ವಾಸ್ತವ

ಮರುಳು ಮಾಡುವ ಹೆಜ್ಜೆಗಳು
ಎದೆಯಲ್ಲಿ ಹುದುಗಿಕೊಳ್ಳದೆ ತೇಲುತ್ತವೆ
ಭ್ರಮೆಬೇಡ ಪ್ರಮಾಣಪತ್ರ ಬೇಕೆ
ಗೊತ್ತು ಗುರಿ ಇಲ್ಲದ ಹೊತ್ತಿಗೆ
ಬೆಂಕಿ ಹಚ್ಚುತ ನುಸುಳುವಾಕೆ ನಕ್ಕಳು.

ಕೋಳಿಕೂಗಿನ ಶಬ್ದ ಗಂಟೆ ಎಲ್ಲ ನಿಶ್ಶಬ್ಧ
ಒಳಗೊಳಗೇ ಕೊರೆವ ಚಳಿ ನಂಬಿದ್ದಕ್ಕೆ
ಗಕ್ಕನೆ ಸೂರ್ಯನ ಬೆಳಕು ಚಕ್ಕನೆ
ಮನದೊಳಗೆ ಹೊಳಪು ಬಿಸಿಯುಸಿರು
ಮಂಜಿನೊಳಗೊಂದೊಂದೇ ಮೃದುಹೆಜ್ಜೆ
ಹೂವಿನೊಳಗೊಂದೊಂದು ಪಿಸುಮಾತು
ಮನದಂಗಳ ನೂಕಿ
ಮಂದಾರಕ್ಕೇರಿಸುವಾಕೆ ನಕ್ಕಳು-

ಮರುಮರು ಪ್ರಶ್ನೆಗಳಿಗೆ ಮಿಂಚಿನುತ್ತರವಿಲ್ಲ
ಮೋಡದೊಡಲ ಹೊಯ್ದಾಟ ಗುದ್ದಾಟ
ಅನುಕಂಪವಿಲ್ಲದ ಕದನ
ಅರೆಗಳಿಗೆಗೊಮ್ಮೆಮ್ಮೆ ಬೆಕ್ಕುಹೆಜ್ಜೆ
ತಿಳಿನೀರುಕೊಳಕೆ ಹರಳೆಸೆಯುತ
ಅಲೆ ಅಲೆಯಾಗಿ ಹರಡಿಹಬ್ಬಿ
ಆಳ ಪ್ರಪಾತದಾಳಕ್ಕೆ ಸೆಳೆವಾಕೆ ನಕ್ಕಳು

ಸುತ್ತಿಲ್ಲ ಮುತ್ತಿಲ್ಲ ಆಳ ಎತ್ತರಕಿಲ್ಲ
ಸಾಕ್ಷಿಗೆ ಸೃಷ್ಟಿಕರ್ತನ ದಿಬ್ಬಣ
ಒಳಗೊಳಗೆ ನಲುಗಿಸಿ ನಗುತ
ಬೆಚ್ಚಗಿನೆದೆಗೆ ಕನಸುಕೊಡುವ ಚಿತ್ರ
ಸ್ಪರ್ಷಕ್ಕೆ ಹಾತೊರೆಯುವ ವಾಸ್ತವ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಬ್ಬರು
Next post ಏನು ಮಾಡಬೇಕು

ಸಣ್ಣ ಕತೆ

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

 • ಬೋರ್ಡು ಒರಸುವ ಬಟ್ಟೆ

  ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

 • ಯಾರು ಹೊಣೆ?

  "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

 • ಜಂಬದ ಕೋಳಿ

  ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…