನ ವಧುವಾಗಿ
ಗಂಡನ ಮನೆ ಸೇರಿದಳು.

ವಧುವಿನ ಅರಿಶಿನ
ಆರಿ ಹೋಗುವ ಮುನ್ನ
ಅಳುತಲೇ ಹುಟ್ಟಿದ
ಅವಳ ಬಿಕ್ಕುಗಳು
ಸಾವಿನಲ್ಲಿ ಕೊನೆಗೊಂಡಿದ್ದವು.

ಅವಳಿಗರಿವಿಲ್ಲದಂತೆಯೇ
ಅವಳು ಪತ್ರಿಕೆಗಳ
ಸಾವಿನ ಕಾಲಂಗಳಿಗೆ
ಸುದ್ದಿಯಾಗಿದ್ದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾರಿದ ದಾರಿಯನರಿಯದೆ ಭಾರಿ ಹುಡುಕಿದೊಡೇನು?
Next post ಗೇಮ್ಸ್

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…