ದೇವದೇವತಾ ಪಟ್ಟಣದಲ್ಲಿ ! ದೇಗುಲದೊಲು ಕಿರಿಕಟ್ಟಡದಲ್ಲಿ ||
ಕಟ್ಟೆರಕದ ಕೈ ಕಾಲೂ ಕಣ್ಣು | ದೇವತೆ ನೋಡಿದಳದೊ ನನ್ನನ್ನು ||
ಸಜೀವ ಜಾಗೃತ ಅಮೃತವು ದಿವ್ಯ | ಏಕಮೂರ್ತಿಯೇ ಅನಂತಭವ್ಯ ||
ಮದಾದೇವಿ ಮಾತಾಯಿಯು ಅಂಬೆ | ಪ್ರತ್ಯಕ್ಷವು ಇಚ್ಚೆಯು ಎಂಬೆ ||
ಪೃಥ್ವಿಯ ಗರ್ಭದ ಆಳಡಿಯಲ್ಲಿ | ನಿಸ್ವಪ್ನದ ನಿದ್ರೆಯ ತೊಡೆಯಲ್ಲಿ ||
ಸರ್ವಶಕ್ತ, ದುರ್ಭೇದ್ಯವು ಮೂಕ | ಗಗನ-ಜಲಧಿ-ವನ ವ್ಯಾಪಿಸಿ ಏಕ ||
ಮುಸುಕಿತು ಇಗೊ ಮಾನಸದಾವರಣ | ಮೌನವನೇ ಮಾಡಿಹಳಾಭರಣ ||
ಅಗಮ್ಯ ನಿಃಶಬ್ದವು ಸರ್ವಜ್ಞ | ಸುಷುಪ್ತಿಯೊಳು ಎಚ್ಚತ್ತನು ಪ್ರಾಜ್ಞ ||
ಕಂಡಿತು ದೃಷ್ಟಿಯು ಕೇಳಿತು ಶ್ರುತಿಯು | ಏಕವ್ಯಕ್ತವು ಆಯ್ತೊ ಮೂರ್ತಿಯು ||
ಪೂಜ್ಯವು, ಪೂಜಕ, ಪೂಜೆಯು, ಪೂವು | ರೂಪ ರೂಪಗಳು ನಾವೂ ನೀವು ||
ಹೆಣ್ಣೂ ಮಣ್ಣೂ ಹೊನ್ನೂ ಒಂದು | ರಮೈಗಮ್ಯ ಶ್ರೀ ರೂಪವು ಎಂದು ||
*****



















