
ನೌಕರಿಯ ಕನಸುಗಳು ಕಂಡೂ ಕಂಡೂ ನನಸಾಗುವ ಹೊತ್ತಿಗೆ ಮಸಣ ಸೇರಿತ್ತು ಆಸೆ ಕೆರ ಸವೆದು ಕಿಸೆ ಹರಿದು ಊರ ಸೇರಿತ್ತು ಸೋತಾತ್ಮ. *****...
ಭೂಗರ್ಭ ಸೀಳಿ ಬರುವ ಲಾವಾ ಸಮುದ್ರ ಉಕ್ಕಿಹರಿಯುವ ನೀರು ಮೋಡ ಒಡೆದು ಬರುವ ಮಳೆ ಅವೆಲ್ಲ ನಮ್ಮ ನಿಮ್ಮ ಸಿಟ್ಟಿನಂತೆಯೇ ನಿಸರ್ಗಕ್ಕೂ ಬಿ.ಪಿ. ಏರಿಳಿದು ಆಗಾಗ ಹಾರ್ಟ್‌ಅಟ್ಯಾಕ್ ಆಗಿಬಿಡುವುದು. *****...
ಪಬ್ಲಿಕ್ಕೇ ಇರಲಿ ಗಾರ್ಡನ್ನೇ ಇರಲಿ ವಿ.ಐ.ಪಿ ಶಿಲಾಮೂರ್ತಿಗಳ ನೆತ್ತಿಯಮೇಲೆ ತಮ್ಮ ಮಲಮೂತ್ರಗಳಿಂದ ಅಭಿಷೇಕ ಮಾಡಿ ಇಂಪಾಗಿ ಚಿಲಿಪಿಲಿಸುತ್ತ ಹುಲ್ಲು ಏರಿಸಿ ಹುಳ ಹುಪ್ಪಡಿ ನೈವೆದ್ಯಮಾಡಿ ನಿತ್ಯ ಸೇವೆಮಾಡಿ ಕೃತಾರ್ಥರಾಗುತ್ತವೆ ಪಕ್ಷಿಗಳು. *****...
ಸಾವಿರಾರು ವರ್ಷ ಆಶ್ರಯ ನೆರಳುಕೊಟ್ಟ ಮರಗಳೇನೂ ಸುಸ್ತಾಗಿಲ್ಲ; ನಾವು ಸುಸ್ತಾಗುತ್ತಿದ್ದೇವೆ ಈಗ ಅವುಗಳಿಗೆ ಅವುಗಳದೇ ಆದ ಬದುಕು ಕೊಡಲು. *****...














