ಪಾಹಿ ಪರಮದಯಾಳು ಕೃಪಾಕರ

ಪಾಹಿ ಪರಮದಯಾಳು ಕೃಪಾಕರ ದೇವ ಬಲಭೀಮ
ತ್ರಾಹಿ ಎನುತ ಪಾದಕೆರಗಿದ ಜನರಿಗೆ
ಕಾಮಿತ ಫಲದಾಯಕ ರಘುವರ ಸೇವಕ ಶಿರೋಮಣಿ
ಕೋವಿಧ ಮುನಿಜನ ಜೀವ ಜಗನ್ಮಯ ವಾಯುಕುಮಾರ ||ಪ||

ಶೂರ ಪರಮ ಗಂಭೀರ ಅತಿ ಸುಂದರ ಮಾರುತಿ
ಶೌರ್ಯ ವಿಚಾರ ಪರಾಕ್ರಮ ಕಾರುಣ್ಯ ಕಪಿವರ ಮಾತುತಿ
ಬಾರಿ ಬಾರಿಗೂ ನುತಿಪ ಭಕುತರ ಮಾರುತಿ
ವಜ್ರ ಶರೀರ ನಿರಾಮಯ ವೀರ ನರನ ಧ್ವಜ ಸಾರಥಿ
ಮೀರಿದ ಉಗ್ರ ಅವತಾರದಿ ಪೂರ್ಣ
ವಾರಿಧಿಯೊಳು ಘನ ಸಾರವ ನಿರ್ಮಿಸಿ
ಧರಣಿಯಾತ್ಮಜ ಇದ್ದ ವನವನು ಸೇರುತ
ಹಾರಿ ಮುದ್ರಿಕೆಯ ತೋರಿದ ಮಾರುತಿ ||೧||

ಕುಸುಮಶರಪಿತನುಸುರಿದ ನುಡಿಯನು ಲಾಲಿಸಿ
ಮುಸುಕಿದ ಅಸುರರ ಪಡೆಯನಾವರಿಸಿ ಬಲವನು ತೋರಿಸಿ
ಅಸಮನು ಶಕ್ತಿಲೆ ಕುಂಭಕರ್ಣನನು ಸೋಲಿಸಿ ಲಂಕಾದೇಶಗೆಡಿಸಿದಿ
ವಾಲಾಗ್ರದ ಕೊನೆಯ ಜ್ವಲನದಿ ದಶಶಿರನಾಥನ ಮರ್ದಿಸಿ
ವಸುಧೆಯಾಳು ಹೊಸಪಟ್ಟ ವಿಭೀಷಣ ಶರಣಿಗೆ ನೀ-
ನತಿಶಯದಲಿ ಪಾಲಿಸಿದಿ ಪರಾತ್ಪರ ಹಸುಳನಾಗಿ ಹರಿಚರಣಕೆರಗಿದಿ ||೨||

ಮಂದಹಾಸ ಆನಂದಯೋಗ ದುರಂಧತಾ ಕರುಣಿಸು ಇಂದು
ಮುನೀಂದ್ರ ಮೌನವ್ರತ ಮಂತ್ರದಲಿ ಬಂಧುರ
ಇಂದ್ರಜಿತುಹರ ಚಂದ್ರರೂಪದಲಿ ಚಂದಿರಾ
ಅಂಜನಿ ಕಂದಾ ಮಣಿಯಮುಕುಟದಿ ಶೋಭಿಸುವ ಸುಂದರಾ
ಇಂದು ನಿಮ್ಮಯ ಪಾದಾರವಿಂದಗಳಿಗೆ ಕರ-
ಹೊಂದಿಸೆನ್ನ ಮನಮಂದಿರದೊಳು ಮುದದಿಂದ ಪೇಳೆ
ಗೋವಿಂದರಾಜ ಗುರುವಿಂದ ಪಡೆದ ಉಪದೇಶ ಬಲದಿ ನುತಿಪೆ ||೩||
* * * *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಮ ರಾವೇಣ ಹರಿ
Next post ನಾ ನಿನ್ನ ಮಗ ನಗಗೇಡು ಮಾಡಬ್ಯಾಡ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…