
ಅಮ್ಮ ಅಮ್ಮ, ಬೆಕ್ಕು ನಾಯಿ
ಯಾಕೆ ಹಾಗಿವೆ?
ನಾಚಿಕೆನೇ ಇಲ್ಲ ಥೂ
ಕೆಟ್ಟೇ ಹೋಗಿವೆ.
ಬಟ್ಟೇ ಇಲ್ದೆ ಬರೀ ಮೈಲೇ
ಹೊರಗೆ ಬರತ್ವೆ
ಕಾಚ ಕೂಡ ಇಲ್ಲ ಥೂ
ಎಲ್ಲಾ ಕಾಣತ್ತೆ!
ಹಲ್ಲು ಉಜ್ಜಿ ಸ್ನಾನ ಮಾಡ್ದೆ
ಎಲ್ಲ ತಿನ್ನುತ್ವೆ
ಒಂದರ ಎಂಜಿಲಿಗಿನ್ನೊಂದು
ಜಗಳ ಮಾಡತ್ವೆ.
ಬಾರೆ ಅಮ್ಮ ಅಂಗಡಿಗ್ಹೋಗಿ
ಬಟ್ಟೆ ತರೋಣ
ಬೆಕ್ಕು ಕತ್ತೆ ನಾಯಿಗೆ
ಚೆಡ್ಡಿ ಹೊಲ್ಸೋಣ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.