ಕಂಡೇನೆ ಹೊಸತು ಕಂಡೇನೆ

ಕಂಡೇನ ಹೊಸತು ಕಂಡೇನೆ ನಾ
ಆಂಜೇನೆ ಬೆವತು ಓಡೇನೆ ||ಪಲ್ಲ||

ಟ್ಯೂಬ್ಲೈಟು ಒಡದೈತೆ ಪುಡಿಪುಡಿ ಆಗೈತೆ
ದೀಪಾವು ಆರಿಲ್ಲ ಬೆಳಗೇತೆ
ಬಲ್ಬೊಂದು ಬಿದೈತೆ ಫಡ್ಡೆಂದು ಹಾರೈತೆ
ಬಲ್ಬೀನ ದೀಪಾವು ಉಳದೇತೆ ||೧||

ಚಿಮಣೀಯ ಹಚ್ಚೇನೆ ಬಿರುಗಾಳಿ ಬೀಸೇತೆ
ಚಿಮಣೀಯು ಆರಿಲ್ಲ ಬೆಳಗೇತೆ
ಮೊಂಬತ್ತಿ ಹಚ್ಚೇನೆ ಫ್ಯಾನೀಗಿ ಹಿಡಿದೇನೆ
ಮೊಂಬತ್ತಿ ದೀಪಾವು ಉಳದೇತೆ ||೨||

ವಲಿಯಾಗ ಹಿಡಿಕೆಂಡ ಕೊಡನೀರು ಸುರುವೇನೆ
ನಿಗಿನಿಗಿ ನಿಗಿಕೆಂಡ ಉರದೇತೆ
ಹೊಸಹಣ್ಣು ಕಂಡೇನೆ ಗಸಗಸ ಹೆಚ್ಚೇನೆ
ಹೊಸಹಣ್ಣು ಇದ್ದಾಂಗ ಉಳದೀತೆ ||೩||

ಕೆಂಡಾವು ಯಾರವ್ವ ಕೊಡಪಾನ ಯಾರವ್ವ
ಒಡಪಾವ ಬಿಡಿಸವ್ವ ಜಾಣಮಲ್ಲಿ
ದೀಪಾವು ಯಾರವ್ವ ಬಿರುಗಾಳಿ ಯಾರವ್ವ
ಒಡಪಾವ ಒಡೆಯವ್ವ ಜಾಣಕಲ್ಲಿ ||೪||
*****
ಟ್ಯೂಬ್‍ಲೈಟು, ಬಲ್ಬು, ಚಿಮಣಿ, ಮೋಂಬತ್ತಿ, ವಲಿಗಳು ದೇಹದ ಸಂಕೇತ; ಅವುಗಳ ಜ್ಯೋತಿ ಆತ್ಮಜ್ಯೋತಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೂರ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೦

ಸಣ್ಣ ಕತೆ

 • ಯಾರು ಹೊಣೆ?

  "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

 • ಮತ್ತೆ ಬಂದ ವಸಂತ

  ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

 • ಕಲ್ಪನಾ

  ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

 • ಆವಲಹಳ್ಳಿಯಲ್ಲಿ ಸಭೆ

  ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…