ನಾ ನಿನ್ನ ಮಗ ನಗಗೇಡು ಮಾಡಬ್ಯಾಡ

ನಾ ನಿನ್ನ ಮಗ ನಗೆಗೇಡು ಮಾಡಬ್ಯಾಡ ಈ ಜಗದೊಳಗೆ ||ಪ||

ನಾ ನಿನ್ನ ಮಗನು ಅಹುದೆನ್ನುವ ಮಾತಿದು
ಎನ್ನ ಗುರುವಿನುಪದೇಶ ವಚನದಿಂ
ಮುನ್ನ ತಿಳಿದು ಮಹೇಶ ಮಂತ್ರ ಜಪ ತನ್ನೊಳಗಿರುತಿಹೆ
ಕುನ್ನಿ ಜನರ ಹಂಗಿನ್ನಾಯತಕ ಭಯ ಚೆನ್ನ ಶ್ರೀಗುರುವೆ ||೧||

ತಾಯಿ ತಂದೆಗಳ ಇಂದ್ರಿ ವಿಕಾರದಿ
ಕಾಯ ಜನಿಸಿ ಅದರೋಳ್ ಮನಮೋಹಿಸಿ
ನೋವು ಬ್ಯಾನಿಯಿಂದಾಯಾಸಪಡುತಿರೆ
ಸಾವಿಗಂಜಿ ಬಾಯಾರಿ ಬಳಲುತಿರೆ
ಜೀವದ ಪರವಿಯ ಬಿಟ್ಟಾಚರಿಸುವೆ ನೀ ರಕ್ಷಿಸು ಮಹಾದೇವ ದಯಾನಿಧೆ ||೨||

ಸಾರಲೇನು ಸಂಸಾರ ವಿಷಯ ಸುಖ
ಮೂರು ದೇಹದೊಳು ಹೇರಿ ಕಳುಹಿದ ಜೀವದ್ಯಾವಾರ
ಮರತು ವರಪಾರಮಾರ್ಥಲೊಳು ನಾ ಬ್ಯಾರಿರುತಿರೆ
ಧಾರುಣಿಯೊಳು ಶಿಶುನಾಳಧೀಶನ
ಆಧಾರ ಹಿಡಿದು ಆನಂದವಾದೆ ||೩||
* * * *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಹಿ ಪರಮದಯಾಳು ಕೃಪಾಕರ
Next post ಕರುಣ ಬಾರದೇನೋ ಸದಾಶಿವ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…