ಹುಡುಕಾಟ
ಎಣ್ಣೆ ದೀಪದ ಬೆಳಕಿನ ಪ್ರೀತಿ ಬದುಕಿನ ಅರ್ಥ ಅಜ್ಞಾನಿಗಳಲಿ ಕಂಡಷ್ಟು- ಹಂಡ್ರೆಡ್ ವ್ಯಾಟ್ಸ್ ರಾಶಿಯ ಬೆಳಕಿನಲ್ಲಿ ಈಗ ಹುಡುಕಾಡುತ್ತ ಬಿ.ಪಿ. ಏರಿಸಿಕೊಳ್ಳುತ್ತಿದ್ದೇವೆ. *****
ಎಣ್ಣೆ ದೀಪದ ಬೆಳಕಿನ ಪ್ರೀತಿ ಬದುಕಿನ ಅರ್ಥ ಅಜ್ಞಾನಿಗಳಲಿ ಕಂಡಷ್ಟು- ಹಂಡ್ರೆಡ್ ವ್ಯಾಟ್ಸ್ ರಾಶಿಯ ಬೆಳಕಿನಲ್ಲಿ ಈಗ ಹುಡುಕಾಡುತ್ತ ಬಿ.ಪಿ. ಏರಿಸಿಕೊಳ್ಳುತ್ತಿದ್ದೇವೆ. *****
ಹೊಳೆ ನೀರು, ಹಳ್ಳದ ನೀರು, ಕೆರೆ ನೀರು, ಕೊಳ್ಳದ ನೀರು, ಬಾವಿ ನೀರು, ನಲ್ಲಿ ನೀರು, ಚರಂಡಿ ನೀರು, ಬರ್ಫು ನೀರು, ಸಮುದ್ರ ನೀರು, ನಿಂತ ನೀರು, […]
ಮಳೆ ಹನಿಗಳನ್ನು ಆರಿಸಿ ಹಳ್ಳ ಹೊಳೆಗಳಲ್ಲಿ ತುಂಬಿಸಿ ಕೊನೆಗೆ ಸಮುದ್ರದ ಸೇಫ್ಟಿ ಲಾಕರ್ ದಲ್ಲಿ ಇಟ್ಟುಬಿಡುತ್ತದೆ ಭೂಮಿ *****
ಸಮುದ್ರ ರಾಜ ನೀನದೆಷ್ಟು ಬಕಾಸುರನಪ್ಪ ಸಿಕ್ಕದ್ದನೆಲ್ಲಾ ತಿಂದು ತೇಗಿ ಹೊಳೆ ಹಳ್ಳಗಳನ್ನೆಲ್ಲಾ ನುಂಗಿ ಮೇಲೆ ಲಕಲಕನೆ ಹೊಳೆಯುತ್ತೀಯಲ್ಲ! ರೋಮನ್ ಟಾರ್ಜನ್ ತರಹ!! *****
ಆಕಾಶದಲ್ಲಿ ಏರ್ ಕಂಡಿಶನ್ ಬಾಕ್ಸ್ ಚಂದ್ರ ಇಡೀ ರಾತ್ರಿ ದೇಶಕ್ಕೆಲ್ಲಾ ತಂಪುಸುರಿಸಿ ಮರೆಸುವನು ಕೃತಕ ಏ.ಸಿ, ಫ್ಯಾನ್ ಗಾಳಿ *****
ವರ್ಷಂಪ್ರತಿ ಮೆರೆದು ಮೆರೆದು ಸುಸ್ತಾದ ಚಂದ್ರ ಚುಕ್ಕೆಯರು ಮಳೆಗಾಲದಲ್ಲಿ ಮೋಡದ ಕರ್ಟನ್ ಎಳೆದು ಬೆಚ್ಚಗೆ ಮಲಗಿಬಿಡುತ್ತಾರೆ *****
ಸೂರ್ಯ ಮಗನೆಂದಾದರೆ ತಾಯಿ ಸಮುದ್ರವಾಗಿರಲೇ ಬೇಕು ರೊಚ್ಚು ಕಿಚ್ಚಿನ ಮಗನ ಸಂತೈಸುವಳು ತಾಯಿ ತನ್ನ ಉಡಿಯಲಿ ಹಾಕಿಕೊಂಡು. *****
ಎಂಟಾನೆಂಟು ದಿನಗಳವರೆಗೆ ಎಡಬಿಡದೆ ಕಿಟಕಿ ಒದ್ದು ಕಾಚು ಒಡೆದು ನನ್ನ ತಲೆದಿಂಬಿಗೆ ಇಂಬಾಗಿ ನನ್ನ ರಂಗೇರಿಸುವವ- *****