ತಾರೆಯರು ತಾರೆಯರು
ಅಪೂರ್ವ ಸುಂದರಿಯರು – ನನಗೆಲ್ಲಾ ಗೊತ್ತೋ ತಮ್ಮ
ಥಳಕು ಮೇಕಪ್‌ನಲ್ಲಿ ರಾತ್ರಿ ಆಕಾಶ ತೋರ್‍ಸಿ ಥಳಪಳ
ಹೊಳೆಯುವ ಈ ವಯ್ಯಾರಿಯರು; ಹೇಳ್ತೇನೆ ಕೇಳು ಹಗಲು
ಮುಖವನ್ನೇ ತೋರಿಸಲು ಅಂಜಿ ಓಡುವ ಇವರು ಬರೀ
ರಾತ್ರಿ ರಾಣಿಯರು.
*****