ಲವ್ವಲ್ ಹಿಂಗೇನೆ

ಭಾವಯಾನ
ಪ್ರೀತಿಯ ಮಾತು…
ಲವ್ವಲ್ ಹಿಂಗೇನೆ
ಪ್ರೇಮವೆಂದರೆ ಹೇಳಲು ಬಯಸಿ, ಹೇಳಲು ಆಗದ ಮಧುರ ಭಾವನೆ… ಮಧುರ ಯೋಚನೆ… ಅರ್ಪಣೆ… ಸಮರ್ಪಣೆಯ ಸೂಚನೆ. L..o..v..e.. ಎಂಬುದು A to Z ಕನಸುಗಳ ಸಾಗರವೇ ಆಗಿದೆ.
ನನಗೆ ಬರುತ್ತಿರುವ ಓದುಗರ ಹಾಗೂ ಸ್ನೇಹಿತರ ದೂರವಾಣಿ ಕರೆಗಳಲ್ಲಿ ಕೇಳುವ ಪ್ರಶ್ನೇ ಒಂದೇ…! “ನೀವ್ ಯಾಕೆ ಪ್ರೀತಿ ಬಗ್ಗೆನೇ ಬರೀತೀರಾ ? ಬೇರೆನೂ ಗೊತ್ತಿಲ್ವ…” ಎಂದು. ಅದಕ್ಕೆ ನನ್ನಿಂದ ಬಂದ ಉತ್ತರ “ಪ್ರೀತಿ ನಿರಂತರ – Love is eternal”. ಪ್ರತಿ ದಿನ, ಪ್ರತಿ ಕ್ಷಣ ಪ್ರೀತಿನ ಬಿಟ್ಟು ಈ ಬದುಕಿಲ್ಲಾ. ಈ ಪ್ರಪಂಚದ ಸೃಷ್ಟಿಯ ಉಸಿರಾಟನೇ ಪ್ರೀತಿ. ಮೊಗ್ಗು ಹೂವಾಗೋದು – ಹೂ ಕಂಪನ್ನು ಸೂಸುವುದು – ಹೂ ದುಂಬಿಯ ಸೆಳೆಯುವುದು – ಹಸು ಕರುವಿಗೆ ಹಾಲುಣಿಸುವುದು – ಚಿಗುರು – ಇಬ್ಬನಿ – ಹಸಿರು – ಗಾಳಿ ಎಲ್ಲವೂ ಪ್ರೀತಿನಾ ಅವಲಂಬಿಸಿ ಬದುಕುತ್ತಿರುವುದು. ಇವೆಲ್ಲದರ ಉಸಿರಾಟನೇ ಪ್ರೀತಿ… So, Love is one of the part of our life.
| ಯುಗ ಯುಗಗಳು ಕಳೆದರೂ |
| ಹಲವು ಜನುಮ ಕಳೆದರೂ
| ಓದಿ ಮುಗಿಸದ ಗ್ರಂಥ ಪ್ರೇಮ |
| ಹಾಡಿ ಮುಗಿಸದ ಗೀತೆ ಪ್ರೇಮ |
| ಎಂದೂ ಮುಗಿಯದ ಪಯಣ ಒಂದು ಗೂಡುವ ತಾಣ ಪ್ರೀತಿ ||
ಹದಿನಾರು ವರ್ಷ ಕಾದುನಿಂತು, ಹದಿನೇಳಕ್ಕೆ ಹೇಳಿ ಬಿಡಬೇಕು ಎಂದುಕೊಳ್ಳುವ ಈ ಪ್ರೀತಿ – ಅದನ್ನು ಎಂದಿಗೂ ಹೇಳಲು ಆಗದೇ, ಅದು ಎಲ್ಲಿ ಹುಟ್ಟಿತೋ- ಅಲ್ಲೇ ಆ ಪ್ರೀತಿ ಕೊರಗಿ ಸಾಯುವ ಸ್ಥಿತಿಯನ್ನು, ನಾನು ಕೆಲವರಲ್ಲಿ ನೋಡಿದ್ದೇನೆ. ಆಗ ಒಳಗೊಳಗೆ ಅಳುವುದು ಆ ಪಾಪಿ ಹೃದಯ..! ಇನ್ನೂ ಕೆಲವು ವ್ಯಕ್ತಿಗಳು ಏನಾದರೂ ಸಾಹಸ ಮಾಡಿ ಇಷ್ಟ ಪಟ್ಟ ಪ್ರೀತಿಯನ್ನು ಪಡೆದುಕೊಳ್ಳಲು ಹೋಗಿ ಯಾವುದಾದರು ಎಡವಟ್ಟುಮಾಡಿಕೊಂಡು ಎಲ್ಲರ ಕಣ್ಣಲ್ಲು ನೀರು ಹಾಕಿಸಿ ಬಿಡುತ್ತಾರೆ. ಪ್ರೀತಿ ಎನ್ನುವ ಈ ಎರಡು ಅಕ್ಷರ ಕೇಳೋಕೆ ಮುದ್ದಾಗಿದ್ದರೂ, ಮುಗ್ಧ ಮನಸ್ಸುಗಳನ್ನು ತನ್ನಿಷ್ಟದಂತೆ ಆಳಿ, ಅಳುವವರೆಗೂ ಬಿಡುವುದಿಲ್ಲ. ನಂತರ ಇದಕ್ಕೆಲ್ಲಾ ಕಾರಣಕೊಟ್ಟು ದೂರುವುದು ವಿಧಿ ಹಣೆಬರಹವನ್ನಾ…
ಹ್ಞೂಂ ಜಗತ್ತೇ ಬೆರಗಾಗುವ ಹಾಗೆ.., ಈ ಕಾಲನೇ ತಿರುಗಿ ನೋಡುವ ಹಾಗೆ, ಇತಿಹಾಸ ಆಗಿ ಹೋಗಿರೊ ಪ್ರೇಮಿಗಳ ಕಥೆ, ಕಣ್ಣಲ್ಲಿ ನೀರೂರಿಸಿದ್ದರು – ಅದೆವು ಸತ್ಯ, ಇಂದಿಗೂ ಜೀವಂತವೇ ಈ ಪ್ರೀತಿನೇ ಹಾಗೆ, ಬೇಡ ಬೇಡ ಅಂತಾನೆ ಪ್ರೀತಿಯ ಅಮೃತ ಸವಿಯುತ್ತೀವಿ, ಆಮೇಲೆ ಬೇಕು ಅಂದರೂ ಬಾರದ ಸಾವನ್ನು ಬೈದುಕೊಂಡು ಸುಮ್ಮನಾಗುವ ಪರಿಯೇ ಹೀಗೆ
ಒಂಥರಾ ಹಿತಕರ ಮಿಡಿತ… ಯಾರು ತಡೆಯದ ತುಡಿತ… ಏನೇನೋ ಹುಡುಕುವ ತವಕ… ಮೈಮನಗಳ ಈ ಪುಳಕ, ಅನುಭವಕ್ಕೆ ಮಾತ್ರ ನಿಲುಕುವ ಕೋಮಲ ಕಲ್ಪನೆ. ಈ ಪ್ರೀತಿಲೀ ಮಾಡಿದ್ದೆಲ್ಲವೂ ಸರಿಯೇ ಅನಿಸುವಷ್ಟು ಭ್ರಮೆಯ ಲೋಕಕ್ಕೆ ನಮ್ಮನ್ನು ಕರೆದೊಯ್ದು, ಆ ಭ್ರಮೆಯ ದಾರಿಯಲ್ಲೇ ಕೊಂಚ ಸಾಗುತ್ತಿರುವಾಗ ಆ ದಾರಿಯು ಬಂದು ಸೇರುವ ತಾಣವೇ ವಾಸ್ತವದ ಪ್ರಪಂಚ.
ಮನಸ್ಸುಗಳ ಮಂಥನ ಮಿಲನದ ಚಿಂತನ ಹೃದಯದ ಸ್ಪಂದನ ಬಿಡಿಸದ ಬಂದನ ಈ ಪ್ರೇಮ. ಈ ಪ್ರೀತಿಯ ಬಗ್ಗೆ ಬರೆಯುವುದಕ್ಕೂ ಚಂದ… ಓದುವುದಕ್ಕೂ ಚಂದ… ಹಾಡುವುದಕ್ಕೂ ಚಂದ… ಒಬ್ಬರ ಹೆಸರನ್ನು ಮತ್ತೊಬ್ಬರ ಹೆಸರಿಗೆ ಸೇರಿಸಿ ಅಂಗೈಯಲ್ಲಿ ಬರೆಯೋದು ಚಂದ. ಇಲ್ಲಿ ಒಬ್ಬರನ್ನೊಬ್ಬರು ಕದ್ದು ನೋಡುವ ಪರಿಯಂತು ಅಂದವೋ ಆನಂದ. ಒಂದಿಷ್ಟು ಹುಸಿಮುನಿಸುಗಳು ಮತ್ತಷ್ಟು ಹೊಂಗನಸುಗಳು ಇವೆಲ್ಲವು ಪ್ರೀತಿಯ ಭಾವನೆಗಳ ಬಲೆಯ ಒಂದು ಸುಂದರ ಪ್ರಪಂಚ. ಆದರೆ ಆ ಭಾವನೆಯೆಂಬ ಬಲೆಯಿಂದ ಈಚೆಗೆ ಮತ್ತೆ ಬರುವುದು ಕಷ್ಟ ಸಾಧ್ಯ.
ವಯಸ್ಸು ಇದು ಹಾಗೇನೆ, ಇದರ ವರಸೆಗೆ ಪ್ರತಿಯೊಬ್ಬರೂ ಸೋಲುತ್ತಾರೆ. ಒಮ್ಮೆ ಪ್ರೇಮಿ ಪ್ರೀತಿಯಲ್ಲಿ ಬಿದ್ದರೆ ‘ಸಪ್ತಸಾಗರ ದಾಟು’ ಎಂದರೂ ದಾಟುತ್ತಾನೆ ಅಂತ ಕವಿಗಳೇ ನುಡಿದಿದ್ದಾರೆ. ಏನೇ ಆದರೂ ಮನಸ್ಸಲ್ಲಿ ಮೂಡಿದ ಭಾವನೆ ಮಾತಾಗಿ ತುಟಿ ಮೇಲೆ ಬಂದು ನಿಂತಾಗ, ನಾಲಿಗೆಯ ಸಪೋರ್ಟ್ ತಗೊಂಡು “ನೀನಂದ್ರೇ ನನಗೆ ಇಷ್ಟ” ಅಂತ ಹೇಳೋದು ಪ್ರೀತಿಯ ಒಂದು ರೀತಿ…
ಮೊದಲನೇ ಬಾರಿಗೆ ಒಂದು ಹುಡುಗಿ ಫೋನ್ ಮಾಡಿ ‘I Love You’ ಎಂದಾಗ ಆಗುವ ಭಯ..! ಆ ನಡುಕ..! ಒಂದು ವಾರವಾದರೂ ಸುಧಾರಿಸಿಕೊಳ್ಳುವುದು ಕಷ್ಟವೇ ಬಿಡಿ. ನಂತರ ಅವರ ‘I Love You’ ಎಂದಿದಕ್ಕೆ ನಾವು ಉತ್ತರಿಸುವುದೋ… ಅಥವಾ ಬುದ್ಧಿ ಹೇಳುವುದೋ… ಅಥವಾ ಅವರ ಪ್ರೀತಿಯನ್ನು ಒಪ್ಪಿಕೊಳ್ಳುವುದೋ… ಅಪ್ಪಿಕೊಳ್ಳುವುದೋ ತಿಳಿಯದೇ ಫೋನ್ ಕಟ್ ಮಾಡುವ ಪರಿಯಂತೊ ಒಂಥರಾ ಬಲವಂತದ ಆತ್ಯಾಚಾರವೇ.
ಚೊಚ್ಚಲ ಪ್ರೇಮದ ಬೆಚ್ಚನೆಯ ಭಾವವು ಎದೆಗೆ ಇಡುವ ಕಚಗುಳಿಯೇ ಹೀಗೆ. ಒಂದ್ಸರಿ ನೋಡ್ಬೇಕು ಮತ್ತೆ ನೋಡ್ಬೇಕು ಮತ್ತೆ ಮತ್ತೆ ಪ್ರೇಯಸಿನ ಮಾತಾಡಿಸಬೇಕು ಅನ್ಸೋದೇ ಚೊಚ್ಚಲ ಪ್ರೇಮಿಯ ಬಯಕೆ. ಈ ಪ್ರೀತಿಯಲ್ಲಿ Jealousy , ನನ್ಗೆ ಬೇಕು ಅನ್ನೋ Possessiveness – ಎಲ್ಲಾನೂ ಇದೆ. ಎಲ್ಲವನ್ನೂ ಸೆಳೆಯುವುದು – ಎಲ್ಲರನ್ನೂ ಗೆಲ್ಲುವುದು ಈ ಪ್ರೀತಿಯ ಹಣೆಬರಹ. ಆದರೆ ಇಲ್ಲಿ ಪ್ರೀತಿಸೋ ಹೊರಟ ಪ್ರೇಮಿಗಳಲ್ಲಿ ಕೆಲವರು ಗೆಲ್ಲುತ್ತಾರೆ ಇನ್ನೂ ಕೆಲವರು ಯಾಮಾರುತ್ತಾರೆ.
ಇಲ್ಲಿ ಪ್ರೀತಿಸುವ ಪ್ರೇಮಿಗಳು ಅದೆಷ್ಟೋ ಜನ, ಕೆಲವರು ಪ್ರಮಾಣಿಕವಾಗಿ, ಕೆಲವರು ಕಾಟಾಚಾರಕ್ಕೆ, ಕೆಲವರು ಕಷ್ಟವಾದರೂ ಪ್ರೀತಿನಾ ಇಷ್ಟ ಪಟ್ಟು ಪಡೆದುಕೊಳ್ಳುತ್ತಾರೆ. ಆದರೆ ಇಲ್ಲಿ ಶೇ.೧೦೦ಕ್ಕೆ ೧೦ ಜನ ಯಶಸ್ಸು ಕಾಣುತ್ತಾರೆ, ಉಳಿದವರ ಪ್ರೇಮಕಥೆಗಳಿಗೆ ಯಾರ‍್ಯಾರೋ ಅಂತ್ಯ ಬರೆಯುತ್ತಾರೆ. ಈ ಜಗತ್ತಿನಲ್ಲಿ ಒಳ್ಳೆಯ ಶಕ್ತಿ ಇದ್ದಷ್ಟೇ ಕೆಟ್ಟ ಶಕ್ತಿಗಳೂ ಇವೆ. ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸುವುದನ್ನು ಕಲಿತರೆ “ಒಲವೇ ಜೀವನ ಸಾಕ್ಷಾತ್ಕಾರ ” .
“If you miss one issue of my Bhavayaana
You will lose lots of feelings in your life Bhavayaana”
By Kavish Sringeri
– 9945342433

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ
Next post ಸ್ನೇಹ ಮಾಡಬೇಕಿಂಥವಳಾ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys