ಹುಡಕುತ ನಾ ಎಲ್ಲಿ ಹೊಗಲಿ?

ಹುಡಕುತ ನಾ ಎಲ್ಲಿ ಹೊಗಲಿ?
ಹುಡುಕಿ ನಾ ಬ್ಯಾಸತ್ತೆ ||ಪ||

ಏಳು ಸಮುದ್ರಗಳು ಏಳು ದಿವಸಗಳು
ಹಾಳು ಬಿದ್ದವು ಕೇಳಿ ಕೇಳಿ ಬ್ಯಾಸತ್ತೆ
ನದಿಗಳೆಲ್ಲಾ ಹುಡುಕಿ ಬ್ಯಾಸತ್ತೆ
ಉದಕ ತುಂಬಿದ ಭಾವಿ ನದರಿಟ್ಟು ನೋಡಿದೆ ||೧||

ಧರಿಯೆಲ್ಲ ತಿರುಗಿದೆ
ಗಿರಿಯೆಲ್ಲಾ ಚರಿಸಿದೆ
ಸರಸಿಜಸಖಿಯೆ
ಪರಮಾತ್ಮ ಸಿಗಲಿಲ್ಲ ||೨||

ಕಡಿಯ ಭಾಗದಿ ನಾನು
ಸುಡುಗಾಡ ಹುಡುಕಿದೆ
ನಡು ಊರೊಳು ಬಂದು
ಮಿಡಕ್ಯಾಡಿ ನೋಡಿದೆ ||೩||

ಸಣ್ಣವಳಿರುತಲಿ
ಬಣ್ಣಿಸಿ ಬಹು ಜನ
ಹಣ್ಣು ಸಕ್ಕರೆ ಕೊಟ್ಟು
ಉಣ್ಣಿಸಿದರು ಎನ್ನ ||೪||

ಶಿಶುನಾಳಧೀಶನ
ಅಸಮ ಜರಿ ರಾಗವನ್ನು
ಶಶಿಮುಖಿ ಕಾಣದೆ
ಕಸಿವಿಸಿಗೊಳ್ಳುವೆ ||೫||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾರಿಜಾಕ್ಷಿ ವನಪಿನೊಯ್ಯಾರೆ
Next post ಗ್ರಹಣ ಹಿಡಿದುದು ಕಾಣದೆ?

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…