ಇರುಳಿನಾಗಸದಿಂದ ನಕ್ಷತ್ರ ನೆಲಕಿಳಿದು
ತಾವರೆಯ ಎಲೆಮೇಲೆ ನಿಂತಿತ್ತು,
ಉಷೆ ಬಂದು ನಕ್ಕಾಗ, ಹನಿಯೆದೆಗೆ ರಂಗಿಳಿದು
ಬಣ್ಣ ಬಣ್ಣದ ಬಯಕೆ ಹೊಳೆದಿತ್ತು!
ಉಷೆಯುಳಿವು ಮೂರೆ ಚಣ! ಮರು ನಿಮಿಷ ಜಗವನ್ನು
ಹಗಲ ಹೊದಿಕೆಯ ಬಿಳುಪು ಪಸರಿಸಿತು.
ತಾವರೆಯು ತಲೆ ಮುರಿದು, ಮೇಲ್ಕುಳಿತ ತಾರೆಯನು
ಅಡಿಯನಂತದ ನೀರೊಳುರುಳಿಸಿತು!
*****