ದಂಡಖಾನೆ ದವಾಖಾನೆ
ಕೋರ್‍ಟು ಠಾಣೆ ಇಲ್ಲದಾ
ಖಂಡಖಾನೆ ಹೆಂಡಖಾನೆ
ಹೆಣ್ಣ ಪೇಟೆ ಇಲ್ಲದಾ
ಬರಲಿ ಸುಂದರ ಸತ್ಯಸಿಂಗರ
ಸತ್ಯ ಯುಗದಾ ಕಾಲವು
ಸತ್ತು ಹೋಗಲಿ ಕಲಿಯ ಕಾಲವು
ಬರಲಿ ದೇವರ ಕಾಲವು
ಮಠವೆ ಸಂತಿ ಮಹಡಿ ಸಂತಿ
ಗುಡಿಯೆ ಸೆಟ್ಟಿಯ ಗಲ್ಲೆಯು
ಕಲ್ಲು ದೇವರ ಹಂಚು ದೇವರ
ಚರ್‍ಮ ದೇವರ ಚಿಂತೆಯು
ಬರಲಿ ಮಾವು ಬರಲಿ ಗೋವು
ನಗಲಿ ದ್ರಾಕ್ಷೆಯ ಗೊಂಚಲು
ಕಲ್ಲು ಮುಳ್ಳಿಗೆ ಪ್ರೀತಿ ಹೂವಿಸಿ
ದೇವ ಭಾರತಿ ಇಳಿಯಲಿ
*****
Latest posts by ಹನ್ನೆರಡುಮಠ ಜಿ ಹೆಚ್ (see all)
- ರಾಮ ಅತ್ತ ಸೀತೆ ಇತ್ತ - April 13, 2021
- ಕಿರಿಕೆಟ್ಟ ಆಟಕ್ಕ - April 6, 2021
- ಧನ್ಯ ಧನ್ಯ ಧನ್ಯ ಹೂವೆ - March 30, 2021