ನೋಡಿ ತಡೆಯಲಾರದೆ ಕೇಳಿದೆ

ನೋಡಿ ತಡೆಯಲಾರದೆ ಕೇಳಿದೆ
ಕೂಡಿ ಗಡ ಕಾಡಬ್ಯಾಡಾ ಬೇಡಿದ್ದು ಕೊಡುವೆ ||ಪ||

ಹರಿಹರಪುರನಿಗೆ ಕ್ಷೀರವಿತ್ತು ಸಲಹಿದೆ
ಚಾರುತನದಲಿ ಶ್ರುತಿ ಸಾರುತಿದೆ ನೋಡಿ ||೧||

ಮೂರುಗಿರಿ ಮೇಲಕೆ ಏರಿನೊಳು ವರ್ಣಿಸಿ
ನೀರಿಗ್ಹೋಗೋ ದಾರಿಯೊಳು ಜೇರುಗಿಂಡಿಯೊಳು
ಮಾರಿನೋಡು ||೨||

ಮೋದಿನಿಗೆ ಸದ್ಗುರು ಆದಿ ಶಿಶುವಿನಾಳಧೀಶ
ನಾದ ಬ್ರಹ್ಮದೊಳು ಬೈಲಾದ ಮೇಲೆ ಹಾದಿನೋಡಿ ||೩||

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಮರೆಡ್ಡಿ ಮಲ್ಲಮ್ಮ
Next post ತೇರು ಸಾಗಿತು ನೋಡೆಲೆ ನೀರೆ

ಸಣ್ಣ ಕತೆ