ಬೀಳಬಾರದೋ ಕೆಸರಿನೊಳು ಜಾರಿ
ಬೀಳಬಾರದೋ ಕೆಸರಿನೊಳು ಜಾರಿ ||ಪ||

ಬ್ರಹ್ಮನು ಬಿದ್ದಾ ರಾಮನು ಗೆದ್ದಾ
ರುದ್ರ ಒದ್ದಾಡಿದ್ದ ಅದು ತಿಳಿದು ||೧||

ಸುರರೆಲ್ಲಾರು ಅರಲಿಗೆ ಮರುಳರು
ಸ್ಥಿರವಲ್ಲ ಹರಿಹರರುಳಿದರು ||೨||

ಕಸ ಮಳಿಗಾಲದಿ ಶಿಶುನಾಳಗ್ರಾಮದಿ
ಪಶುಪತಿಹಾಳದೊಳು ಹಸನಾಗಿ ಬಂದು ನಾವು ||೩||

*****