ಮಂಗಳ ಸೂತ್ರಕ್ಕೆ
ಮೂರ್‍ಹೊತ್ತು ಪೂಜಿಸಿ
ಕಣ್ಣಿಗೊತ್ತಿಕೊಳ್ಳುವ
ನಮ್ಮೂರ ಗರತಿ
ಗಂಡನಿಲ್ಲದ ಹೊತ್ತು
ಪಕ್ಕದ ಮನೆಯವನ
ಒಳಗಿಟ್ಟುಕೊಂಡು
ಬಾಗಿಲಿಗೆ ಚಿಲಕ ಜಡಿದದ್ದು ಕಂಡು
ಬೆರಗಾಗಿ ನಿಂತೆ
*****