ಗೆಳೆತನಕ್ಕೆ ತಿಲಾಂಜಲಿ

ಮೊದಲು ಬಂದ ಕಿವಿಗಿಂತ
ಕೊಂಬಿನದ್ದೇ ಕಾರುಬಾರು
ನಾಲ್ವತ್ತು ಸಂವತ್ಸರಗಳ ಗೆಳೆತನವಿದ್ದರೂ
ಕುತಂತ್ರದಲಿ ಸುಳ್ಳು ಚಾಡಿಯ ಹೊಸೆಯುತ
ಹಾಕುವರು, ಹಾಕಿಸುವರು ಚೂರಿ ಬೆನ್ನಿಗೆ

ಬೆಲೆಯೇ ಇಲ್ಲ ಗೆಳೆತನಕೆ, ಹಿರಿತನಕೆ
ರಕ್ತ ಸಂಬಂಧಕ್ಕೂ ಮಿಗಿಲಾದುದು
ಸ್ನೇಹ ಸಂಬಂಧ ಇದನ್ನರಿಯದುದು
ವಿಪರ್ಯಾಸವೇ ಸೈ, ಸಂಶಯವೇತಕೆ?
ನಯವಂಚಕರ ಸ್ವಾರ್ಥ ದಾಹವೇ ಮೆರೆಯುತಿಹುದು

ಎಡವಿದರು ಬಯಕೆಯ ಬೆನ್ನೇರಿ
ಹಣಕ್ಕಾಗಿ ಸ್ನೇಹಿತರಂತೆ ನಟಿಸಿ
ಕುತ್ತಿಗೆ ಕೊಯ್ದದ್ದು ತಿಳಿಯುವುದೇ?
ಅಧಿಕಾರದ ಪ್ರಲೋಭನೆಗೆ ಕೊಂಬಿನ ಲಾಭಿಗೆ ಬಲಿಯಾಗಿ
ತಿಲಾಂಜಲಿ ಇತ್ತರು ಗೆಳೆತನಕೆ

ಬಿಡರು ಬದುಕಲು ನೆಮ್ಮದಿಯ ಕೆಡಿಸಿ
ಅಗುಳಿ ಜಡಿದುಕೊಂಡಿಹರು ತಮ್ಮ ಹೃದಯಕೆ
ಎಂದೆಂದೂ ಮನದ ಕದ ತೆರೆಯದವರು
ಪಾತಕಿಗಳು ಒಂದುಗೂಡುವರು
ಚಟ್ಟದಲ್ಲಾದರೂ ಸಿಕ್ಕೀತೆಂದು ಪಟ್ಟ

ಬೆಳಕಿನಿಂದ ದೂರ ದೂರ ಸರಿದಷ್ಟು
ನಮ್ಮ ನೆರಳು ಬೆಳೆಯುತ್ತೆ ಉದ್ದುದ್ದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಂದಿನ ಸ್ಪೆಷಲ್
Next post ಮಾಯೆ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…