Home / ಕವನ / ಕವಿತೆ / ವಸಂತ ಚಂದನ

ವಸಂತ ಚಂದನ

ವಸಂತ ಚಂದನ
ನಂದನಗಂಧವ ನಿಂದಿಸುತಿದ ಆ-
ನಂದದೊಳಂಜಲಿಯೊಳು ಕೊಳುವೆಲರಿನ-
ಅಲರಲರಿನ ಪೆರಿಮಳಗಳೆ ಮೇಳದಿ
ಮನಮನಗಳ ಹೊಗುತಲ್ಲಿ ಸುಮಾನದಿ
ದಿನದ ದಿನದ ಜಂಜಡಮೊಳು ಮೈಗರೆ-
ದಿಹ ಸಮ್ಮುದಗಳನೆಚ್ಚರಗೊಳಿಸುವ
ವಸಂತ ಚಂದನ
ಬಂಡೆಗಳೆದೆಬಿರಿಸುತ ಬೆಳೆದೊತ್ತಿನ
ಹುತ್ತದ ನಾಗಗಳಪ್ಪುಗೆಕೆಳೆಯೊಳು
ಕಮ್ಮನೆಮರ ಮೈಗೊಂಡಿಹ ರಸದಿಂ-
ದೊಲುಮೆನಂಜ ಬಗೆಗೇರಿಸಕಲಿತಿಹ
ವಸಂತ ಚಂದನ
ಮಲೆತಲೆಮಂಜೊಳು ಪಳಗಿಹ ಕರ್ಪೂ-
ರದ ಮೃಗಮದದುನ್ಮದಸುರಭಿಯ ಕಾ-
ಶ್ಮೀರದ ಕಂದರ ಲಕ್ಷ್ಮಿಯ ಕುಂಕುಮ-
ವೋ ಎನಲಚ್ಚರಿ ಕೇಸರಿಚರ್ಚೆಯ
ವಸಂತ ಚಂದನ
ನೀಲದ ತಂಪ ತರುವ ತೆಂಗಾಳಿ
ಚಂದನಗಂಧಕದರ ವೈಹಾಳಿ
ಕಾತರಿಸುವ ಕೋಗಿಲೆ ದನಿ ಕೇಳಿ
ಚಿತ್ತಕಿಟ್ಟ ಚಿತ್ತಜನಿದೊ ದಾಳಿ
ಕೊಳ್ಳಿರಿ ಚಂದನ
ತುಂಬಿದಿಂದು ಬರೆ ಬಾನಿಗೆ ಚಂದನ
ಹೂತ ಬನಕೆ ಹೂಧೂಳಿಯ ಚಂದನ
ಬಹುಮಹೋತ್ಸವಾಮೋದಸ್ಯಂದನ
ಹೃದಯೋತ್ಸವಕೀ ವಸಂತ ಚಂದನ-
ಕೊಳ್ಳಿರಿ ಚಂದನ
ತೆರೆದೆದೆಯೆನು ಹೂಮಾಲೆಯು ಮುತ್ತಿಡೆ
ಬಾಂದೊರೆಯಂತೆಲರಂಗವನಪ್ಪಿಡೆ
ಉದಿತೋದಿತ ರಾಗವ ರೇಖಿಸುವೊಲು
ಚಂದನಕಾಗಲಿ ವಕ್ಷಸ್ಥಲವೆಡೆ-
ಕೊಳ್ಳಿರಿ ಚಂದನ
ಶ್ರುತಿಘೋಷದ ಶ್ರುತಿಮೋಹನಗೀತದ
ಸಂಶ್ರಿತಧರ್ಮಾಗಮಸೌಂದರ್ಯದ
ಹಸೆಯೊಸಗೆಯ ಚೆಲುವಿನ ಸಂರಂಭದ
ನೆನವೊಳು ತೊಯ್ದಿಹ ಸುವರ್ಣವರ್ಣದ
ವಸಂತ ಚಂದನ
ಒಲಿವರೆ ನಮ್ಮೀವಸಂತ ಸಮಯಕೆ
ಸಿಂಗರ ಸಡಗರದೀ ಮಲೆಹುಳುವಿಗೆ
ಬೆಳುದಿಂಗಳ ಗುಡಿಗೋಪುರದೂರಿಗೆ
ಒಲಿವರೆ ರಸಸ್ವಾಯತ್ತಕೆ ಕೊಳ್ಳಿರಿ
ವಸಂತ ಚಂದನ
ಋತು ನಡೆಗೊಳಿಸುವ ಮಾಧವಲಾಸ್ಯವ
ಅನುವದಿಸುವ ತೆರ ಮನವನುಗೊಳಿಸುವ
ಪರಿಣಾಮಕೆ ಪರಿಮಳಿಸಿಹ ಪರಿಣತ
ಸೌಗಂಧದ ಪರಿಕರ್ಮವ ನೇಹದಿ
ಕೊಳ್ಳಿರಿ ಚಂದನ
*****
ಈ ಹಾಡಿನ ಬೇರು ನನ್ನ “ಈಚಲುಮರದ ಕೆಳಗೆ” ಎಂಬ ಪುಸ್ತಕದಲ್ಲಿನ ‘ವಸಂತ ಚಂದನೋತ್ಸವ’ ಎಂಬ ಬಂಧದಲ್ಲಿದೆ.
Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...