ಮಳೆ – ಹುಳ

೧ ರಸ್ತೆ ಲೈಟು, ಅದರ ಸುತ್ತ ಮುತ್ತಿದ ಹುಳಗಳನ್ನೆಲ್ಲಾ ನೋಡಿದಾಗ ಪಕ್ಕನೆ ನೆನಪಾಗುತ್ತದೆ ರಾಜಕಾರಣಿ ಮತ್ತು ಚೇಲಗಳು ಇಷ್ಟೇ ವ್ಯತ್ಯಾಸ ಅಲ್ಲಿ ಸಾಯುತ್ತವೆ ಇಲ್ಲಿ ಸಾಯಿಸುತ್ತಾರೆ. ೨ ಮಳೆಯ ಮರುದಿನ ಇರುವೆಗಳಿಗೆ ಜಾತ್ರೆಯೋ ಜಾತ್ರೆ...

ವೇದಾಂತ

ವೇದಾಂತ ಹೇಳಬಹುದು ಎಲ್ಲರೂ ಕೇಳಬಹುದು ಶಾಲನ್ನು ಸುತ್ತಿಕೊಂಡು ಬಿರುದನ್ನು ಧರಿಸಿಕೊಂಡು ವ್ಯಾಖ್ಯಾನ ಮಾಡಬಹುದು ಪುಸ್ತಕವ ಬರೆಯಬಹುದು ವೇದಾಂತ ಸಮಯಕ್ಕೆ ಬರುವುದೇನು ? ಕರುಳನ್ನು ಸಂತವಿಡಲಪ್ಪುದೇನು ? ಕಷ್ಟಗಳು ಬಂದು ಮುತ್ತಿ ದುಃಖಗಳು ಬಂದು ಒತ್ತಿ...

ಅದೇ ಯುಗಾದಿ

ಅದೇ ಯುಗಾದಿ ಹಳೇ ಯುಗಾದಿ ಹರ್ಷವಿಲ್ಲ! ವರ್ಷ ವರ್ಷದಿ ಯುಗಾದಿ! ಅದೇ ಚಿಗುರು, ಹಳೇ ಒಗರು, ಹಳತಿನಲ್ಲಿ ಹೊಸತಿದೆ ಮಾವು, ಬೇವು, ಎಲೆಯು ಉದುರಿ, ಮತ್ತೇ ಅಲ್ಲೇ ಚಿಗರಿದೆ ಇಳೆಗೆ ಕಳೆಯು, ಹೊಳೆವ ತೋರಣ...

ಪಯಣ

ಏತಕೋ ನಾನಿಲ್ಲಿ ಸುಳಿಯುತಿಹೆನು ಆವುದೋ ಬೆನ್ನಟ್ಟಿ ಬರುತಲಿಹುದು ಆವುದೋ ಕೈಸನ್ನೆ ಗೆಯ್ಯುತಿಹುದು ಲಗ್ಗೆಯೋ ದಿಶೆದಿಶೆಗು ಮೊಳಗುತಿಹುದು ಪಾಶವೋ ಕಂಡತ್ತ ಸೆಳೆಯುತಿಹುದು ರೂಪವೋ ಕಣ್‌ತುಂಬಿ ಹನಿಸುತಿಹುದು ಭಾವವೋ ರಭಸದಿಂ ಹರಿಯುತಿಹುದು ಪಯಣವೋ ಚಣಚಣಕು ಸಾಗುತಿಹುದು ಈಗಲೋ...

ಹೇಳದಿದ್ದರು ನೀನು

ಹೇಳದಿದ್ದರು ನೀನು ಎಲ್ಲ ಬಲ್ಲೆನು ನಾನು ಏನಿದೆ ಎಂದು ಎದೆಯಾಳದಲ್ಲಿ; ನಿನ್ನ ಕಣ್ಣಿನೊಳೇನೊ ನೋವು ತೇಲುತ್ತಿಹುದು ಕರಿಮೋಡ ಸುಳಿದಂತೆ ಬಾನಿನಲ್ಲಿ ನೂರು ಹಳೆ ನೆನಪುಗಳು ಚೀರಿ ಹೊಮ್ಮುತ್ತಲಿವೆ ಮರವೆಯಲಿ ಹುಗಿದರೂ ಮೇಲಕೆದ್ದು; ನಮ್ಮ ಮೇಲೇ...

ಒಂದು ಕಾಗದ

ನಿಮ್ಮ ಪತ್ರ ಬಂದು ಸೇರಿ ಎರಡು ಮೂರು ಬಾರಿಯೋದಿ ಎಲ್ಲ ತಿಳಿದೆನು. ನೀವು ನನಗೆ ಗಂಡನಲ್ಲ ನಾನು ನಿಮಗೆ ಹೆಂಡಿರಲ್ಲ ನೀವು ತಿಳಿವುದು. ಕುಂಟು ಕಾಲು ಬಚ್ಚು ಬಾಯಿ ಮೆಳ್ಳುಗಣ್ಣು, ನಿಮ್ಮ ಸೇವೆ ಮಾಡಲಾರೆನು....

ನೆನಪುಗಳಿವೆ… ಕೊಳ್ಳಿ!

ಪೆರ್‍ಲಾಜ್ಜ... ನೆಟ್ಟ ಆಲದ ಮರದಲಿ, ಮೊಮ್ಮಕ್ಳು ಮರಕೋತಿ ಆಡಿದ್ದು ನೆನಪು. ಮರಿ ಮಗಾ ಬುಗುರಿ ಕೆತ್ತಿ, ದಾರ ಸುತ್ತಿ, ‘ಗುಯ್’...ಽಽ ಎಂದು, ಊರುಕೇರಿ ಆಲಿಸುವಂತೆ, ‘ಗುಯ್’ ಗುಟ್ಟಿಸಿದ್ದ! ಆಕ್ಷಣ: ಏನೆಲ್ಲ ಮರೆತು, ಬಾಲ್ಯಕೆ ಜಾರಿದ...

ದಿಗ್ವಿಜಯ

ತಂದಿಹೆಯ ತಕ್ಕಡಿಯ ತೂಗುವುದಕೆ? ಭೂಮಿ ಆಕಾಶಗಳು ಸಾಲವಿದಕೆ. ಚಾಚಿಹೆಯ ನಾಲಿಗೆಯ ಸವಿಯುವುದಕೆ? ಒಂದಲ್ಲ, ಎರಡಲ್ಲ ನುಂಗುವುದಕೆ. ಮಾಡಿಹೆಯ ಲೆಕ್ಕವನು ತಿಳಿಯುವುದಕೆ? ದಾಟಿಹುದು ಸಂಖ್ಯೆಗಳ ಲೆಕ್ಕವೇಕೆ? ನೀಡಿಹೆಯ ಕರಗಳನು ಹಿಡಿಯುವುದಕೆ? ಗೋಳವಿದು ತುದಿಮೊದಲು ತೋರದಿದಕೆ. ಕಂಗಳನು...

ಎಂಥ ಗೋಪೀ ಕಣ್ಣೊಳೆಂಥ ಶಾಂತಿ!

ಎಂಥ ಗೋಪೀ ಕಣ್ಣೊಳೆಂಥ ಶಾಂತಿ! ಕೆನೆ ಹಾಲು ಮೈ ಚಿನ್ನ, ಸೂರ್ಯಕಾಂತಿ ಹಾಲು ಗಡಿಗೆಯ ಹೊತ್ತು ತಲೆಯ ಮೇಲೆ ಸೆರಗಿಳಿಸಿ ಬೆಡಗಲ್ಲಿ ಹೆಗಲ ಮೇಲೆ ಮುಡಿದ ಮಲ್ಲಿಗೆ ಕಂಪ ಸುತ್ತ ಹರಡಿ ನಡೆಯುವಳು ನನ್ನ...