ಗಳಿಗೆಬಟ್ಟಲ ತಿರುವುಗಳಲ್ಲಿ – ೫೬

ಮಾಡದ ತಪ್ಪು ಒಪ್ಪಿ ಕ್ಷಮೆ ಯಾಚಿಸುತ್ತದೆ ಬಡಪಾಯಿ ರೊಟ್ಟಿ. ತಾನೇ ತಪ್ಪು ಮಾಡಿಯೂ ಉದಾರವಾಗಿ ಕ್ಷಮಿಸುತ್ತದೆ ಪೀಠಸ್ಥ ಹಸಿವು. ಸ್ವಾಮಿತ್ವದ ಎದುರು ಲೋಕನಿಯಮಗಳು ತಲೆಕೆಳಗು. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೫೫

ಹಸಿವಿನ ಕಾಲಿಗೆ ಬಿದ್ದು ಅದರ ಪಾರಮ್ಯವನ್ನು ಒಪ್ಪಿಕೊಂಡಿದ್ದ ರೊಟ್ಟಿ ಅದರ ಪರಿಧಿಯೊಳಗಿದ್ದೇ ಎಲ್ಲೆಗಳನ್ನು ಮೀರುತ್ತದೆ. ದಾಖಲಾಗಿದ್ದು ಸ್ಥಿರವೆಂಬ ವಿಭ್ರಮೆ ಹಸಿವೆಗೆ ಮೆಲ್ಲಗೆ ಸೀಮೆ ದಾಟಿದ ರೊಟ್ಟಿ ಅರಿವಿಲ್ಲದೇ ದಾಖಲೆ ಮೆಟ್ಟುತ್ತದೆ. ಆಕಾಶ ಮುಟ್ಟುತ್ತದೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೫೪

ರೊಟ್ಟಿಯ ಸಿಟ್ಟು ಅಸಹಾಯಕತೆಯಿಂದ ಕಾಲಕ್ರಮೇಣ ವಿಷಾದ. ಹಸಿವಿನ ಸಿಟ್ಟು ಪ್ರತಿಷ್ಠೆಯಿಂದ ನಿಧಾನಕ್ಕೆ ಕ್ರೌರ್ಯ. ಪಾತ್ರ ಸಿಟ್ಟಿನದಲ್ಲ ಕಾಲಗತಿಯದೂ ಅಲ್ಲ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೫೩

ರೊಟ್ಟಿ ಬರಬೇಕು ಹೀಗೆ ಹಸಿವಿನೆದೆ ಕರಗುವ ಹಾಗೆ ಕರಗಿದ್ದು ನೀರಾಗಿ ನೀರಾಗಿದ್ದು ಮನ ತಣಿಸುವ ಹಾಗೆ ತಣಿಸಿದ್ದು ಹಸಿವಿಡೀ ಆಕ್ರಮಿಸುವ ಹಾಗೆ ಆಕ್ರಮಿಸಿದ್ದು ಆವರಿಸಿ ಹಸಿವಿನೊಳಗೇ ರೊಟ್ಟಿ ಆವಿರ್ಭವಿಸಿ ಪಲ್ಲವಿಸುವ ಹಾಗೆ ಅಲ್ಲಿಯವರೆಗೂ ಹೀಗೇ...
cheap jordans|wholesale air max|wholesale jordans|wholesale jewelry|wholesale jerseys