
ಕವೀಶ್ವರ, ಸುಹೃದ್ವರ, ನಿನ್ನ ಸಿರಿಗನ್ನಡದ ಮಾತಿನೊಳು ಮೂಡುತಿಹ ಭವ್ಯ ಸುಂದರ ಕಾವ್ಯ- ಕೋತು, ನುಡಿಯ ಬೆಡಗು ಹಾಡಿನ ಗುಂಗು ಊಹೆಯ ನವೋನವ್ಯತೆ ಭಾವನೆಯ ಉದಾರತೆ-ಇವಕೆ ಮನಸೋತು ರಸಾರ್ದ್ರಸ್ವಾಂತದಿಂ ಭಾವಿಪೆನು: ಆವ ಬೀಳಾಸೆಯಿಂದಾದಾವ ಶಾಪಕ್ಕೊ ಆವ ದ...
ಕೌರವನೆದೆಯಲಿ ಕಮಲವು ಅರಳಲಿ ರಾವಣನಾಗಲಿ ಗಿಳಿಹಕ್ಕಿ ಭುವನದ ಮನುಜರು ಜೇಂಗೊಡವಾಗಲಿ ಮೂಡಲಿ ಮಿನುಗಿನ ಹೊಸ ಚುಕ್ಕಿ ಮಂದರ ಗಿರಿಯಲ್ಲಿ ಮಧುಮಯ ಸಿರಿಯಲಿ ವಧುವಾಗಿರುವಳು ಋಷಿಕನ್ಯೆ ನವೋದ್ಯಾನದ ತೂಗುಯ್ಯಾಲೆಗೆ ಬಾಗುತ ಬಂದಳು ರಸಕನ್ಯೆ ಪಡೆಯುವದೇನಿದೆ...
೧ ದೇವರನೆಯದೆ ಕಾವ್ಯದ ರಚನೆಯೆ ನುತಿಯುರಿ ಇಲ್ಲದೆ ಭಾವದ ಪಚನೆಯೆ? ತಪ್ಪಿದನಾದೊಡೆ ತಿದ್ದುವೆನೀಗ ದೇವತೆಯೊಂದನು ನೆನೆ ಮನ ಬೇಗ- ಎನಲೀ ನಗೆಬಗೆಗಿಂಬಾಗುತ್ತ ಬಂದಿತು ಬೆನಕನ ಭಾವನೆಯಿತ್ತ. ಬುದ್ಧಿಯ ನೀಡೈ ಗಣಾಧಿನಾಯಕ ಸಿದ್ಧಿಯ ತೋರೈ ಗಣಾಧಿನಾಯಕ ವಿ...
ಯಾಕೆ ಗುಂಡು ಗಜಗದಾಟ ನಮ್ಮ ನಾವು ಮರೆತೆವೆ ಯಾಕೆ ರಕ್ತ ರುಂಡ ಮುಂಡ ನಮ್ಮ ಮನೆಯ ಸುಟ್ಟೆವೆ ನೋಡು ಒಂದೆ ನೀಲ ಗಗನ ಒಂದೆ ತಾಯಿ ಧರಣಿಯು ಒಂದೆ ಕುಲವು ಮನುಜ ನೆಲವು ಯಾಕೆ ಗಡಿಗಿ ಭರಣಿಯು ನಾವು ಹೂವು ಹಸಿರು ಹಕ್ಕಿ ನಾವು ನಗುವ ಮಕ್ಕಳು ನಾವು ಚುಕ್ಕಿ...
ನರಸತ್ತ ಶಿವಧರ್ಮ ಬ್ಯಾಡ ಬ್ಯಾಡೋ ಯಪ್ಪ ಸತ್ತವನು ಶಿವಯೋಗಿ ಆಗಲಾರ ಇದ್ದವನು ಬಿದ್ದವನು ಎದ್ದೋಡಿ ಹೋದವನು ಶಿವಶಿವಾ ಶಿವಯೋಗಿ ಆಗಲಾರ ಪಟ್ಟೆ ಭಸಿತವ ಇಟ್ಟು ಲಿಂಗಬೆಟ್ಟವ ಕಟ್ಟಿ ಕಟ್ಟೀಯ ವಾಚಾಳಿ ಶರಣನಲ್ಲ ಹಗಲೊಂದು ಪರಿನಿದ್ರಿ ಇರುಳೊಂದು ಪರಿನಿದ...
ಭವದುರ್ಗವಿಪಿನದೊಳು ಗಮ್ಯವರಿಯದೆ ತೊಳಲಿ ಶ್ರಾಂತಿಯಿಂ ಭ್ರಾಂತಿಯಿಂ ಗತಿಗೆಟ್ಟು ಮತಿಗೆಟ್ಟು ಮುಂತನರಿಯದೆ ನಿರಿಹಪರನಾಗಿ, ಅಂದಾರ್ತ ಪ್ಲವಗವಾಹಿನಿ ವಿಂಧ್ಯಕಾನನದಿ ಬಳಿಗೆಟ್ಟು ನಿರೀಹಮಾಗಿ ಋಕ್ಷ ಬಿಲಮುಖದಿ ನಿಂದವೊಲು, ಧರ್ಮಗಹ್ವರ ಮುಖದಿ ಶಂಕಿಸುತ...
ಮಳೆಯ ನಾಡಿಗೆ ಚಳಿಯ ನಾಡಿಗೆ ಹಸಿರ ಕಾಡಿಗೆ ಬಂದೆನೆ ಹೂವು ಹೂವಿಗೆ ದುಂಬಿ ದುಂಬಿಗೆ ಮುತ್ತು ಕೊಡುವುದ ಕಂಡೆನೆ ಚಿತ್ರ ಚಲುವಿಯ ಕಂಡೆನೆ || ನೀಲ ಗಗನದಿ ಮೇಘ ಮಯೂರಿ ಕುಣಿವ ರಾಸವ ಸವಿದೆನೆ ಒಣಗಿ ಹೋದಾ ಕಣ್ಣ ಹೊಂಡದಿ ಬಣ್ಣ ತುಂಬಿಸಿ ನಲಿದೆನೆ ಕಣ್ಣ...
ಲಘುವಾಗೆಲೆ ಮನ ಗೆಲವಾಗೆಲೆ ಮನ ಹಾರು ನನ್ನ ಬಿಟ್ಟು ಹಾರಿ ಹರಿಯ ಮುಟ್ಟು ||ಪ|| ನನಗಂಟಲು ನೀನಾಗುವೆ ಕಶ್ಮಲ ನನ್ನ ತೊರೆಯೆ ನೀ ನಿರ್ಮಲ ನಿಷ್ಕಳ ಹರಿಯೊ ನನ್ನ ಬಿಟ್ಟು ಮುಂಬರಿದು ಹರಿಯ ಮುಟ್ಟು. ನೀಲದಾಗಸದ ಹರಹೊಳು ಹಾರುತ ಅಂಚೆಯಂತೆ ಮುಗಿಲಂಡನು ಸ...













