ಬೆಕ್ಕೇ ಬೆಕ್ಕೇ ಮಾರ್ಜಾಲ
ತೋರಿಸು ನಿನ್ನಯ ಚಾಲ
(ಕಾಣಿಸದಾಯಿತು ಬಾಲ)

ಬೆಕ್ಕೇ ಬೆಕ್ಕೇ ಮಾರ್ಜಾಲ
ತೋರಿಸು ನಿನ್ನಯ ತಂತ್ರ
(ಮೂಗೂ ಮೀಸೆ ಅತಂತ್ರ)

ಬೆಕ್ಕೇ ಬೆಕ್ಕೇ ಮಾರ್ಜಾಲ
ತೋರಿಸು ನಿನ್ನಯ ಮಾಯ
(ಇಲ್ಲವಾಯಿತು ಕಾಯ)

ಆದರು ಹೇಗೆ ಉಳಿದಿದೆ ನೋಡಿ
ಮಂದಹಾಸದ ಮೋಡಿ!

ತನ್ನಿರಿ ಜರಡಿ
ಸೋಸಿರಿ ಅದರಲಿ!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)