Home / Baraguru Ramachandrappa

Browsing Tag: Baraguru Ramachandrappa

ಕರಿಯಮ್ಮ ಓಡೋಡಿ ಬಂದು ನೋಡಿದಾಗ ರಸ್ತೆಯಲ್ಲಿ ರಕ್ತದ ಕಲೆಯಿತ್ತು. ಪುಟ್ಟಕ್ಕಯ್ಯ ಮತ್ತು ಮಂಜುಳ – ಇಬ್ಬರೂ ಕರಿಯಮ್ಮ ನೊಂದಿಗೆ ದುಃಖಿತರಾಗಿದ್ದರು. ಆದರೆ ಕರಿಯಮ್ಮನ ದುಃಖಕ್ಕೆ ಸರಿ ಸಾಟಿಯಾದ ಮನಃಸ್ಥಿತಿ ಬೇರೆಯವರಲ್ಲಿ ಇರಲು ಹೇಗೆ ಸಾಧ್ಯ ...

ಬಿಗಿಗಣ್ಣ ಬದುಕಿನಲಿ ಅತ್ತ ಇತ್ತ ಹೊರಳಾಡುತ್ತ ಮುದುಡುತ್ತ ಮತ್ತೆ ಮಲಗುವಾಗ ಹೊದಿಕೆ ಹೊದ್ದು ಯಾವುದೋ ಬಾಯಗುಡಿಯಲ್ಲೊಂದು ಗಂಟೆ ಸದ್ದು: ‘ಏಳಯ್ಯ ಬೆಳಗಾಯಿತು’. ಥು ಸಾಡೇಸಾತು ಎಂದು ಸಹಸ್ರನಾಮಾವಳಿ ಪಠಿಸುತ್ತ ಕಣ್ಣು ತೆರೆದಾಗ ತೆರೆ ತೆರೆಯಾಗಿ ಪೊ...

ಶಿವಕುಮಾರ್‌ಗೆ ಮಂಕು ಬಡಿದಿತ್ತು. ಊರಿಗೆ ಹೋಗಿದ್ದ ಮಂಜುಳ ಮರಳಿ ಬಂದ ಮೇಲೆ ಅನೇಕ ವಿಷಯಗಳನ್ನು ಮಾತನಾಡಬೇಕೆಂದು ಬಯಸಿದ್ದಳು. ಬಾಡಿಗೆ ಮನೆಯಲ್ಲಿ ನೆಲೆಸಿದ ಮೇಲೆ ಪ್ರತ್ಯೇಕವಾಗಿ ಮಾತನಾಡುವ ಅವಕಾಶ ಒದಗುತ್ತದೆಯೆಂದು ಭಾವಿಸಿದ್ದಳು. ಆದರೆ ಹಳ್ಳಿಗ...

ಮೊಳಕೆಯಲ್ಲೇ ಕೊರಳ ಕುಣಿಕೆ ಕಣ್ಣು ಮೂಗು ಮುಚ್ಚುವಷ್ಟು ಧೂಳು ದಣಿವು ಸೆಟೆದ ಎದೆಯಲ್ಲಿ ನೆರೆಬಂದು ಬಿಡದೆ ಬಂಡೆ ಸಂದಿಯಲ್ಲೂ ಚಿಗುರು ಸುತ್ತಮುತ್ತೆಲ್ಲ ಮುನ್ನೂರು ಉಗುರು. ಗರಿಕೆ ಹುಲ್ಲಿನ ಮಧ್ಯೆ ಗೊರಕೆ ಹೊಡೆಯದೆ ಎದ್ದು ಕಲ್ಲ ಕ್ಯಾಕರಿಸಿ ಅತ್ತ ...

ಮಾರನೆಯ ದಿನ ಶಿವಕುಮಾರ್ ಹೈಸ್ಕೂಲಿನ ಬಳಿಗೆ ಹೋದ. ಹೆಡ್‌ಮಾಸ್ಟರಿಗೆ ಆಶ್ಚರ್ಯವಾಯಿತು. ‘ಏನ್ ಕುಮಾರ್? ಬಹಳ ದಿನಗಳ ಮೇಲೆ ಈ ಕಡೆ ಸವಾರಿ ಬಂತಲ್ಲ’ ಎಂದರು. ಕುಮಾರನಿಗೆ ಒಂದು ಕ್ಷಣ ಅಳುಕೆನ್ನಿಸಿದರೂ ಚೇತರಿಸಿಕೊಂಡು ಹೇಳಿದ: ‘ಯಾಕ್ ಸಾರ್ ನಮ್ಮೂರ್...

ಅಮಟೆ ಅಮಟೆ ಎಂದು ಕುಂಟೆಬಿಲ್ಲೆ ಆಡುತ್ತ ಹತ್ತರತ್ತರ ಬಂದು ಕಡೇಮನೆ ಸೇರಿ ಕಿಸಕ್ಕೆಂದು ಹನಿಯುತ್ತಾಳೆ. ಹಳ್ಳತಿಟ್ಟು ಸರಿಮಾಡಿ ನನ್ನ ಹದ ಮಾಡಿ ಕೂರಿಗೆ ಹೂಡಿ ಕಾಡುತ್ತಾಳೆ. ದಾರಿ ಬಿದ್ದಲ್ಲಿ ಬೀಜ ಬಿತ್ತುತ್ತ ಬುಸುಗುಡುತ್ತ ಬೆವರಿಸುತ್ತಾಳೆ. ವಾಸ...

ಮದನಿಕೆಯ ಸಾವು ರಾಜಕುಮಾರಿ ಮದಾಲಸೆಯನ್ನು ತುಂಬಾ ಕಾಡಿಸತೊಡಗಿತು. ರಾತ್ರಿ ಮಲಗಿದರೆ ಮದನಿಕೆಯ ಕನಸು ಕಂಡು ಬೆಚ್ಚುತ್ತಾಳೆ. ಮದನಿಕೆಯ ರೂಪ ತೇಲಿ ಬಂದು ತೀವ್ರತೆಯ ಬಿರುಗಾಳಿ ಎಬ್ಬಿಸುವ ಅನುಭವದಿಂದ ಆತಂಕಿಸುತ್ತಾಳೆ. ಕಣ್ಣು ಮುಚ್ಚಿದರೆ ಮದನಿಕೆ ಬ...

ಅಚ್ಚೋದ ಸರೋವರದ ಅಚ್ಚಗನ್ನಡಿಯಲ್ಲಿ ತಿದ್ದಿ ತೀಡಿದ ಹೊಚ್ಚ ಹೊಸ ರೂಪಾಗಿ ಬರುತ್ತೀಯೆ. ಗಂದಬಂಧವಾಗಿ ಬಂದವಳು ಕಿಟಕಿ ಬಾಗಿಲುಗಳ ಬಂದುಮಾಡಿ ಕಪಾಟಿನ ಕೀಲಿ ಕಳಚಿ ಅಸ್ತವ್ಯಸ್ತವನ್ನೆಲ್ಲ ಓರಣಮಾಡುತ್ತೀಯೆ. ಎದೆಮೇಲೆ ಹೂಹೆಜ್ಜೆಯಿಟ್ಟು ಗೆಜ್ಜೆಗುಂಗಿನಲ...

ರಾಜಕುಮಾರಿಯೊಂದಿಗೆ ಹೊರಟುನಿಂತ ಮದನಿಕೆಯಲ್ಲಿ ವಿಚಿತ್ರ ಸಂಭ್ರಮವಿತ್ತು. ತನ್ನ ಸಖಿಯರಿಗೆ ‘ಯಾರೂ ಬರಬೇಡಿ’ ಎಂದು ಹೇಳಿದಳು. ರಾಜಕುಮಾರಿಯನ್ನೂ ಬರದಿರುವಂತೆ ಹೇಳುತ್ತಿದ್ದಳೇನೋ, ಆದರೆ ಮಗಳ ಮೇಲಿನ ಮಮತೆಯಿಂದ ರಾಜ ಸಿಟ್ಟಾಗದಿರಲಿ ಎಂದು ತಾನೇ ಕರೆ...

ಕಿಲ್ಲೆ ಕಿಮ್ಮತ್ತುಗಳ ಹೊತ್ತ ಗೋರಿ- ಗಳು ತೀಡಿ ತೀಡಿ ಕಿಚ್ಚು ಹುಚ್ಚೆದ್ದು ಹೋರಿ; ದಕ್ಕಿಸಿಕೊಳ್ಳುವೆನೆಂದು ದಾಪುಗಾಲು ಹಾಕುತ್ತಿದ್ದೇನೆ ಹಾರುವ ಹದ್ದು ಸುತ್ತ ಸಂಕೀರ್ಣ ಸದ್ದು ಮೂಳೆಗಳ ಕೂಳೆ ಮೇಲೆ ಕಾಲು ಹಾಕಿ ಆಟ ಆಡುತ್ತಿದ್ದೇನೆಂದು ಅನ್ನಿಸಿ...

1...910111213...18

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...