ಹುಟ್ಟಿದ್ದು ಉರಿಬಿಸಿಲ ಒಡಲಲ್ಲಿ
ಬೆಳೆದದ್ದು ಬೆಳದಿಂಗಳ ಕನಸಿನಲ್ಲಿ
ಬದುಕಿದ್ದು ನಿರೀಕ್ಷೆಗಳ ನೆರಳಲ್ಲಿ;
ನಮಗೆ ಭೋಗವೃಕ್ಷವೂ ಬೇಡ
ಬೋಧಿವೃಕ್ಷವೂ ಬೇಡ;
ಬಾಳ ಉರಿಯಲ್ಲಿ, ಸಂಕಟದ ಸಿರಿಯಲ್ಲಿ
ಜೊತೆಯಾಗಿ ಉಂಡಿದ್ದೇವೆ
ಜೊತೆಯಾಗಿ ಕಂಡಿದ್ದೇವೆ
ಮಕ್ಕಳ ಪಡೆದು ಮಕ್ಕಳಾಗಿದ್ದೇವೆ
ಮಕ್ಕಳಾಗುತ್ತಲೇ ಹೋಗುತ್ತೇವೆ.
*****