Home / Kasturi Bayari

Browsing Tag: Kasturi Bayari

ಹರಿದ ಸಂಜೆಯ ಗುಂಗು ಪರಿಮಳಕ್ಕೆ ಅರಳಿದ ಹೂ ಸುಳಿಸುಳಿದ ಬಯಲ ಬೆಟ್ಟಗಾಳಿ ನಾನಿನ್ನ ನೋಟದೊಳಗೆ ಇಳಿದು ನೀಲ ಬಾನಲಿ ಕಾಮನಬಿಲ್ಲು. ಅತ್ತ ಕಂದನ ಮೃದು ಕೆನ್ನೆಯಲಿ ಇಳಿದ ಹನಿಬಿಂದು ಎದೆಯ ಹಾಲು ನಿನ್ನುಸಿರು ತಾಗಿದ ನವಜೀವ ನಗುತ ಪ್ರೇಮದೌತಣ ಉಂಡು ಘನವ...

ಪ್ರತಿ ಕ್ಷಣದಲ್ಲಿ ಪ್ರೀತಿ ಅಲೆ ಅಲೆಗಳಲಿ ನಿರಾಳ ಪ್ರೇಮ ಹುಟ್ಟಿದ ತಂಪು ತೂಗಿ ತೂಗಿ ತಿಳಿಗಾಳಿ ಗದ್ದೆ ಬಯಲು ಎದೆ ತುಂಬಿ ಹಾಡಿದ ಸುಗ್ಗೀ ಪದ ಜೀವನ ಜನಪದ ಕಣ್ಣುಗಳರಳಿಂದ ಕಾಂತಿ ಹರಿಸಿದ ನೇತ್ರಾವತಿ. ಹರಿಯುವ ಹರಿಗೋಲು ಹಾಯ್ದು ಧಾರಿಣಿ ಮದು ಸೂಸಿ...

ನೇತ್ರಾವತಿ ಮೈ ತುಂಬಿಕೊಂಡ ಕರಿಚಂದ್ರ ಕಾಳ ಸೀರೆ ಎಲ್ಲೆಲ್ಲೂ ನಾನೀ ನೂಲಿನೆಳೆಯ ಕಸೂತಿ ಅದು ಕರುಳ ಬಳ್ಳಿ ಹಬ್ಬಹರಡಿ ಮುರಗಿ ಹೆಣಿಕೆಯ ವಂಕಿ ಚಿತ್ತಾರ ನಡೆಯ ನಾಜೂಕು ಹರವು ಖುಷಿ ಪ್ರೀತಿಯ ಕುಸುರಿ ಕಣ್ಣರಳಿ ಮದುವೆ ಮನೆ ಕೋಮಲ ಎಳೆಹಾಸು ಮೃದು ಮನದ ...

ಸದಾ ತನ್ನ ಆಕಾರ ಬದಲಿಸುತ್ತಾ ನೋಟಕ್ಕೆ ದಕ್ಕಿ ಕೈಗೆ ನಿಲುಕದ ಫಳ ಫಳ ಹರಿಯುವ ಹಾಸುಬೀಸು ತೆಂಗು ಸಾಲುಸಾಲು ಹಕ್ಕಿ ರೆಕ್ಕೆ ಬಿಚ್ಚಿ ತೇಲಿ ಬಂದು ಮೋಡವಿರದ ಶುಭ್ರನೀಲಿ ನೆಲಮುಟ್ಟದೇ ಅಲೆಯುತ್ತಿದ್ದಾಳೆ ನೇತ್ರಾವತಿ. ಗಾಳಿ ತೀಡಿ ಅಂತರಾಳದಿಂದ ನೆಲದಾ...

ನಿನ್ನ ನೆನಪಿನ ಬತ್ತಿ ಹೊಸೆದು ಹೊಸೆದು ಎದೆಯ ಹಾಲೆರೆದು ಪಣತಿಯ ಹಚ್ಚಿಟ್ಟೆ ಕಾರ್ತೀಕದ ಇರುಳ ಸಂಜೆಯ ಮರುಳಭಾವಕೆ. ಬಾ ನೀನು ಬೆಳಕಿನ ಗೆರೆಗುಂಟ ಮಾಡಿನ ಕದವ ತೆರೆದು ತೇಜ ತುಂಬಿದ ಹಾಸುಬೀಸು ಜೀವ ಜೀವದ ಬೆಸುಗೆ ಪ್ರೇಮ ರಾಗಕೆ. ಮಣ್ಣ ಕಡೆದ ಸಣ್ಣ ಮ...

ದೀಪವಾರಿಸಿದ ಕತ್ತಲೆ ಕೋಣೆಯಲಿ ಕಣ್ಣಿಗೆ ಏನೂ ಕಾಣಿಸುವುದಿಲ್ಲ ಬರೀ ನಿಟ್ಟುಸಿರು ಕೇಳುತ್ತದೆ. ಮಲಿನಗೊಂಡ ರಾತ್ರಿ ಕಪ್ಪಿನಲಿ ಹೂಗಳು ಅದ್ದಿ ಒದ್ದೆಯಾಗಿವೆ ಕಣ್ಣೀರಿನಲಿ ಇಬ್ಬನಿ ಹನಿಗಳು ಮಾಯವಾಗಿವೆ. ಕಣ್ಣಿನ ಕಾಡಿಗೆ ಕರಗಿ ಹೋಗಿಕೆನ್ನೆ ತುಂಬ ವಿ...

ಎಲೆ ಹಸಿರು ಹೂವು ಮುಡಿದು ಆಳ ನಿರಾಳಕ್ಕಿಳಿದ ಬೇರುಗಳ ಹರವಿ ಹರಡಿ ಹಾಸಿ ಬೀಸಿದ ತಂಗಾಳಿ ಬಯಲ ಬಾನ ತುಂಬ ತೇಲಿ ತೇಲಿಸಿದೆ ಹಾಸು ನಿಂತಮರ. ಹನಿಸುತ್ತದೆ ವರ್ಷವೈಭವದ ಸೊಗಸು ನಲಿದು ಒಲಿದು ಬಂದ ದುಂಬಿ ಝೇಂಕಾರ ಗಂಧ ಸುಗಂಧ ಮೀರಿ ಮಂದಸ್ಮಿತ ಬೀರಿಗಿಳ...

ಕನಸುಗಳು ಹೆಚ್ಚಿ ರಾತ್ರಿ ಕಪ್ಪು ಕಾಡಿಗೆ ಕಣ್ಣುಗಳಿಗೆ ಮರದಲಿ ಸದ್ದಿಲ್ಲದೇ ಅರಳುವ ಎಲೆಗಳೂ ಹಸಿರು ಸೇರಿಸುತ್ತವೆ ಅರಸುತ ಅಲೆದಾಡುವ ಹೊರಳಾಡುವ ಮೂಕಮರ್ವಕ ಹಾಸಿಗೆಯಲಿ ದಪ್ಪ ಗಾಜಿನ ಕಿಟಕಿಯಾಚೆ ಚಿಕ್ಕಿಗಳು. ಹೂವು ತುಂಬಿದ ಮರದ ಅಡಿ ಹಾಸಿವೆ ಉದುರ...

ಹಾರುತ್ತಿದ್ದೇನೆ ನೀಲ ಆಕಾಶದ ಮಂಡಲದ ತುಂಬ ನನಗೆ ನಿಮ್ಮ ದ್ವಂದ್ವ ಧನಿಗಳು ಕೇಳಿಸುತ್ತಿಲ್ಲ ಹಕ್ಕಿ ಹಾಡುಗಳು ಇಂಪಾಗಿ ಎದೆಗೆ ಅಮರಿದೆ. ನಾನು ಹಾರುತ್ತಿದ್ದೇನೆ ನಿಧಾನವಾಗಿ ತೆಳು ಮೋಡದ ಹಾಯಿಯಲ್ಲಿ ನನಗೆ ನಿಮ್ಮ ಉರಿವ ನೋಟಗಳು ಕಾಣಿಸುತ್ತಿಲ್ಲ ಹನ...

ಒಂಟಿಕಾಲಿನ ಬಕದಂತೆ ನೀರಿನಲ್ಲಿ ನಿನ್ನ ನೆರಳನೋಡುತ್ತ ಧ್ಯಾನದ ಮೌನದಲಿ ಬಿಂಬ ಬಯಲಲಿ ಮೂಡಲೆಂದು. ಕನಸು ಕಾಣುವುದಕ್ಕೆ ಮನಸ್ಸು ಅರಳಿ ಹೂವಾಗಿ ನೀರ ಮೇಲೆಗಾಳಿ ತೇಲಿ ಮೈದಡವಿ ಹಾಯ್ದು ಹಾಯಿಗಳು ತೆರೆದುಕೊಂಡವು ಬರುವ ಸಪ್ಪಳ ನಿನ್ನಯ ಹೆಜ್ಜೆಗಳೆಂದು....

1...1011121314...20

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...