ಗ್ರಹಣ ಹಿಡಿದುದು ಕಾಣದೆ?

ಗ್ರಹಣ ಹಿಡಿದುದು ಕಾಣದೆ ಪ್ರಾಣ ಸಖಿಯಳೆ
ಜಾಣನಾದ ಚಂದ್ರಮನ ಅಳುಕಿಸಿ
ಕೋಣೆಯೊಳಗೆ ಅವಮಾನಗೊಳಿಸಿತೆ ||೧||

ರಾಹು ಸಿಟ್ಟಲೆ ಬಂದು
ಠಾವು ತಿಳಿಯದೆ ನಿಂದು ತೋಯದ ಗೋನಿಯನು
ಕಾಡಬೇಕೆನುತಲಿ ರೋಹಿಣಿದೇವಿಗೆ ಆಯಾಸಪಡಿಸಿತೆ ||೨||

ಮಂಗಳವಾರ ಒಂದಾದಿ ರಂಗುಮಂಟಪದೊಳು
ಸುಮ್ಮನಾಗಿ ಕೇತುವಿನ ಬಲದೆ
ಬಹು ಸಂಗನಾದ ಸಾರಂಗದೊಳು ||೩||

ಯಂತ್ರ ಮಂತ್ರಿಕರೆಲ್ಲಾ
ಗೊತ್ತುಗೆಟ್ಟಿದ್ದು ಬಲ್ಹೆ
ನಿಂತು ನೋಡಿ ಶಿಶುನಾಳಧೀಶ ತನ್ನಂತೆ ತಾ ನೋಡಿದನವ್ವಾ ||೪||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಡಕುತ ನಾ ಎಲ್ಲಿ ಹೊಗಲಿ?
Next post ಮಳಿ ಬಂತೇ ರಮಣಿ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…