ಜಯತು ವಿಶ್ವರೂಪಿಣಿ ಅಂಬೆ
ಜಯತು ಜಯತು ಭಾರತಿಯೆ
ಜಯತು ಜಗದಂಬೆ ಮಾತೆ
ಜಯತು ಜಯತು ಶರ್ವಾಣಿಯೆ
ಕಾಳ ರಾತ್ರಿ ಕದಂಬ ವನವಾಸಿನಿ
ಕಾಮಿನಿ ಕಲ್ಯಾಣಿ ಕಣ್ಮಣಿಯೆ
ಜಯತು ಜಯತು ಮೂಕಾಂಬಿಕೆ
ಜಯತು ಜಯತು ವಿಶ್ವಾಂಬಿಕೆ
ಜಯತು ರಾಜರಾಜೇಶ್ವರೀ
ಜಯತು ಭುವನೇಶ್ವರಿ ಅಂಬಾ
ಕನ್ನಡಾಂಬೆ ಕರುನಾಡ ಮಾತೆ
ಜಯತು ಸುರನರ ಪೂಜಿತೆಯೆ||
ಜಯತು ವಾಗ್ದೇವಿ ಗಾಯತ್ರಿ
ಜಯತು ಮಾಹೇಶ್ವರಿ ನಂದಿನಿ
ಭಾಗ್ಯೇಶ್ವರಿ ಭಾರತೀಯೆ ಅಂಬಾ
ಭವಾನಿ ಶರ್ವಾಣಿ ನಮಸ್ತೆ
ನಮಸ್ತೆ ಮಹಾಮಾಯೆ.
*****