
ಕರಿ ಎರಿ ಹೊಲದಲ್ಲಿ ಘಮ್ಮೆಂದು ಕೆಂಪು ಹಾಯ್ದ ಬಳಿಜೋಳದ ತೆನೆ ತೆನೆಗಳಲಿ ಹಕ್ಕಿಹಿಂಡು ಹಾಡು ಬಿಚ್ಚಿ ಕೊಂಡ ಅನವು ಹೆಚ್ಚಾಗಿ ಹರಡಿತು ಭೂಮಿ ಎದೆ ಕುಬುಸ ಬಿಚ್ಚಿಕೊಂಡ ಉಲಿತ. ಮಾಗಿದ ಚಳಿಯ ಪದರಲಿ ಸೋಸಿ ಸೂಸಿದ ಚಿಗುರ ಗಂಧಗಾಳಿ ತೂರಿ ಜಿಗಿದವು ಕನಸು...
ನಿನ್ನ ಧ್ವನಿ ಕೇಳಿದಾಗ ಆಲಿಸಿದಾಗ ಕೈಯಲ್ಲಿ ಜಾರಿಹೋದವು ಸ್ಪರ್ಶಕೆ ಸಿಗದ ಶಬ್ದಗಳು ಒಮ್ಮೆಲೇ ಬಂದು ಎರಗಿದ ನೆನಪುಗಳು ಯಾವುದೋ ಪರಿಮಳ ಎದೆಯಲ್ಲಿ ಮುಳ್ಳಿನ ಕೇದಿಗೆಬನ ಕನಸಿನ ದಾರಿ ಗುಂಟ ದಡ ವಿಲ್ಲದ ನೆರಳು ಬೀದಿಯಲ್ಲಿ ಬೇಸಿಗೆ ಬಿಸಿಲ ಮರೀಚಿಕೆ. ...














