ನೋಡಲು ಕ್ರಿಕೇಟು ಮ್ಯಾಚು
ಸಹಜವೆ ಉತ್ಸಾಹ
ಭಾರತ ಪಾಕ್ ಎಂದರೆ
ಯಾತಕೆ ರಣೋತ್ಸಾಹ

ನಿನ್ನೆ ನಾವು ಅವರು
ಒಂದೆ ತಾಯ ಮಕ್ಕಳು
ಇಂದು ಬೇರೆ ದೇಶ
ಅದಕೆ ಬೇಕೆ ದ್ವೇಷ

ಆಟಕೆ ಬೇಕು ಸ್ನೇಹ
ಬೇಕೆ ಮತೀಯ ವೈರ?
ಉಳಿಸಿಕೊಂಡರೆ ಕಿಸಿರು
ನಿನಗೋ ಕಪ್ಪು ಹೆಸರು!

ಸೋಲು ಗೆಲುವು ಸಹಜ
ಬೇಡ ಯುದ್ಧ ಭಾವ
ಇರಲಿ ಮನುಜ ಪ್ರೇಮ
ಇಲ್ಲವೆ ಎಲ್ಲ ನಿರ್‍ನಾಮ
*****