
ವರ್ಷದ ನಿಶಿಯೊಳು ಮುಗಿಲಿನ ಮರೆಯೊಳು ಇಣಿಕುವ ಚಂದ್ರನ ಜೊನ್ನದೊಲು, ಹರ್ಷವು ಮೂಡಿತು ಚಿಂತೆಯ ಸದನದಿ ಹೊಳೆಯಲು ಆಂಡಾಳಿನ ನಗೆಯು. ಜಾಜಿಯ ಮುಗುಳನು ಮುತ್ತಿಡೆ ನುಸುಳಿದ ಕಿರಣದ ಚೆಲುವಿನ ಹೊಸ ನಗೆಯು, ವ್ಯಾಜವೆ ಇಲ್ಲದೆ ಸೋಜಿಗಪಡುವಾ ಬಲು ಬಲು ಸೊ...
ಮೇಜಿನ ಮೇಲೊಂದು ರೋಜದ ಹೂವು, ಹಿಂದೆಂದು ಕಾಣದ ಸೊಗಸಿನ ಹೂವು, ಅಂದೆ ಅರಳಿದ ಹೂವು, ಸಂಜೆಗೆಂಪಿನ ಹೂವು, ಕಂಗಳು ತಂಗುವ ಸೊಗಸಿನ ರೇವು. ಬಾಲಸೂರ್ಯನ ಕಿರಣ ರಂಧ್ರದಿ ತೂರಿ, ಮಲರನ್ನು ಮುತ್ತಿಡಲು ಹೊಸ ಚೆಲುವ ತೋರಿ, ಜೀವಗೂಡಿರುವಂತೆ ಒಲವೆರೆದು ನಗ...
ಉಷೆಯ ಕಾಲ ಸೋಂಕಿನಿಂದ ಬಾನು ತಳಿತಿದೆ; ನಿಶೆಯ ಮಡಿಲನುಳಿದು ಜಗವು ಜೀವಗೊಳುತಿದೆ; ಕತ್ತಲಂಜುತೋಡುತಿಹುದು, ಬೆಳಕು ತಿರೆಯ ತುಂಬುತಿಹುದು; ನಾಡು ಮೇಡು ಕಾಡೊಳೆಲ್ಲು ಸೊಗವು ಮೂಡಿ ಬರುತಿದೆ. ತರುಗಳಿನಗೆ ಮಂಜುಹನಿಗ- ಳರ್ಘ್ಯ ಹಿಡಿದಿವೆ; ಅಲರ ಸುರಿ...
ದೇವರು ರಾಮಕೃಷ್ಣರೆ ಇರಲಿ ಹನುಮ ಗಣಪರೆ ಇರಲಿ ಎಲ್ಲರೆಲ್ಲರಿಗೆಲ್ಲ ಒಬ್ಬ ತಂದೆ ಲಕುಮಿ ಪಾರ್ವತಿ ಇರಲಿ, ದುರ್ಗೆ ಸರಸತಿ ಇರಲಿ ವಿಶ್ವಕ್ಕೆ ಒಬ್ಬನೇ ಮುದ್ದುಕಂದ ಸಂಸಾರ ಮಡದಿ ಮಕ್ಕಳ ಬಿಟ್ಟು ಗುಡ್ಡಗವಿಯನೆ ಹೊಕ್ಕು ತಪ್ಪಲನು ತಿಂದಾಗ ಯೋಗವಲ್ಲ ಮಕ್ಕ...
ನಿನ್ನ ನೆನಪು ಕಂಪು ತಂಪು ಪ್ರೀತಿ ತಳಿರ ತೋರಣಾ ಹಗಲು ಸಂಪು ಇರುಳು ಇಂಪು ಚಂದ್ರ ತಾರೆ ಪ್ರೇರಣಾ ನಿನ್ನ ಮರೆತು ಬದುಕಲೆಂತು ಎದೆಯ ಪಟಲ ತೆರೆದೆನು ನಿನ್ನ ವಿರಹ ತಾಳಲೆಂತು ಕಣ್ಣ ನೀರ ಕುಡಿದೆನು ನೀನೆ ನನ್ನ ಹಾಲು ಬೆಲ್ಲಾ ನೀನೆ ಶಾಂತಿ ಸಾಗರಾ ನೀನ...
ಕಮಲದೆಲೆಯ ಮೇಲೆ ಜಲದ ಬಿಂದು ಎಂದೂ ನಿಲ್ಲದು ವಿಮಲ ಮಾನಸ ದಲದ ಮೇಲೆ ಮಲಿನ ಚಿಂತನೆ ಬಾರದು ರಾತ್ರಿ ಸಮಯದಿ ದೂರಗಾಮಿ ದೀಪ ಹೇಗೆ ಹೊಳೆವುದು ಹಾಗೆ ಮಸ್ತಕ ಮಣಿಯು ಫಳಫಳ ಹೊಳೆದು ಕತ್ತಲೆ ಕಳೆವುದು ಎರಡು ಕಣ್ಣೊಳು ಜ್ಞಾನಯೋಗದ ಜೋಡು ದೀಪಾ ಬೆಳಗಲಿ ಆತ್...
ಸದಾ ಖುಶಿಯಲಿ ನಗೆಯ ಹೊನಲಲಿ ಚಂದ್ರಮಂಚವ ತೂಗೋಣ ಸದಾಶಿವನನು ಹಾಡಿ ಕುಣಿಯುತ ಮಧುರ ಮಿಲನವ ಪಡೆಯೋಣ ಏನೆ ಆಗಲಿ ಏನೆ ಹೋಗಲಿ ಆದುದೆಲ್ಲವು ಒಳಿತಿಗೆ ಏನೆ ದೊರಕಲಿ ಏನೆ ಕಳೆಯಲಿ ನಡೆದುದೆಲ್ಲವು ಗುರುವಿಗೆ ಯಾರು ನಮಗೆ ಏನೆ ಅಂದರು ಪ್ರಭುವಿಗರ್ಪಿತ ಶಿ...
ನಾನು ಸುಂದರ ಗಗನ ದೇವತೆ ಮುಗಿಲ ತುಂಬಾ ಹಾರಿದೆ ಜ್ಞಾನ ಯೋಗದ ರಕ್ಕೆ ಬೀಸುತ ಸೂಕ್ಷ್ಮ ಲೋಕವ ಸೇರಿದೆ ಹಕ್ಕಿಯಾಗಿ ರೆಕ್ಕೆ ಬೀಸಿದೆ ಮೇಲು ಮಂದಿರ ತಲುಪಿದೆ ಶಿಖರ ಮಂದಿರ ಮುಕುರ ಮಂದಿರ ಸಕಲ ಸುಂದರವಾಗಿದೆ ಜಡದ ದೇಹದ ಜಡದ ಕೊಡಗಳ ಜಂಗು ಜಾಡನು ದಾಟಿದ...
ವರಾ ಬಂದಾ ಸರಾ ತಂದಾ ಎತ್ತ ಹೋದಳು ರೂಪಸಿ ಯಾಕ ನಾಚಿಗಿ ಯಾಕ ಅಂಜಿಕಿ ಯಾಕ ನಿಂತಳು ದೇವಕಿ ದೂರ ಮುಗುಲಾ ಹನಿಯ ನಿಬ್ಬಣ ನೀರ ಹಬ್ಬವ ತಂದಿತ ಬಿಸಿಲು ಸತ್ತಿತ ಢಗಿಯು ಬತ್ತಿತ ಕಣ್ಣು ಶೀತಲವಾಯಿತ ಕರಿಯ ಮಾಡದಿ ರವಿಯು ಮಲಗಿದಾ ಕನಸು ಬಾಗಿಲ ತೆರೆಯಿತ ಕ...













