ಅವ್ವಾ… ಅವ್ವಾ…
ಅರಿಯೇವು ನಾವು
ನಿನ್ನಯ ನಾಮದ
ಎರಡಕ್ಷರದಲ್ಲಿರುವ
ಅಗೋಚರ ಅದ್ಭುತ ಶಕ್ತಿಯನು

ನಿನ್ನಯ ಪ್ರೀತಿಗೆ
ನಿನ್ನೊಲವಿನ ಕರುಣೆಗೆ
ಸರಿ ಸಮಾನ ಶಕ್ತಿಯು
ಇರದು ಈ ಜಗದಲಿ

ಅವ್ವಾ, ಎಂದರೇ…
ಅವ್ವಾ ನೀ ಬಳಿಯಿದ್ದರೇ…
ಮಧುರ ಶಕ್ತಿಯಾವರಿಸುವದು
ನಿನ್ನೊಲವಿನಲಿ ದೀನನಾಗಿಸುವದು

ಅವ್ವಾ ನೀ ಮಹಾಶಕ್ತಿಮಾತೆ
ಆದಿಶಕ್ತಿ… ನೀ ಅವತಾರಿಣಿ
ಅರಿಯದ ಜೀವಕ್ಕೆ ಅಪಾರ
ನಿಧಿಯಾಗಿರುವಿ

ನಿನ್ನ ಆ ಒಲವಿನ ಧಾರೆಗೆ
ಕಹಿಯಾದರೇನು…
ಸಿಹಿಯಾದರೇನು…
ಭೇದವನೆಣಿಸದ ಕಾಮಧೇನು.

***