ಕನ್ನಡಿಯ ಎದುರು
ಅಪರೂಪಕ್ಕೆ ಕೂತ ನಾನು
ದಿಟ್ಟಿಸಿ ನೋಡಿದೆ
ನನ್ನ ಬಿಂಬ ನನ್ನನ್ನೇ
ಅಣಕಿಸುವಂತೆ ಕಂಡಿತು
ಸಿಟ್ಟಿನಿಂದ
ಮುಷ್ಟಿ ಬಿಗಿ ಮಾಡಿ
ಜೋರಾಗಿ ಹೊಡೆದೆ
ಕನ್ನಡಿ ಚೂರು ಚೂರಾಗಿ
ನೆಲಕ್ಕೆ ಬಿದ್ದು
ಒದ್ದಾಡಿ ಹೇಳಿತು
“ಇದರಲ್ಲಿ ನನ್ನದೇನು ತಪ್ಪು?”
*****

ಕನ್ನಡ ನಲ್ಬರಹ ತಾಣ
ಕನ್ನಡಿಯ ಎದುರು
ಅಪರೂಪಕ್ಕೆ ಕೂತ ನಾನು
ದಿಟ್ಟಿಸಿ ನೋಡಿದೆ
ನನ್ನ ಬಿಂಬ ನನ್ನನ್ನೇ
ಅಣಕಿಸುವಂತೆ ಕಂಡಿತು
ಸಿಟ್ಟಿನಿಂದ
ಮುಷ್ಟಿ ಬಿಗಿ ಮಾಡಿ
ಜೋರಾಗಿ ಹೊಡೆದೆ
ಕನ್ನಡಿ ಚೂರು ಚೂರಾಗಿ
ನೆಲಕ್ಕೆ ಬಿದ್ದು
ಒದ್ದಾಡಿ ಹೇಳಿತು
“ಇದರಲ್ಲಿ ನನ್ನದೇನು ತಪ್ಪು?”
*****