ನಾನು ಆಗಿದ್ರೆ ಮರ
ಬರುತ್ತಿರಲಿಲ್ಲ ಬರ

ಮೋಡಗಳಿಗೆ ತಂಪು ನೀಡಿ
ಹೇಳುತ್ತಿದ್ದೆ ಸುರಿಸಿ ಸುರ ಸುರ
ಸುರಿಸುವಂತೆ ಭರ ಭರ

ವರ್ಷವಿಡೀ ಧಾರೆ
ಹರಿಯುತ್ತಿತ್ತು ನೀರು
ತುಂಬಿ ಹಳ್ಳ ಪೂರ

ಭೂಮಿಯೆಲ್ಲ ಹಸಿರುಟ್ಟ
ಬಸಿರು ಅಮ್ಮನಂತೆ
ಕಾಣುತ್ತಿತ್ತು ಅಳುವ ಮಗುವ
ಸುಮ್ಮನೆ ಇರಿಸುವಂತೆ
*****