Home / ಕಾಂಟೆಸಾದಲ್ಲಿ ಕಾವ್ಯ

Browsing Tag: ಕಾಂಟೆಸಾದಲ್ಲಿ ಕಾವ್ಯ

ಸ್ವಾತಂತ್ರ್ಯದ ಸಮರದಲ್ಲಿ ಸಾಮಾನ್ಯರು ಸತ್ತರು ಬೆವರ ಬಸಿದು ಸಾವಿನಲ್ಲು ಕನಸುಗಳ ಹೆತ್ತರು || ಓದುಬರಹವು ಇಲ್ಲ ಕೂಲಿನಾಲಿಯೆ ಎಲ್ಲ ಹೊಟ್ಟೆಕಟ್ಟುವ ಜನರು ಸಾಮಾನ್ಯರು ಕತ್ತಲಿನ ಬಾಳಲ್ಲಿ ಸೂರ್ಯನ ಸುಳಿವಿಲ್ಲ ದೇಶಕಟ್ಟುವ ಶಕ್ತಿ ಸಾಮಾನ್ಯರು || ಗು...

ಹಳ್ಳಿ ಹಾದಿಯ ತುಂಬ ನೆತ್ತರಿನ ಹೂವು ತುಳಿದೀಯ ಗೆಳೆಯ ಅದು ನಮ್ಮ ನೋವು ಭೂತ ಬಿತ್ತಿದ ಬೀಜ ನರಳಿತ್ತು ಜೀವ ನೆತ್ತರಿನ ಚಿತ್ತಾರ ಬೆಳಗಿನ ಜಾವ ಊರೊಳಗೆ ಹರಿಯುತ್ತಿವೆ ಹತ್ತಾರು ಕತೆಗಳು ನೀರೊಳಗೆ ತೇಲುತಿವೆ ನೂರಾರು ವ್ಯಥೆಗಳು ಮುರುಕು ಮನೆಯೊಳಗೆ ಹ...

ಬೆಂಗಳೂರಲ್ಲಿ ಬಸ್ಸು ಹತ್ತಿದರೆ ಊರು ಸೇರುವುದೇ ಒಂದು ಬದುಕು. ಬರ್ರೆಂದು ಬೀಸುತ್ತ ಬರುವ ಸೊಕ್ಕಿದ ಲಾರಿಗಳು ಪಕ್ಕೆಲುಬು ಮುರಿದು ಬಿಕ್ಕುತ್ತ ಕೂರುತ್ತವೆ. ನೆಲದ ಮೇಲಿನ ಹಕ್ಕಿಯಾಗುವ ಕಾರುಗಳು ಹಾಡು ಹರಿದು ಚಿಂದಿಯಾಗಿ ಚೀರುತ್ತವೆ. ಸಾಯಬೇಕೆನ್ನ...

ಕರೆಯುತ್ತೇನೆ ಮನಸೇ ಕನಸಿನ ಕೋಣೆಯೊಳಗೆ ಬೇಲಿಗಟ್ಟಿದ ಭಾವದೊಳಗೆ ಅಲ್ಲಿ ಮಾತಾಡೋಣ ಮೌನದ ಬಗೆಗೆ ಮೌನವಾಗೋಣ ಮಾತಿನ ಬಗೆಗೆ ಬೆಳೆಯುತ್ತ ಬೆಳೆಯುತ್ತ ಹೋಗೋಣ ಸಿಕ್ಕದ ಸುಖವನ್ನು, ಹುಡುಕುತ್ತ ಹುಡುಕುತ್ತ ಹೋಗೋಣ ಕಾಣದ ಮುಖವನ್ನು ಗುಬ್ಬಚ್ಚಿ ಗೂಡಲ್ಲಿ ...

ಹುಟ್ಟಿದ್ದು ಉರಿಬಿಸಿಲ ಒಡಲಲ್ಲಿ ಬೆಳೆದದ್ದು ಬೆಳದಿಂಗಳ ಕನಸಿನಲ್ಲಿ ಬದುಕಿದ್ದು ನಿರೀಕ್ಷೆಗಳ ನೆರಳಲ್ಲಿ; ನಮಗೆ ಭೋಗವೃಕ್ಷವೂ ಬೇಡ ಬೋಧಿವೃಕ್ಷವೂ ಬೇಡ; ಬಾಳ ಉರಿಯಲ್ಲಿ, ಸಂಕಟದ ಸಿರಿಯಲ್ಲಿ ಜೊತೆಯಾಗಿ ಉಂಡಿದ್ದೇವೆ ಜೊತೆಯಾಗಿ ಕಂಡಿದ್ದೇವೆ ಮಕ್ಕಳ...

ಪಿಸುಮಾತು ಆಡೋಣ ಬಾ ಕತ್ತಲೆ ಬೆಳಕೆಂಬ ಮಾಯೆ ಬರಿ ಬೆತ್ತಲೆ! ಬೆಳಕು ಬೆಂಕಿಯಾಗುವುದ ಕುರಿತು ಬೆಂಕಿ ಬೆಳಕುಗಳ ಅಂತರ ಅರಿತು ಬೆಂಕಿಯೇ ಬೆಳಕಾಗದ ಹೊರತು ಕಲ್ಲು ಅರಳೀತು ಹೇಗೆ? ಮಾತು ಮೀಟೀತು ಹೇಗೆ? ಪಿಸುಮಾತು ಆಡೋಣ ಬಾ ಕತ್ತಲೆ ಬೆಳಕೆಂಬ ಮಾಯೆ ಬರಿ...

ಬೋಳು ಮರಗಳ ಮೇಲೆ ಗೋಳು ಕಾಗೆಯ ಕೂಗು ಸಂತೆಗದ್ದಲದ ನಡುವೆ ಚಿಂತೆ-ತಬ್ಬಲಿ ಮಗು! ಇತಿಹಾಸ ಗೋರಿಯ ಮೇಲೆ ಉಸಿರಾಡುವ ಕನಸಿನ ಬಾಲೆ ತಂತಿ ಸೆಳೆತದ ಕರ್ಣ ಕುಂತಿ ಕರುಳಿನ ಮಾಲೆ ಸುತ್ತ ಹುತ್ತದ ಕೋಟೆ ಒಳಗೆ ಉಗುರಿನ ಬೇಟೆ ಗೀರು ಚೀರುವ ಗೋಡೆ ಒಸರುತ್ತಿದೆ...

ಕತ್ತಲ ಮಗ್ಗದಲ್ಲಿ ಬೆಳಕು ನೆಯ್ದವರು ಬೆವರಿನ ಜನ, ನಾವು ತವರಿನ ಜನ. ನಾಡ ಒಳಿತಿಗೆ ಸುಖವೆಲ್ಲ ಸುಟ್ಟು ರಕುತದ ಹನಿಹನಿಯನು ಕೊಟ್ಟು ಕನಸಿಗೆ ಕಿವಿ ಕಣ್ಣು ಕೊಟ್ಟೆವು ಬರಿ ಬೆತ್ತಲೆಯ ಉಟ್ಟೆವು. ಗುಡಿ ಗುಡ್ಡಗಳಲ್ಲಿ ಬರೆಸಿಕೊಂಡರು ಹೆಸರು ತುಳಿವ ನೆ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...