ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ

ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ
ಜಲದಿಂದ ಕೊಡಗಳ ತುಂಬುತಿದ್ದರು ನಲಿದು ನೀರಾಗ ||ಪ||

ಸಲಗಿಯಿಂದ ಗೆಳತೆರೆಲ್ಲರು ಕುಲಕೆ ಒಬ್ಬರು ಕೂಡಿಕೊಂಡು
ಹಲವು ಮಾತಗಳಾಡುತಾಡುತ ಚಿಕ್ಕಿ ಸೀರಿ ಚಿಮ್ಮು ಚಿಮ್ಮುತ ||ಅ.ಪ.||

ಅಡಗಿಮಾಡುವ ಲಕ್ಷ್ಯ ಆಗಿತ್ತು
ಅದರೊಳಗೆ ಇವರು ನೀರಿಗಂದರೆ ನಿಲ್ಲದೆ ಹೋಗುವರು
ಕಲ್ಲಭಾವಿ ಮೆಲ್ಲನೇರಿ ಬಂದು ಹತ್ತಿ ನಿಂತು
ನಾಲ್ವರಿದ್ದ ಠಾವಿನಲ್ಲಿ ನಲಿದು ನಲಿದು ನುಡಿಯುತಿದ್ದರು ||೧||

ವಿಟಕರಿದ್ದಲಿ ಚಟದಿ ನೋಡುವಳು ಸಲಿಹಲ್ಲು ಇವಳು
ಹುಬ್ಬು ಕಾಮನಬಿಲ್ಲು ತುಟಿಯವಳು
ರಬ್ಬಿಲೊಂದು ಸೀರೆನುಟ್ಟು ಹುಬ್ಬು ಹಾರಿಸಿ ಮಬ್ಬುಗವಿಸಿ
ಅರಿಯದವರಿಗೆ ಅಳತೆ ಕಲಿಸುವ ಹಿರಿಯ ಹಾದರ ಮರಿಯ ಹೌದಿದು ||೨||

ಕುಟಿಲಕುಂತಳೆ ನಿಟಿಲನೇತ್ರದಲಿ
ಇವಳಾಟ ನೋಡಿ ದಾಟಲಾರರು ವಿಪಿನದೊಳಗಿನ ತಪದ ಋಷಿಗಳು
ಮುಖವ ನೋಡಿ ತಪವ ಬಿಟ್ಟು ಕಪವ ಇಲ್ಲದೆ ಕ್ಯಾರಿ ಉಗುಳಿ
ನೊಸಲೊಳುಪ್ಪುವ ಕುಚವ ನೋಡಿ ಕಾಸಿ ಕೈಪವ ಸಡಲತಿದ್ದವು ||೩||

ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ
ಜಲದಿಂದ ಕೊಡಗಳ ತುಂಬುತಿದ್ದರು ನಲಿದು
ಜಾರಿಬಿದ್ದು ಊರಿ ಎದ್ದು ಧೀರ ಶರೀಫರು ಸಾರುಸಾರುತ
ಊರ ಅಗಡಿಯ ಗ್ರಾಮದೊಳು ಚಾರುಚರಿತ್ತವ ಸಾರುಸಾರುತ ||೪||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಖಿ ಬೆಣ್ಣೆಮಾರುವ ನೀನಾರೆ
Next post ಲವ್ವಲ್ ಹಿಂಗೇನೆ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…