ರಸ್ತೆ ಪದ್ಯಗಳು

ಪ್ರತಿಯೊಂದು
ರಸ್ತೆಯ ಎದೆಗೂಡು
ಒಂದೊಂದು ನೋವಿನ ಮಡು
ರಸ್ತೆ ತನ್ನ ನೋವು ಹೇಳುವುದಿಲ್ಲ
ಬಿಡಿ ನಾವು ಕೇಳುವುದೂ ಇಲ್ಲ!

 

ರಸ್ತೆಗಳ ಗರ್ಭದೊಳಗೆ
ಅದೆಷ್ಟೊಂದು ಗುಟ್ಟುಗಳಿವೆಯಲ್ಲಾ
ವಿಪರ್ಯಾಸವೆಂದರೆ
ರಸ್ತೆಗಳು ಮಾತನಾಡುವುದಿಲ್ಲ
ಮಾತನಾಡಬಾರದಲ್ಲ!

ಸಮವಾಗಿ ಜಲ್ಲಿತಟ್ಟಿ
ಹಾಕಿಬಿಟ್ಟಿದ್ದಾರೆ ಟಾರು
ರಸ್ತೆ ಮಾಡದಿರಲೆಂದು
ಯಾವುದೇ ಕಾರುಬಾರು

ರಸ್ತೆಗೂ
ಮಿತಿಗಳುಂಟು
ಸಮುದ್ರಕ್ಕೆ
ರಸ್ತೆ ಎಲ್ಲುಂಟು?

ರಸ್ತೆಗಳು
ರಿಪೇರಿಗೊಳ್ಳುತ್ತವಷ್ಟೇ
ಆದರೆಂದೂ
ಸಾಯುವುದಿಲ್ಲ!

ರಸ್ತೆಗಳ ವಿಶೇಷವಂದರೆ
ಅವುಗಳು ಎಂದೂ ಮುಗಿಯುವುದಿಲ್ಲ
ರಸ್ತೆಗಳಿಗೆ ಕೊನೆ ಇಲ್ಲ
ಮೊದಲು ಇಲ್ಲವೇ ಇಲ್ಲ !

ಕಾದು ನಿಂತ
ಟಾರು ರಸ್ತೆಗೆ
ಕಾಳು ಚೆಲ್ಲಿದರೆ
ಮೊಳಕೆಯೊಡೆಯುವುದಿಲ್ಲ
ಬಿರಿದು ಒಡೆಯುತ್ತವೆ!

ರಸ್ತೆಗಳಿಗೆ ಎತ್ತರವಿಲ್ಲ
ಆಳಗಳಿಲ್ಲ
ಅಗಲಗಳಿಗೂ ಮಿತಿ
ಉದ್ದಗಳಷ್ಟೇ ಅತಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೋಜನೆ
Next post ಎಲೆಕ್ಟ್ರಾನಿಕ್‌ನಲ್ಲಿ ಕ್ರಾಂತಿ: ನೋಟುಗಳನ್ನು ಎಣಿಸುವ ಯಂತ್ರ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…