Home / K Sharifa

Browsing Tag: K Sharifa

ಒಣಗಿದ ನನ್ನವ್ವನ ಎದೆಯಿಂದ ಝಲ್ಲೆಂಬ ಜೀವರಸ ಬತ್ತಿ ಎಂದಿಗೂ ಬಾಯಿ ತುಂಬಾ ಗುಟುಕು ಎಟುಕಲಿಲ್ಲ ನನ್ನ ಬಾಯಿಗೆ. ಏಕೆಂದರೆ ನನ್ನಪ್ಪನ ಕಷ್ಟಗಳು ಅವಳಿಗೆ ಹೊಟ್ಟೆ ತುಂಬಿಸಲಿಲ್ಲ. ಬಡತನದ ಬೇಗೆಯಿಂದ ಬೇಸತ್ತು ನನ್ನಪ್ಪ – ನನ್ನವ್ವನಿಗೆ ಅಡವಿಟ್...

ಭಾರತೀಯ ನಾರಿ, ಪಾವಿತ್ರತೆಯ ಬಣ್ಣ ಸಾರಿ ಗೋರಿಯಾಗುತ್ತಿರುವಳಿ೦ದು ಹೃದಯ ಹೀನರ ನಾಡಲಿ ಮಾರುಕಟ್ಟೆಯಲ್ಲಿಂದು ಮಾರಾಟದ ಸರಕಾಗಿರುವಳು, ಹೃದಯ ಹೀನರ ನಾಡಲಿ ಕೇವಲ ವಸ್ತುವಾಗಿಹಳು. *****...

ಕನ್ನಡಿಯ ಎದುರು ಅಪರೂಪಕ್ಕೆ ಕೂತ ನಾನು ದಿಟ್ಟಿಸಿ ನೋಡಿದೆ ನನ್ನ ಬಿಂಬ ನನ್ನನ್ನೇ ಅಣಕಿಸುವಂತೆ ಕಂಡಿತು ಸಿಟ್ಟಿನಿಂದ ಮುಷ್ಟಿ ಬಿಗಿ ಮಾಡಿ ಜೋರಾಗಿ ಹೊಡೆದೆ ಕನ್ನಡಿ ಚೂರು ಚೂರಾಗಿ ನೆಲಕ್ಕೆ ಬಿದ್ದು ಒದ್ದಾಡಿ ಹೇಳಿತು “ಇದರಲ್ಲಿ ನನ್ನದೇನು...

ರಾಮನನ್ನು ದೇವರಾಗಿಸಿ ಗಳಿಸಿದವರು ಸಾವಿರಾರು ಬಾಬರನಿಗೆ ಗೋರಿಕಟ್ಟಿ ಗಳಿಸಿದವರು ಸಾವಿರಾರು ಎಲುಬಿನ ಗೂಡಾದ ನಿನ್ನನ್ನೇ ಬಂಡವಾಳ ಮಾಡಿಕೊಂಡು ಸುಲಿದವರು ಸಾವಿರಾರು. *****...

ಕಾರ್ಖಾನೆಗಳಿಂದ ಹೊರ ಬರುವ ಹೊಗೆ, ವಾಹನಗಳಿಂದ ಬರುವ ಪೆಟ್ರೋಲಿನ ವಾಸನೆಗೆ ಉಸಿರುಗಟ್ಟಿಸುವ ಧಗೆ ದುರ್ಗಂಧದ ಅಲೆಗೆ ಹೆದರಿ ಓಡೋಡಿ ಸುಸ್ತಾಗಿ ಶುದ್ಧ ಗಾಳಿ ಸಿಗದೆ ಕಲುಷಿತಗೊಳಿಸಿದ ಕೃತಕ ನಾಗರೀಕತೆಯ ರಣ ಹದ್ದಿನ ಗೂಡಿಗೆ ವಿಧಿಯಿಲ್ಲದೇ ಮತ್ತೇ ಮರಳ...

ಮಂಗಳ ಸೂತ್ರಕ್ಕೆ ಮೂರ್‍ಹೊತ್ತು ಪೂಜಿಸಿ ಕಣ್ಣಿಗೊತ್ತಿಕೊಳ್ಳುವ ನಮ್ಮೂರ ಗರತಿ ಗಂಡನಿಲ್ಲದ ಹೊತ್ತು ಪಕ್ಕದ ಮನೆಯವನ ಒಳಗಿಟ್ಟುಕೊಂಡು ಬಾಗಿಲಿಗೆ ಚಿಲಕ ಜಡಿದದ್ದು ಕಂಡು ಬೆರಗಾಗಿ ನಿಂತೆ *****...

ಬದುಕಿನ ದೀರ್ಘ ಪಯಣದಲ್ಲಿ ಹೊಳೆದಂಡೆಗೆ ಕುಳಿತು ನೀನು ಯೋಚಿಸುವೆ ಏನನ್ನು? ನೀನೆಲ್ಲಿ ಹೋದರೂ ಹಿಂದೆಯೇ ಬರುತ್ತವೆ ನಿನ್ನ ಭೂತದ ನೆನಪುಗಳು. ಘೋರ ರಾತ್ರಿ ಕಳೆದು ಮುಂಜಾವಿನ ನಸುಕು ನಿನ್ನ ಗೋಳನ್ನು ಮೀರಿ ಉದಯಿಸುತ್ತಿರುವ ಸೂರ್ಯ ಕಾಲನ ಕೈಗೆ ಸಿಕ್...

ನೀವು ಕೇಳುತ್ತೀರಿ ವಿಂಡ್ಸರ್ ಮ್ಯಾನರ್ ರಸ್ತೆ ಬದಿಯಲ್ಲಿರುವ ಡೇರಿ ಹೂಗಳ ಮೇಲೆ ಕಪ್ಪು ಎಣ್ಣೆ ಸವರಿದವರ್‍ಯಾರೆಂದು? ಗುಲಾಬಿ, ಹೂಗಳ ಬಣ್ಣ ಕಪ್ಪಾಗಿರುವುದು ಯಾಕೆಂದು ವಿಸ್ತರಣೆಯ ನೆಪದಲ್ಲಿ ಕೈಗಾರಿಕೀಕರಣ ಶಾಸ್ತ್ರದಲ್ಲಿ ಹುದುಗಿರುವ ಸಂಸ್ಕೃತಿ ಇ...

ವರ್ಷಗಳೇ ಕಳೆದವು ಭೂಪಾಲದ ಬಿಕ್ಕುಗಳು ನಿಂತು ಹೋಗಲಿಲ್ಲ. ರೋದನ ಶಾಂತವಾಗಲಿಲ್ಲ. ಕಾರ್ಖಾನೆಗಳು ಉಗುಳಿದ ಕಪ್ಪನೆಯ ವಿಷಗಾಳಿ ಕೊಲೆಯಾಯ್ತು ಊರೆಲ್ಲಾ ಸ್ಮಶಾನವಾಯ್ತು. ರಹಸ್ಯ ರಾತ್ರಿಯಲಿ ಕರಾಳ ಕೈಗಳು- ಛಸನಾಲಾ ದುರಂತದ ಗಣಿಯಿಂದ ಇಣುಕುತ್ತಿರುವ ಅಸ...

ಕಣ್ಣೀರು ಬತ್ತಿಹೋದ ನನ್ನ ಗುಳಿಬಿದ್ದ ಕಣ್ಣುಗಳಲ್ಲಿ ನೋವಿನ ಸೆಳಕು ಏಕೆಂದರೆ ಮೊಗ್ಗಗಳು ಬಿರಿವಾಗ ಹಸಿರುಟ್ಟು ನಲಿವಾಗ ನನ್ನ ಸುಕ್ಕುಗಟ್ಟಿದ ಕಪ್ಪು ಮುತ್ತಿದ ಕಣ್ಣುಗಳು ಯಾತನೆಯಿಂದ ಹನಿಗೂಡುತ್ತಿದ್ದವು. ಎಣ್ಣಿಗಟ್ಟಿ ಮಸುಕಾದ ಭಾರವಾಗಿ ಜೋತುಬಿದ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...